ಭಾರತದ ತ್ರಿವರ್ಣ ಧ್ವಜ ಬಳಸುವ ಕ್ರಮ: ಜನ ಸಾಮಾನ್ಯರಿಗೆ ಕಾನೂನು ಅರಿವು

ರಾಷ್ಟ್ರಧ್ವಜ ಒಂದು ರಾಷ್ಟ್ರವನ್ನು ಪ್ರತಿನಿಧಿಸುವ ಸಾಂಕೇತಿಕ ಧ್ವಜ. ರಾಷ್ಟ್ರಧ್ವಜವನ್ನು ಸರ್ಕಾರದಿಂದ ಹಾರಿಸಲಾಗುತ್ತದೆ, ಆದರೆ ಸಾಮಾನ್ಯವಾಗಿ ದೇಶದ ನಾಗರಿಕರು ಸಹಾ ಹಾರಿಸಬಹುದು. ರಾಷ್ಟ್ರೀಯ ಧ್ವಜವನ್ನು ಅದರ ಬಣ್ಣಗಳು ಮತ್ತು ಸಂಕೇತಗಳ ನಿರ್ದಿಷ್ಟ ಅರ್ಥಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.

ನಮ್ಮ ದೇಶಾದ್ಯಂತ 74ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಸಿದ್ಧತೆ ಕರೊನಾ ಮೂರನೇ ಅಲೆಯ ಆತಂಕದ ನಡುವೆಯೂ ಅದ್ದೂರಿಯಾಗಿ ನಡೆದಿದೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಪ್ರಮುಖ ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತದೆ. ಇನ್ನು ಸೈಕಲ್, ಬೈಕ್, ಕಾರು, ಆಟೊ, ವಾಹನಗಳ ಮೇಲೆ, ಮನೆಯ ತಾರಸಿಗಳ ಮೇಲೆ ತ್ರಿವರ್ಣ ಧ್ವಜಗಳು ರಾರಾಜಿಸುತ್ತವೆ. 

ದೇಶಪ್ರೇಮವನ್ನು ತೋರಿಸುವ ಉತ್ಸಾಹದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಾಗ ಪಾಲಿಸಬೇಕಾದ ನಿಯಮಗಳನ್ನು ಅರಿವಿಲ್ಲದೇ ಗಾಳಿಗೆ ತೂರುತ್ತಿದ್ದೇವೆ. ರಾಷ್ಟ್ರಧ್ವಜಕ್ಕೆ ಅಗೌರವ, ಅಪಮಾನ ಆಗದಂತೆ ನೋಡಿಕೊಳ್ಳಲು ಈ ಕೆಳಗಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯ.

ದೇಶದ ಅಸ್ಮಿತೆಯ ಪ್ರತೀಕವಿರುವ ರಾಷ್ಟ್ರಧ್ವಜವನ್ನು ಹಾರಿಸುವಾಗ ಯಾವುದೇ ಅಗೌರವ ಉಂಟಾಗಬಾರದು ಎಂಬ ಕಾರಣಕ್ಕೆ ಕೇಂದ್ರೀಯ ಗೃಹ ಮಂತ್ರಾಲಯದವತಿಯಿಂದ ಭಾರತೀಯ ರಾಷ್ಟ್ರಧ್ವಜ ಸಂಹಿತೆ ಮಾಡಲಾಗಿದೆ.

ಲಾಂಛನ ಮತ್ತು ಅಭಿದಾನ (ಅಸಮರ್ಪಕ ಬಳಕೆಯ ತಡೆ) ಕಾಯ್ದೆ-1950 ಮತ್ತು ರಾಷ್ಟ್ರ ಘನತೆಯೆಡೆಗಿನ ಅಪಮಾನ ತಡೆ ಕಾಯ್ದೆ-1971ಕ್ಕೆ ಅನುಗುಣವಾಗಿ ಭಾರತದ ರಾಷ್ಟ್ರಧ್ವಜ ಒಂದು ರಾಷ್ಟ್ರವನ್ನು ಪ್ರತಿನಿಧಿಸುವ ಸಾಂಕೇತಿಕ ಧ್ವಜ.

ರಾಷ್ಟ್ರಧ್ವಜವನ್ನು ಸರ್ಕಾರದಿಂದ ಹಾರಿಸಲಾಗುತ್ತದೆ. ಆದರೆ ಸಾಮಾನ್ಯವಾಗಿ ದೇಶದ ನಾಗರಿಕರು ಕೂಡ ಹಾರಿಸಬಹುದು. ರಾಷ್ಟ್ರೀಯ ಧ್ವಜವನ್ನು ಅದರ ಬಣ್ಣಗಳು ಮತ್ತು ಸಂಕೇತಗಳ ನಿರ್ದಿಷ್ಟ ಅರ್ಥಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಧ್ವಜ ಸಂಹಿತೆಗನುಸಾರ, ರಾಷ್ಟ್ರೀಯ ಧ್ವಜವನ್ನು ಹಾರಿಸಿದಾಗ ಅದಕ್ಕೆ ಸನ್ಮಾನ ಪೂರ್ವಕವಾಗಿ ಉಚ್ಛ ಸ್ಥಾನವನ್ನು ನೀಡಬೇಕು. ಅದು ಎಲ್ಲರಿಗೂ ಕಾಣಿಸುವ ರೀತಿ ಸ್ಥಳವನ್ನು ಆಯ್ಕೆಮಾಡಿಕೊಂಡು ಅಲ್ಲಿ ಧ್ವಜವನ್ನು ಹಾರಿಸಬೇಕು. ಸೂರ್ಯಾಸ್ತವಾಗುವುದರೊಳಗೆ ಧ್ವಜಾವರೋಹಣ (ಇಳಿಸುವುದು) ಮಾಡಬೇಕು

ರಾಷ್ಟ್ರಧ್ವಜವನ್ನು ಯಾವಾಗಲೂ ಸ್ಫೂರ್ತಿಯಿಂದ ಏರಿಸಬೇಕು ಮತ್ತು ಗೌರವದಿಂದ ಕೆಳಗಿಳಿಸಬೇಕು.ಏರಿಸುವಾಗ ಮತ್ತು ಕೆಳಗಿಳಿಸುವಾಗ ತುತ್ತೂರಿಯನ್ನು ಊದಲೇಬೇಕು.  ಕಟ್ಟಡದ ಕಿಟಕಿ, ಬಾಲ್ಕನಿ, ಮನೆ ಮೇಲೆ ಅಥವಾ ಅಡ್ಡವಾಗಿ ಹಾರಿಸುವಾಗ ಧ್ವಜದಲ್ಲಿರುವ ಕೇಸರಿ ಬಣ್ಣದ ಪಟ್ಟಿಯು ಮೇಲಿರಬೇಕು.

ಧ್ವಜಾರೋಹಣ ಮಾಡಿದವರು ಧ್ವಜಸ್ತಂಭದ ಬಲಭಾಗದಲ್ಲಿ ಸಭಿಕರ ಕಡೆಗೆ ಮುಖಮಾಡಿ ನಿಲ್ಲಬೇಕು. ವೇದಿಕೆಯ ಮೇಲೆ ಬಳಸುವಂತಿದ್ದಲ್ಲಿ ಸಭಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ಧ್ವಜಕೋಲಿನಿಂದ ಅದನ್ನು ಹಾರಿಸಬೇಕು.

ಯಾವುದೇ ಮೆರವಣಿಗೆಯ ವೇಳೆ ಅಥವಾ ಪರೇಡಿನ ವೇಳೆ ವ್ಯಕ್ತಿಯ ಬಲಗೈಯಲ್ಲಿ ಧ್ವಜ ಇರಬೇಕು. ಇತರ ಧ್ವಜಗಳಿದ್ದರೆ ರಾಷ್ಟ್ರಧ್ವಜವು ಮಧ್ಯದಲ್ಲಿರಬೇಕು. ಅಲ್ಲದೇ, ಇತರ ಧ್ವಜ ಹಾಗೂ ಪತಾಕೆಗಳನ್ನು ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಹಾರಿಸಬಾರದು. ಬೇರೆ ದೇಶದ ಧ್ವಜಗಳಿದ್ದರೆ ಅವು ದೇಶದ ಧ್ವಜದ ಎಡಭಾಗದಲ್ಲೇ ಇರಬೇಕು.

ಹರಿದ, ಮುದ್ದೆಯಾದ ಧ್ವಜದ ಆರೋಹಣ ಮಾಡುವಂತಿಲ್ಲ, ಪ್ರದರ್ಶಿಸುವಂತಿಲ್ಲ ಅಲ್ಲದೇ ಅದನ್ನು ಸುಡುವಂತಿಲ್ಲ. ಯಾವುದೇ ವ್ಯಕ್ತಿಗೆ ಅಥವಾ ವಸ್ತುವಿಗೆ ವಂದಿಸುವಾಗ ಧ್ವಜವನ್ನು ಭೂಮಿಯ ದಿಕ್ಕಿನೆಡೆಗೆ ಬಗ್ಗಿಸಬಾರದು. ಅಂತೆಯೇ ಬಲವಂತವಾಗಿ ಧ್ವಜಕ್ಕೆ ಮಣ್ಣು ಹಾಗೂ ನೀರಿನ ಸ್ಪರ್ಶವಾಗಬಾರದು. ವಾಹನದ ಮೇಲೆ ಧ್ವಜವನ್ನು ಹಾರಿಸುವಾಗ ವಾಹನದ ಬ್ಯಾನೆಟಿನ ಹಾರಿಸಬೇಕು ಎಂದು ಸಂಹಿತೆ ತಿಳಿಸುತ್ತದೆ.

ಕೇಸರಿ ಪಟ್ಟಿಯು ಕೆಳಗೆ ಬರುವಂತೆ ಧ್ವಜಾರೋಹಣ ಮಾಡಬಾರದು. ಧ್ವಜಾರೋಹಣ ಮಾಡುವಾಗ ಹರಿಯದಂತೆ ಕಟ್ಟಬೇಕು.

ಅಲಂಕಾರಕ್ಕಾಗಿ, ಮನೆಯ ಪರದೆಗಾಗಿ ಉಪಯೋಗಿಸಬಾರದು ಮತ್ತು ಧ್ವಜದ ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಅಂತೆಯೇ ರಾಷ್ಟ್ರಧ್ವಜವನ್ನು ಕರವಸ್ತ್ರದ ಮೇಲೆ ಬಿಡಿಸಬಾರದು. ಧ್ವಜದ ಮೇಲೆ ಯಾವುದೇ ಬರವಣಿಗೆ, ಜಾಹೀರಾತು ಇರಬಾರದು. ಅಂತೆಯೇ ಧ್ವಜಸ್ತಂಭದ ಮೇಲೆಯೂ ಯಾವುದೇ ಜಾಹೀರಾತು ಹಾಕಬಾರದು.

ಕೇವಲ ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ್ಯ ದಿನದಂದು ಧ್ವಜದಲ್ಲಿ ಹೂವು, ಹೂವಿನ ಎಸಳನ್ನು ಕಟ್ಟಿ ಧ್ವಜಾರೋಹಣವನ್ನು ಮಾಡಬೇಕು. ರಾಷ್ಟ್ರಧ್ವಜವನ್ನು ಏರಿಸುವಾಗ ಅಥವಾ ಇಳಿಸುವಾಗ ಉಪಸ್ಥಿತರು ಕವಾಯತಿನ ‘ಅಟೆಂನ್ಶನ್‌’ (ಸಾವಧಾನ) ಸ್ಥಿತಿಯಲ್ಲಿರಬೇಕು.

ಧ್ವಜಾರೋಹಣವಾದಾಗ ಸಮವಸ್ತ್ರ ಧರಿಸಿರುವ ಸರ್ಕಾರಿ ಅಧಿಕಾರಿಗಳು ಧ್ವಜಕ್ಕೆ ಸಲ್ಯೂಟ್‌ (ವಂದನೆ) ಮಾಡಬೇಕು. ಧ್ವಜವು ಸೈನ್ಯದಳದ ಸೈನಿಕನ ಕೈಯಲ್ಲಿದ್ದರೆ ಆತ ಸಾವಧಾನ ಸ್ಥಿತಿಯಲ್ಲಿ ನಿಂತುಕೊಳ್ಳುವನು. ಪರೇಡ್‌ ವೇಳೆ ಹತ್ತಿರದಿಂದ ಧ್ವಜವು ಹೋಗುತ್ತಿರುವಾಗ ಸರ್ಕಾರಿ ಅಧಿಕಾರಿಗಳು ಅದಕ್ಕೆ ವಂದನೆ ಸಲ್ಲಿಸಬೇಕು.

ಧ್ವಜದ ದುರುಪಯೋಗವನ್ನು ತಡೆಯಲು ಸ್ಪಷ್ಟ ನಿಲುವನ್ನು ಹೊಂದಲಾಗಿದೆ. ಅದರಂತೆ ರಾಜಕೀಯ ವ್ಯಕ್ತಿ, ಕೇಂದ್ರೀಯ ಸೈನ್ಯ ದಳಕ್ಕೆ ಸಂಬಂಧಿತ ವ್ಯಕ್ತಿಯ ಅಂತಿಮ ಯಾತ್ರೆಯ ಹೊರತು ಬೇರೆ ಯಾವ ಸಂದರ್ಭದಲ್ಲಿಯೂ ರಾಷ್ಟ್ರಧ್ವಜವನ್ನು ಉಪಯೋಗಿಸಬಾರದು ಎಂದು ಧ್ವಜ ಸಂಹಿತೆ ಉಲ್ಲೇಖಿಸಿದೆ. @ ಟಿ.ಕೆ.ಹನುಮಂತರಾಜು, ವಕೀಲರು, 9916186002

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="110970"]
ಬೀದಿನಾಯಿಗಳಿಗೆ ಬಿರಿಯಾನಿ ಯೋಜನೆ ಲೂಟಿ ಮಾಡುವ ಉದ್ದೇಶ: ಆರ್‌.ಅಶೋಕ

ಬೀದಿನಾಯಿಗಳಿಗೆ ಬಿರಿಯಾನಿ ಯೋಜನೆ ಲೂಟಿ ಮಾಡುವ ಉದ್ದೇಶ: ಆರ್‌.ಅಶೋಕ

ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ. ಇದು ಹಣ ಕೊಳ್ಳೆ ಹೊಡೆಯುವ ಸ್ಕೀಮ್‌: ಆರ್‌.ಅಶೋಕ (R. Ashoka)

[ccc_my_favorite_select_button post_id="111019"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ದೊಡ್ಡಬಳ್ಳಾಪುರ: ಲಾರಿಗೆ ಡಿಕ್ಕಿ.. ಬೊಲೆರೋ.. ವಾಹನ ಚಾಲಕ ಸಾವು..!

ದೊಡ್ಡಬಳ್ಳಾಪುರ: ಲಾರಿಗೆ ಡಿಕ್ಕಿ.. ಬೊಲೆರೋ.. ವಾಹನ ಚಾಲಕ ಸಾವು..!

ನಿಂತಿದ್ದ ಲಾರಿಗೆ ಹಿಂದಿನ ಡಿಕ್ಕಿ ಹೊಡೆದ ಪರಿಣಾಮ ಬೊಲೆರೋ ಪಿಕಪ್ ವಾಹನ ಚಾಲಕ ಸಾವನಪ್ಪಿರುವ ಘಟನೆ (Accident)

[ccc_my_favorite_select_button post_id="111021"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!