ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ತುಳಸಿ ಹಬ್ಬವನ್ನು ಶ್ರದ್ಧಾಭಕ್ತಿ ಸಡಗರದಿಂದ ಆಚರಿಸಲಾಯಿತು.
ಆಚರಣೆಯ ಅಂಗವಾಗಿ ಮಹಿಳೆಯರು ಬೃಂದಾವನವನ್ನು ತಳಿರು ತೋರಣಗಳಿಂದ ವಿಶೇಷವಾಗಿ ಸಿಂಗರಿಸಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ತುಳಿಸಿ ಗಿಡದೊಂದಿಗೆ ಬೆಟ್ಟದ ನಲ್ಲಿಕಾಯಿಯ ರೆಂಬೆಯನ್ನು ಇಟ್ಟು, ಕೃಷ್ಣನ ಮೂರ್ತಿ ಅಥವಾ ಫೋಟೋ ಪೂಜಿಸಿ ಮುತೈದೆಯರಿಗೆ ಹರಿಶಿಣ ಕುಂಕುಮ ನೀಡುವುದು ಈ ಆಚರಣೆಯ ವೈಶಿಷ್ಟ್ಯವಾಗಿದೆ.
ಹಿಂದೂಗಳ ಮನೆಯಲ್ಲಿ ಸಾಮಾನ್ಯವಾಗಿ ತುಳಸಿ ಗಿಡವಿರುವುದು ವಾಡಿಕೆಯಾಗಿದ್ದು, ತುಳಸಿ ಗಿಡ ಐಶ್ವರ್ಯವನ್ನೂ, ಸಂತಸವನ್ನೂ ತರುತ್ತದೆ. ಅಕಾಲಿಕ ಮರಣ ತಡೆಯುತ್ತದೆ ಎನ್ನುವ ನಂಬಿಕೆಯಿದೆ. ಆಯುರ್ವೇದದಲ್ಲಿ ಪ್ರಮುಖ ಔಷಧ ಸಸ್ಯವೂ ಆಗಿರುವುದು ತುಳಸಿಯ ಮಹತ್ವವನ್ನು ಸಾರುತ್ತದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……