ಆರೂಢಿಯಲ್ಲಿ ಕಲಾವಿದರ ಸಂಘದಿಂದ ಸಾಂಸ್ಕೃತಿಕ ಕಲಾ ಜ್ಯೋತಿ ಕಾರ್ಯಕ್ರಮ

ದೊಡ್ಡಬಳ್ಳಾಪುರ: ನಮ್ಮ ಕಲೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮಗಳು ಪ್ರಮುಖ ಪಾತ್ರ ವಹಿಸಲಿದ್ದು, ಗ್ರಾಮಾಂತರ ಪ್ರದೇಶದಲ್ಲಿಯೂ ಸಾಂಸ್ಕೃತಿಕ ಕಲೆಗಳಿಗೆ ಉತ್ತಮ ವೇದಿಕೆಗಳನ್ನು ಕಲ್ಪಿಸಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ತಿಳಿಸಿದರು.

ತಾಲೂಕಿನ ಆರೂಢಿ ಗ್ರಾಮದ ಸಮುದಾಯ ಭವನದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆದ ಸಾಂಸ್ಕೃತಿಕ ಕಲಾ ಜ್ಯೋತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನಕ್ಷರಸ್ಥರು, ಗ್ರಾಮೀಣ ಜನರಿಂದ ರಚಿತವಾದ ಜನಪದ ಸಾಹಿತ್ಯದಲ್ಲಿ ಬದುಕಿನ ಮೌಲ್ಯಗಳು ಅಡಗಿವೆ. ಇದರಿಂದ ನಮ್ಮ ಪರಂಪರೆ ಉಳಿಯುತ್ತಿದೆ. ಆದರೆ ಇಂದು ರಂಗಕಲೆ ಹಾಗೂ ಜನಪದ ಕಲಾ ಪ್ರಕಾರಗಳಲ್ಲಿ ಯುವ ಪೀಳಿಗೆ ಭಾಗವಹಿಸುತ್ತಿರುವುದು ಕಡಿಮೆಯಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಮಾಸಾಶನ ಪಡೆಯುತ್ತಿರುವ ಕಲಾವಿದರು ದೊಡ್ಡಬಳ್ಳಾಪುರ ತಾಲೂಕಿನಲ್ಲಿದ್ದಾರೆ. ಇದಕ್ಕೆ ಕಲಾವಿದರ ಸಂಘ ನೆರವು ನೀಡುತ್ತಿರುವುದು ಶ್ಲಾಘನೀಯವಾಗಿದ್ದು, ಮಾಸಾಶನ ಹಾಗೂ ಕಲಾ ಉತ್ತೇಜನದ ಕಾರ್‍ಯಕ್ರಮಗಳ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಭೇಟಿ ಮಾಡುವಂತೆ ಕರೆ ನೀಡಿದರು.

ಸಹಕಾರ ಸಂಘಗಳ ನಿವೃತ್ತ ಜಂಟಿ ನಿಬಂಧಕ ಎಂ.ಡಿ.ನರಸಿಂಹಮೂರ್ತಿ ಮಾತನಾಡಿ, ತೊಗಲು ಬೊಂಬೆಯಾಟ, ಬಯಲಾಟ ಮೊದಲಾದ ಕಲಾಪ್ರಕಾರಗಳು ಇಂದು ನಶಿಸುತ್ತಿವೆ. ಮೊಬೈಲ್‌ಗೆ ದಾಸರಾಗಿರುವ ಇಂದಿನ ಪೀಳಿಗೆ ಹಿರಿಯರನ್ನು ಕಾಲಕ್ಕೆ ತಕ್ಕವರಲ್ಲ ಎಂದು ಜರಿಯುವುದು ಕಾಣುತ್ತಿದೆ. ಬೌದ್ದಿಕ ದಿವಾಳಿತನವಾದರೆ ನಮ್ಮ ವಿನಾಶ ಖಂಡಿತ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ಥಳೀಯರಾದ ಸಾಸಲು ಚಿನ್ನಮ್ಮ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಜನಪದ ಕಲಾವಿದರಾಗಿದ್ದು, ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ ಎಂದರು.

ಹಿರಿಯ ಕಲಾವಿದ ಹಾಗೂ ತಾಲೂಕು ಕಲಾವಿದರ ಸಂಘದ ಉಪಾಧ್ಯಕ್ಷ ಕೆ.ನರಸಿಂಹಯ್ಯ ಕಾರ್‍ಯಕ್ರಮ ಉದ್ಘಾಟಿಸಿ, ಕಲಾವಿದರಿಗೆ ಸೂಕ್ತ ಉತ್ತೇಜನ ನೀಡಬೇಕಿರುವುದು ಸಮುದಾಯದ ಹೊಣೆಯಾಗಿದೆ. ಪ್ರೋತ್ಸಾಹ ನೀಡಿದರೆ ಉತ್ತಮ ಕಲಾವಿದರು ರೂಪುಗೊಳ್ಳುತ್ತಾರೆ. ಗ್ರಾಮಗಳಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮಗಳ ಆಯೋಜನೆ ಮಾಡಲು ಅವಕಾಶ ನೀಡುವುದು ಸಂತಸ ತಂದಿದೆ ಎಂದರು.

ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಅದ್ಯಕ್ಷತೆ ವಹಿಸಿದ್ದರು.

ಕಾರ್‍ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ತಾಲೂಕು ಕಲಾವಿದರ ಸಂಘದ ಪ್ರಧಾನ ಕಾರ್‍ಯದರ್ಶಿ ಬಿ.ಚಂದ್ರಶೇಖರ್, ಗೌರವ ಅಧ್ಯಕ್ಷ ಎಸ್.ರಾಮಮೂರ್ತಿ. ಉಪಾಧ್ಯಕ್ಷರಾದ ಎಚ್.ಪ್ರಕಾಶ್ ರಾವ್, ಖಜಾಂಚಿ ಎಚ್.ಮುನಿಪಾಪಯ್ಯ, ಸಹ ಕಾರ್‍ಯದರ್ಶಿ ಎ.ಮಂಜುನಾಥ್, ಯಕ್ಷಗಾನ ಕಲಾವಿದ ಕೆ.ಸಿ.ನಾರಾಯಣ್, ಸಲಹಾ ಸಮಿತಿಯ ಎನ್.ವೆಂಕಟೇಶ್, ವೆಂಕಟರಾಜು, ಸಂಚಾಲಕ ಶ್ರೀನಿವಾಸ್, ನಿರ್ದೇಶಕರಾದ ಅಶ್ವತ್ಥನಾರಾಯಣ್, ಕೆ.ಎನ್.ತಮ್ಮಣ್ಣ, ಎನ್.ರವಿಕುಮಾರ್, ಗಂಗಮ್ಮ ಸೇರಿದಂತೆ ಕಲಾವಿದರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾರ್‍ಯಕ್ರಮದಲ್ಲಿ ತಾಲೂಕು ಕಲಾವಿದರ ಸಂಘದಿಂದ ಶಿವರಾಜ್ ನಿರ್ದೇಶನದ ಗೆದ್ದವರು ಯಾರು? ಸಾಮಾಜಿಕ ನಾಟಕ ನಡೆಯಿತು. ವಿವಿಧ ಕಲಾವಿದರಿಂದ ರಂಗಗೀತೆ, ಜನಪದ ಗೀತೆ, ಭಜನೆ, ಭಕ್ತಿಗೀತೆಗಳ ಗಾಯನ ನಡೆಯಿತು.

ರಾಜಕೀಯ

ಈ ಮುಂಚೆ ಅಮಾನತು ಆದರೂ ಶಾಸಕರಿಗೆ ಅರಿವು ಬಂದಿಲ್ಲ: ಸ್ಪೀಕರ್ ಯುಟಿ ಖಾದರ್ ಗರಂ

ಈ ಮುಂಚೆ ಅಮಾನತು ಆದರೂ ಶಾಸಕರಿಗೆ ಅರಿವು ಬಂದಿಲ್ಲ: ಸ್ಪೀಕರ್ ಯುಟಿ ಖಾದರ್

ಬೆಂಗಳೂರು: ಈ ಮುಂಚೆಯೇ ಸದನದಿಂದ ಅಮಾನತು ಆದರೂ ಶಾಸಕರಿಗೆ ತಮ್ಮ ತಪ್ಪಿನ ಅರಿವು ಬಂದಿಲ್ಲ. ಇಂತಹ ವರ್ತನೆ ಸರಿಯಾಗಬೇಕು. ಅವರಿಗೆ ಶಿಸ್ತು ಕಲಿಸುವ ಪ್ರಯತ್ನ ಇದಾಗಿದೆ ಎಂದು 18 ಶಾಸಕರ ಅಮಾನತು ಆದೇಶದ ಕುರಿತು

[ccc_my_favorite_select_button post_id="104452"]
2ನೇ ವಿಮಾನ ನಿಲ್ದಾಣ: ಮೂರು ಸ್ಥಳಗಳು ಇವೇ ನೋಡಿ.. ಪರಿಶೀಲನೆಗೆ ಕೇಂದ್ರ ತಂಡದ ಆಗಮನ

2ನೇ ವಿಮಾನ ನಿಲ್ದಾಣ: ಮೂರು ಸ್ಥಳಗಳು ಇವೇ ನೋಡಿ.. ಪರಿಶೀಲನೆಗೆ ಕೇಂದ್ರ ತಂಡದ

ಬೆಂಗಳೂರು: ರಾಜಧಾನಿಯಲ್ಲಿ 2ನೇ ಅಂತಾರಾಷ್ಟ್ರೀಯ ಹಸಿರು ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಆಖೈರು ಮಾಡಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ (MB Patila) ಶನಿವಾರ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮ

[ccc_my_favorite_select_button post_id="104458"]
ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಬೆಂಗಳೂರು; ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರನ್ನು ಭೇಟಿಯಾದರು. ಈ ವೇಳೆ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ

[ccc_my_favorite_select_button post_id="104024"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕಿಂಗ್ ಕೊಹ್ಲಿಗೆ ಗೆಳೆಯ ಎಬಿಡಿ ಕಿವಿಮಾತು

ಕಿಂಗ್ ಕೊಹ್ಲಿಗೆ ಗೆಳೆಯ ಎಬಿಡಿ ಕಿವಿಮಾತು

ಬೆಂಗಳೂರು: IPLಗೆ ಕ್ಷಣಗಣನೆ ಆಭವಾಗಿದ್ದು, ಕ್ರಿಕೆಟ್ ಜ್ವರ ವ್ಯಾಪಿಸುತ್ತಿದೆ. ಈ ನಡುವೆ ಆರ್‌ಸಿಬಿಯ ಮಾಜಿ ಆಟಗಾರ, ದಕ್ಷಿಣಆಫ್ರಿಕಾದ ಮೂಲದ ಎಬಿ.ಡಿ ವಿಲ್ಲಿಯರ್ಸ್ (ABD) ವಿರಾಟ್ ಕೊಹ್ಲಿಗೆ (Virat Kohli) ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ‘ವಿರಾಟ್

[ccc_my_favorite_select_button post_id="104303"]

ಫೆ.28 ರಂದು ಮಹಿಳಾ ಕ್ರೀಡಾಕೂಟ

[ccc_my_favorite_select_button post_id="103061"]

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]
ಕಾಶ್ಮೀರದ ಬಿಜೆಪಿ ನಾಯಕ ಆತ್ಮಹತ್ಯೆ

ಕಾಶ್ಮೀರದ ಬಿಜೆಪಿ ನಾಯಕ ಆತ್ಮಹತ್ಯೆ

ಶ್ರೀನಗರ: ಶಿಫಾರಸು-ಕಾಶ್ಮೀರದ ಮಾಜಿ ಶಾಸಕ, ಬಿಜೆಪಿ ಮುಖಂಡ ಫಕೀರ್ ಮೊಹಮ್ಮದ್ ಖಾನ್ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಅವರು ತುಳಸಿ ಭಾಗ್ ಸರಕಾರಿ ವಸತಿ ಗೃಹದ ಕೊಠಡಿಯಲ್ಲಿ ಗುರುವಾರ ಬೆಳಗ್ಗೆ ತಮ್ಮದೇ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡ ದ್ದಾರೆ ಎಂದು

[ccc_my_favorite_select_button post_id="104372"]
Doddaballapura: ಅಪರಿಚಿತ ವಾಹನ ಡಿಕ್ಕಿ.. ಜಿಂಕೆ ಸಾವು..!

Doddaballapura: ಅಪರಿಚಿತ ವಾಹನ ಡಿಕ್ಕಿ.. ಜಿಂಕೆ ಸಾವು..!

ದೊಡ್ಡಬಳ್ಳಾಪುರ (Doddaballapura): ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಜಿಂಕೆಯೊಂದು ಸ್ಥಳದಲ್ಲೇ ಸಾವನ್ನಪಿರುವ ಘಟನೆ ನೆಲಮಂಗಲ ರಸ್ತೆಯ ಆಕಾಶವಾಣಿ ಪ್ರಸಾರ ಕೇಂದ್ರ ಬಳಿ ಸಂಭವಿಸಿದೆ. ಶುಕ್ರವಾರ ರಾತ್ರಿ ಸುಮಾರು 4 ವರ್ಷ

[ccc_my_favorite_select_button post_id="104439"]

ಆರೋಗ್ಯ

ಸಿನಿಮಾ

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ತುಮಕೂರು: ಬೆಂಗಳೂರು ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಗೈರಾದ ಖ್ಯಾತ ನಟ, ನಟಿಯರ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು

[ccc_my_favorite_select_button post_id="103709"]
error: Content is protected !!