ದೊಡ್ಡಬಳ್ಳಾಪುರ: ಬಾಶೇಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಪ್ಲಾಸ್ಟಿಕ್ ವಸ್ತುವಗಳನ್ನು ಸಂಗ್ರಹಿಸಿಡಲಾಗಿದ್ದ ಎಸ್.ವಿ.ಎಸ್ ಹೈಟೆಕ್ ಕಾರ್ಗೋ ಇಂಡಸ್ಟ್ರೀಸ್ ಕಾರ್ಖಾನೆಯ ಗೋದಾಮಿಗೆ ಶನಿವಾರ ಸಂಜೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.
ಬಾಶೆಟ್ಟಿಹಳ್ಳಿಯಲ್ಲಿಯೇ ತಾಲ್ಲೂಕಿನ ಅಗ್ನಿಶಾಮಕ ಠಾಣೆ ಇದೆ. ಆದರೆ ಶನಿವಾರ ಇಲ್ಲಿನ ಅಗ್ನಿಶಾಮಕ ವಾಹನ ಬೇರೆಡೆಗೆ ಹೋಗಿದ್ದರಿಂದ ಯಲಹಂಕ ಅಗ್ನಿಶಾಮಕ ಠಾಣೆಯಿಂದ ಲಾರಿ ಬಂದು ಬೆಂಕಿ ನಂದಿಸುವುದು ತಡವಾಗಿದ್ದರಿಂದ ಗೋದಾಮಿನಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಹೋಗಿವೆ ಎನ್ನಲಾಗಿದೆ.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ 1ನೇ ಹತಂದಲ್ಲಿದ್ದ ಬಹುತೇಕ ಕೈಗಾರಿಕೆಗಳು 2 ಮತ್ತು 3ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿನ ವಿಶಾಲವಾದ ಜಾಗಗಳಿಗೆ ಸ್ಥಳಾಂತರವಾಗುತ್ತಿವೆ. ಹೀಗಾಗಿ ಇಲ್ಲಿನ ಬಹುತೇಕ ಕೈಗಾರಿಕೆಗಳವರು ಹಳೇಯ ಕಟ್ಟಡಗಳನ್ನು ಗೋದಾಮುಗಳಾಗಿ ಬಳಸುತ್ತಿದ್ದಾರೆ. ಆದರೆ ಅಗ್ನಿ ಅನಾಹುತಗಳು ನಡೆದಾಗ ಬೆಂಕಿ ನಂದಿಸುವ ಯಾವುದೇ ಮುನ್ನೆಚ್ಚರಿಕೆಗಲು ಇಲ್ಲದಾಗಿವೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ಶೇರ್ ಮಾಡಿ.