ದೊಡ್ಡಬಳ್ಳಾಪುರ: ಕರುನಾಡ ವಿಜಯ ಸೇನೆ ಜಿಲ್ಲಾ ಘಟಕದ ವತಿಯಿಂದ ಸರ್ಕಾರಿ ಶಾಲೆಗಳಿಗೆ ಬಣ್ಣದ ಉತ್ಸವ ಹಾಗೂ ಬಡ ಕಾರ್ಮಿಕರಿಗೆ ದಿನಸಿ ಹಾಗೂ ತರಕಾರಿ ಕಿಟ್‍ಗಳ ವಿತರಣಾ ಕಾರ್ಯಕ್ರಮ ನಗರದ ಮಾರ್ಕೆಟ್ ಚೌಕ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಚಿತ್ರನಟಿ ಪ್ರಣೀತಾ ಸುಭಾಷ್ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಸಂಘ ಸಂಸ್ಥೆಗಳು ಮುಂದಾಗಬೇಕಿದ್ದು, ಕರುನಾಡ ವಿಜಯ ಸೇನೆಯ ಈ ಕಾರ್ಯಕ್ರಮ ಅಭಿನಂದನೀಯ. ಎರಡು ವರ್ಷಗಳ ಹಿಂದೆ ಹಾಸನದ ಸರ್ಕಾರಿ ಶಾಲೆಗಳಿಗೆ ವಿವಿಧ ಪರಿಕರಗಳನ್ನು ನೀಡಿದ್ದನ್ನು ಸ್ಮರಿಸಿದ ಅವರು, ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದರು.
ಕರುನಾಡ ವಿಜಯ ಸೇನೆ ರಾಜ್ಯ ಅಧ್ಯಕ್ಷರಾದ ಎಚ್.ಎನ್.ದೀಪಕ್ ಮಾತನಾಡಿ, ಕರುನಾಡ ವಿಜಯ ಸೇನೆ ವತಿಯಿಂದ ರಾಜ್ಯದಾದ್ಯಂತ 500 ಶಾಲೆಗಳಿಗೆ ಬಣ್ಣ ಬಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದೊಡ್ಡಬಳ್ಳಾಪುರದ ಈ ಶಾಲೆ 100ನೇಯದ್ದಾಗಿದೆ.
ಚಿತ್ರನಟಿ ಪ್ರಣೀತಾ ಸುಭಾಷ್ ಅವರು ಕೋವಿಡ್ ಸಂಕಷ್ಟದ ಸಮಯದಲ್ಲಿ ಚಿತ್ರರಂಗದ ಕಾರ್ಮಿಕರಿಗೆ ಅವರು ನೀಡಿದ್ದ ನೆರವು ಸ್ಮರಣೀಯವಾಗಿದ್ದು, ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲು ಮುಖ್ಯ ಕಾರಣವಾಗಿದೆ. ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ನಮಗೆ ಉತ್ಸಾಹ ತಂದಿದ್ದು, ಸಂಘಟನೆಯಿಂದ ವಿವಿಧ ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪಂಚಮಿ ಚಾರಿಟಬಲ್ ಟ್ರಸ್ಟ್‌ನ ಪ್ರಸನ್ನ ಗೌಡ, ಕರುನಾಡ ವಿಜಯ ಸೇನೆಯ ರಾಜ್ಯ ಕಾರ್ಮಿಕ ಘಟಕ ಅಧ್ಯಕ್ಷ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೆ.ಲ.ರಾಮ್ ಪ್ರಸಾದ್ ಗೌಡ, ರಾಜ್ಯ ಮುಖಂಡ ನಂಜಪ್ಪ, ಜಿಲ್ಲಾ ಮುಖಂಡರಾದ ಟಿ.ಎನ್.ಪ್ರದೀಪ್ ,ದೀಪು ಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕವಿತ , ತಾಲೂಕು ಅದ್ಯಕ್ಷ ಎಲೆ ಮಂಜುನಾಥ, ರಾಜ್ಯ ಯುವ ಅಧ್ಯಕ್ಷ ಆರ್.ಎಸ್.ಮಹೇಶ್,ಸಂಘಟನಾ ಕಾರ್ಯದರ್ಶಿ ಮೋಹನ್, ರಾಜ್ಯ ವಕ್ತಾರರಾದ ವತ್ಸಲ, ಶಾಲೆಯ ಮುಖ್ಯ ಶಿಕ್ಷಕ ಸಿ.ಜಗದೀಶಯ್ಯ ಮತ್ತಿತರರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..