ಬೆಂ.ಗ್ರಾ.ಜಿಲ್ಲೆ: ತುಮಕೂರು ವಿವಿಯ ಎಂ ಎಸ್ ಸಿ ಪ್ರಾಣಿ ಶಾಸ್ತ್ರ ವಿಭಾಗದಲ್ಲಿ ರ್ಯಾಂಕ್ ಪಡೆದು, ಚಿನ್ನದ ಪದಕ ಗಳಿಸಿದ ನೆಲಮಂಗಲ ತಾಲೂಕಿನ ಬಿದಲೂರು ಗ್ರಾಮದ ಪವಿತ್ರ ಅವರ ಸಾಧನೆಗೆ ಕಳಲುಘಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಲ್ಯಾಪ್ ಟಾಪ್ ನೀಡಿ ಪ್ರೋತ್ಸಾಹಿಸಲಾಗಿದೆ.
ಗ್ರಾಮಪಂಚಾಯಿತಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಧ್ಯಕ್ಷ ಜಿ.ಆರ್.ಲೋಕೇಶ್, ಪಿಡಿಒ ಸಿ.ಗೀತಾಮಣಿ ಹಾಗೂ ಸದಸ್ಯರು ಲ್ಯಾಪ್ಟಾಪ್ ವಿತರಿಸಿದರು.
ಈ ವೇಳೆ ಗ್ರಾಪಂ ಸದಸ್ಯರಾದ ಗಿರೀಶ್, ನರಸಿಂಹಮೂರ್ತಿ, ಶ್ರೀನಿವಾಸ್, ಹರೀಶ್, ಸೌಮ್ಯ, ಮಮತಾ, ರಂಗೇಗೌಡ, ಪವಿತ್ರ ಪೋಷಕರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….