ಚಿಕ್ಕಬಳ್ಳಾಪುರ: ಮೆಣಸಿನಕಾಯಿ ಮುಖ್ಯವಾದ ತರಕಾರಿ ಹಾಗೂ ಸಾಂಬಾರು ಬೆಳೆಗಳಲ್ಲಿ ಒಂದಾಗಿದೆ. ಇದನ್ನು ಖುಷ್ಕಿ ಹಾಗೂ ನೀರಾವರಿ ಎರಡರಲ್ಲೂ ಬೆಳೆಯಲಾಗುತ್ತದೆ. ಮೆಣಸಿನಕಾಯಿ, ದೇಹಪೋಷಣೆಗೆ ಬೇಕಾದ ‘ಎ’ ಮತ್ತು ‘ಸಿ’ ಅನ್ನಾಂಗಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಬಲ್ಲದು.
ಮೆಣಸಿನಕಾಯಿಯನ್ನು ಮಳೆಕಾಲದಲ್ಲೂ ಸಹ ಬೆಳೆಯಲಾಗುತ್ತಿದ್ದು ಜೂನ್-ಜುಲೈ ತಿಂಗಳಿನಲ್ಲಿ ಕಲೆ ನಿಯಂತ್ರಣ ಮಾಡಿ 35 ಕೆ,ಜಿ ಸಾರಜನಕವನ್ನು ಪ್ರತಿ ಹೆಕ್ಟೇರಿಗೆ ಹಾಕಿ ಮಣ್ಣಿನ ಸವಕಳಿಯನ್ನು ಮಾಡುವುದು, ಹಾಗೂ ಮಳೆ ಹೆಚ್ಚಿರುವುದರಿಂದ ಶಿಲೀಂದ್ರ ಹೆಚ್ಚಾಗಿ ಕಾಯಿ ಕೊಳೆ ರೋಗ ಬರುವ ಸಾಧ್ಯತೆ ಹೆಚ್ಚಿದ್ದು 0.025% ಮೆಟಾಸಿಸ್ಟಾಕ್ಸಿನ್ ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ 15 ದಿನಗಳ ಅಂತರದಲ್ಲಿ ಸಿಂಪಡಿಸುವುದು. ಮತ್ತು ತುದಿ ಒಣಗುವ ರೋಗದ ನಿಯಂತ್ರಣಕ್ಕೆ ಡಿ.ಎಂ-45@2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:-8971536448 ಹಾಗೂ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೆಂದ್ರ ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಅಥವಾ ತಾಲ್ಲೂಕಿನ ತೋಟಗಾರಿಕೆ ಕಛೇರಿ ಸಂಪರ್ಕಿಸಬಹುದು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….