ದೊಡ್ಡಬಳ್ಳಾಪುರ (Doddaballapura): ಮಕರ ಸಂಕ್ರಾಂತಿ ಹಾಗೂ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ 18ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿಂದು ಬಣ್ಣ ಬಣ್ಣದ, ವಿವಿಧ ಪ್ರಾಕಾರಗಳ ಗಾಳಿಪಟಗಳನ್ನು ಹಾರಿಸಲಾಯಿತು.
ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಪದಾಧಿಕಾರಿಗಳು ತಿಪ್ಪಾಪುರ ರಸ್ತೆಯ ಮುನಿ ನಂಜಪ್ಪ ಜಮೀನಿನಲ್ಲಿ ಆಧುನಿಕ ಶೈಲಿ ಪಟಗಳು, ಸಾಂಪ್ರದಾಯಿಕ ಗಾಳಿ ಪುಟಗಳನ್ನು ಹಾರಿಸಿ ಸಂಭ್ರಮಿಸಿದರು.
ಈ ವೇಳೆ ಗಾಳಿಪಟ ಕಲಾ ಸಂಘದ ಅಧ್ಯಕ್ಷ ಎಲ್‌ಎನ್ ಶ್ರೀನಾಥ್, ಉಪಾಧ್ಯಕ್ಷ ಎಸ್ ಮುನಿರಾಜು, ಕಾರ್ಯದರ್ಶಿ ಎಎನ್ ಪ್ರಕಾಶ್, ಸಹಕಾರ್ಯದರ್ಶಿ ಜೆವಿ ಸುಬ್ರಹ್ಮಣ್ಯ, ಖಜಾಂಚಿ ಜಿಆರ್ ವಿಶ್ವನಾಥ್ ಮತ್ತು ಸಂಘದ ಸದಸ್ಯರುಗಳು ಇದ್ದರು.
