ಮಾನವೀಯ ಅಂತಃಕರಣದ ಪ್ರತೀಕವಾಗಿದ್ದರು ಡಾ.ಎಂ.ಎಂ.ಕಲಬುರ್ಗಿ: ನಾಡೋಜ ಗೊ.ರು.ಚನ್ನಬಸಪ್ಪ (goru channabasappa)

ಧಾರವಾಡ: ಕಲಬುರ್ಗಿ ಅವರ ಶ್ರೇಷ್ಠತೆ ಇರುವುದು ಕೇವಲ ಅವರು ಹಿರಿಯ ಸಂಶೋಧಕರು ಆಗಿದ್ದರು ಎಂಬುವುದಕ್ಕಲ್ಲ; ಅವರು ಸೃಜನಶೀಲ ಬರಹಗಾರರಾಗಿದ್ದರು ಎಂಬ ಕಾರಣಕ್ಕೂ ಅಲ್ಲ; ಅದಕ್ಕಿಂತ ಅವರಲ್ಲಿದ್ದ ಮಾನವೀಯ ಅಂಥಃಕರಣ ಎಂಬುದು ಅವರ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ. ನಾವು ಮಾಡುವಂತಹ ಕೆಲಸದಲ್ಲಿ ನಿಷ್ಠೆ ಇಲ್ಲದಿದ್ದರೆ ನಮ್ಮ ಬದುಕು ಶೃತಿ ಕೆಟ್ಟ ಸಂಗೀತವಾಗುತ್ತದೆ ಎಂದು ಹೇಳುತ್ತಿದ್ದರು. ಸಂಗೀತ ಮತ್ತು ಅಧ್ಯಯನದಲ್ಲಿ ಯಾವುದೇ ರೀತಿಯ ಅಡೆತಡೆಗಳು ಬರದಂತೆ ಎಚ್ಚರ ವಹಿಸಿದ ವ್ಯಕ್ತಿ ನಮ್ಮ ಕಲಬುರ್ಗಿಯವರು ಎಂದು ನಾಡೋಜ ಗೊ.ರು.ಚನ್ನಬಸಪ್ಪ (goru channabasappa) ಅವರು ಹೇಳಿದರು.

ಅವರು ಇಂದು ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾದ ಡಾ.ಎಂ.ಎಂ.ಕಲಬುರ್ಗಿ ಅವರ 86 ನೇ ಜನ್ಮ ದಿನಾಚರಣೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಗ್ರಂಥ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ ಡಾ.ಎಂ.ಎಂ.ಕಲಬುರ್ಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಕಲಬುರ್ಗಿ ಅವರು ಯಾವುದೇ ಕೊರತೆ, ಹಸಿವು, ನಿದ್ದೆಗಳ ಹಂಗಿಲ್ಲದೆ ಕೆಲಸ ಮಾಡುವ ವ್ಯಕ್ತಿ ಆಗಿದ್ದರು. ಸಾಮಾನ್ಯವಾಗಿ ನಾವು ಸಮಗ್ರ ಎಂಬ ಪದವನ್ನು ಬಳಸುತ್ತೇವೆ. ಸಮಗ್ರ ಅಂದರೆ ಪೂರ್ಣವಾಗಿದ್ದು, ಒಟ್ಟಾಗಿರುವುದು ಎಂಬ ಅರ್ಥ ಇದೆ. ಲೋಕವ್ಯವಹಾರದಲ್ಲಿ ಸಮಗ್ರ ನೋಟ, ಸಮಗ್ರ ವರದಿ, ಸಮಗ್ರ ವ್ಯಕ್ತಿತ್ವ ಎಂಬ ಇಂತಹ ಪದಗಳನ್ನು ಬಳಸುತ್ತೇವೆ. ವ್ಯಕ್ತಿಗತವಾಗಿ ಅನ್ವಯಿಸುವುದಾದರೆ ಅದು ನಮ್ಮ ನೆಚ್ಚಿನ ಸಾಹಿತಿಗಳಾದ ಡಾ.ಎಂ.ಎಂ ಕಲಬುರ್ಗಿ ಅವರಿಗೆ ಅನ್ವಯಿಸುತ್ತದೆ ಎಂದರು.

ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಅವರು ಕಲಬುರ್ಗಿ ಅವರ ಸಮಗ್ರ ಲೇಖನಗಳು ಪ್ರಕಟವಾಗಬೇಕು. ಸರಕಾರ ಕಲಬುರ್ಗಿ ಟ್ರಸ್ಟ್ ಸ್ಥಾಪಿಸಿದೆ, ಅವರ ಮನಸ್ಸಿನಲ್ಲಿ ಏನು ಇತ್ತೋ ಅದೆಲ್ಲಾ ಇಂದು ನೆರವೇರುತ್ತಿದೆ. ಕಲಬುರ್ಗಿ ಅವರು ತಮ್ಮ ಸಾಧನೆ, ಅವರು ನಡೆದು ಬಂದ ಬದುಕು, ಇದಾವುದರ ಬಗ್ಗೆಯೂ ಸಹ ಬರೆಯಲಿಲ್ಲ.

ಅವರು ಸಂಶೋಧನೆ ಸ್ತರಗಳ ಬಗ್ಗೆ ಬರೆದರು. ಮುಂದೆ ಬರುವಂತಹ ವಿದ್ಯಾರ್ಥಿಲೋಕಕ್ಕೆ ತಿಳುವಳಿಕೆ ಉಂಟಾಗಬೇಕು. ಸಂಶೋಧನೆ ಅಂದರೆ ಏನು?, ಸಂಶೋಧನೆಯ ಬಗ್ಗೆ ಯಾಕೆ ಆಸಕ್ತಿಯನ್ನು ಹೊಂದಬೇಕು, ಸಂಶೋಧನೆಯ ಸ್ವರೂಪ ಯಾವುದು ಎಂಬುದನ್ನು ತಿಳಿಸಿಕೊಡುವುದು ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡಿದರು.

ಡಾ.ಎಂ.ಎಂ.ಕಲಬುರ್ಗಿ ವಚನ ಸಂಗೀತ ಪ್ರಶಸ್ತಿ ಪುರಸ್ಕೃತ ಡಾ.ಶರಣಬಸಪ್ಪ ಮೇಡೆದಾರ ಅವರು ಮಾತನಾಡಿ, ಡಾ.ಎಂ.ಎಂ.ಕಲಬುರ್ಗಿ ಹೆಸರಿನ ಪ್ರಶಸ್ತಿ ಪಡೆದಿರುವುದಾಗಿ ತುಂಬಾ ಸಂತಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು ಶರಣರ ವಚನಗಳು ಮತ್ತು ಸಾಹಿತ್ಯವನ್ನು ಉತ್ತಮವಾಗಿ ನಿಮ್ಮ ಮುಂದೆ ಹಾಡುತ್ತೇನೆ. ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಸ್ವತಃ ನಾನೇ ಬರೆದು ಕಲಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ, ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ವೀರಣ್ಣ ರಾಜೂರ, ಉಮಾದೇವಿ ಎಂ. ಕಲಬುರ್ಗಿ ಉಪಸ್ಥಿತರಿದ್ದರು.

ಡಾ. ಎಂ ಎಂ ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಸದಸ್ಯ ಶಶಿಧರ ತೊಡಕರ ಅವರು ಅತಿಥಿ ಪರಿಚಯ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು.

ಡಾ.ಈರಣ್ಣ ಇಂಜಗನೇರಿ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ.ಎಂ.ಎಂ.ಲಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಸದಸ್ಯ ಡಾ.ಬಾಳಣ್ಣ ಶೀಗಿಹಳ್ಳಿ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯರು, ಗಣ್ಯವ್ಯಕ್ತಿಗಳು, ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ರಾಜಕೀಯ

ಬಿಜೆಪಿಯಲ್ಲಿ ಮುಗಿಯದ ಬಿಕ್ಕಟ್ಟು… ಶೀಘ್ರದಲ್ಲಿ ಕರ್ನಾಟಕದ ಜನತೆಗೆ ಶುಭಸುದ್ದಿ ಎಂದು ಯತ್ನಾಳ್ ಪೋಸ್ಟ್‌..!!

ಬಿಜೆಪಿಯಲ್ಲಿ ಮುಗಿಯದ ಬಿಕ್ಕಟ್ಟು… ಶೀಘ್ರದಲ್ಲಿ ಕರ್ನಾಟಕದ ಜನತೆಗೆ ಶುಭಸುದ್ದಿ ಎಂದು ಯತ್ನಾಳ್ ಪೋಸ್ಟ್‌..!!

ರಾಜ್ಯ ಬಿಜೆಪಿಯಲ್ಲಿ (BJP) ಬಣಬಡಿದಾಟ ದಿನೇದಿನೇ ತೀವ್ರಗೊಳ್ಳುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಗೊಂದಲ ಜಟಿಲ ವಾಗುತ್ತಿದೆ.

[ccc_my_favorite_select_button post_id="111173"]
ಕೆಎಸ್‌ಆರ್‌ಟಿಸಿಯ ವಿನೂತನ ಧ್ವನಿ ಸ್ಪಂದನೆ ಯೋಜನೆ ಚಾಲನೆ

ಕೆಎಸ್‌ಆರ್‌ಟಿಸಿಯ ವಿನೂತನ ಧ್ವನಿ ಸ್ಪಂದನೆ ಯೋಜನೆ ಚಾಲನೆ

ದೃಷ್ಟಿ ವಿಶೇಷ ಚೇತನರಿಗೆ KSRTC ಯ 200 ಬಸ್ಸುಗಳಲ್ಲಿ, ಅವರ ಆಯ್ಕೆಯ ಬಸ್ ಮಾರ್ಗವನ್ನು ಸೆಲೆಕ್ಟ್ ಮಾಡಲು ಧ್ವನಿ ಸ್ಪಂದನ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (RamalingaReddy)

[ccc_my_favorite_select_button post_id="111154"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಎಣ್ಣೆ ಪಾರ್ಟಿ.. ಮಾರಕಾಸ್ತ್ರಗಳಿಂದ ಹಲ್ಲೆ..!

ಎಣ್ಣೆ ಪಾರ್ಟಿ.. ಮಾರಕಾಸ್ತ್ರಗಳಿಂದ ಹಲ್ಲೆ..!

ಎಣ್ಣೆ ಪಾರ್ಟಿಯಲ್ಲಿ (Drinks party) ಜತೆಗೂಡಿದ ಸ್ನೇಹಿತರು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

[ccc_my_favorite_select_button post_id="111121"]
FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನಪ್ಪಿರುವ (Dies) ಘಟನೆ ದೊಡ್ಡಬಳ್ಳಾಪುರ- ರಾಜಾನುಕುಂಟೆ ನಡುವಿನ ***

[ccc_my_favorite_select_button post_id="111089"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!