ದೊಡ್ಡಬಳ್ಳಾಪುರ: 2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಶುಭಮಂಗಳ ಪ್ರಕಟಿಸಿದ್ದಾರೆ.
ತಾಲೂಕಿನ ಮೆಳೇಕೋಟೆ ಕ್ರಾಸ್ ಬಳಿ ಇರುವ ಶ್ರೀ ಚಂದ್ರಶೇಖರನಾಥ ಸ್ವಾಮಿಜೀ ಆಂಗ್ಲ ಗ್ರಾಮಾಂತರ ಪ್ರೌಢಶಾಲೆ ಇಬ್ಬರು ಹಾಗೂ ನಗರದ ಕಾರ್ಮಲ್ ಜ್ಯೋತಿ ಆಂಗ್ಲ ಪ್ರೌಢಶಾಲೆಯ ಓರ್ವ ವಿದ್ಯಾರ್ಥಿನಿ ಸೇರಿ ತಾಲೂಕಿನ 3 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಗಮನ ಸೆಳೆದಿದ್ದಾರೆ.
ತಾಲೂಕಿನಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿ ಒಟ್ಟು 3604 ಮಂದಿ ನೊಂದಣಿ ಮಾಡಿಸಿದ್ದು, 3604 ಮಂದಿ ಉತೀರ್ಣರಾಗಿ ಶೇ.100ರಷ್ಟು “ಎ” ಶ್ರೇಣಿ ಫಲಿತಾಂಶ ಪಡೆದಿದೆ ಎಂದು ಶುಭಮಂಗಳ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..