ಶ್ರೀನಗರ: ಆಪರೇಷನ್ ಸಿಂದೂರದ ಬಳಿಕ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ನಿನ್ನೆ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಪಾಕ್ ದಾಳಿ ಮಾಡುವುದಿಲ್ಲ ಎಂದು ಭರವಸೆ ನೀಡಿದೆ, ಆ ಕಾರಣ ಕದನ ವಿರಾಮವಾಗಿದೆ, ಆದಾಗ್ಯೂ ತಂಟೆ ಮಾಡುದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು. ಆದರೆ ಅವರ ಎಚ್ಚರಿಕೆಯ ಬೆನ್ನಲ್ಲೇ ಪಾಕಿಸ್ತಾನ ಜಮ್ಮು-ಕಾಶ್ಮೀರದ ಸಾಂಬಾದಲ್ಲಿ ಡ್ರೋನ್ ದಾಳಿ ಮುಂದುವರೆಸಿದೆ ಎಂದು ವರದಿಯಾಗಿದೆ.
ಹೌದು ಮೋದಿ ಭಾಷಣದ ಕೆಲವೇ ನಿಮಿಷಗಳ ಬಳಿಕ ಸಾಂಬಾದಲ್ಲಿ ಭಾರತದ ವಾಯು ರಕ್ಷಣಾ ಪಡೆಗಳು ಪಾಕಿಸ್ತಾನಿ ಡ್ರೋನ್‌ಗಳನ್ನು ತಡೆಹಿಡಿಯುತ್ತಿದ್ದಂತೆ ಕೆಂಪು ಗೆರೆಗಳು ಮತ್ತು ಸ್ಫೋಟಗಳು ಕೇಳಿಬಂದವು ಎಂದು ಎಎನ್ಐ ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
#WATCH | J&K: Red streaks seen and explosions heard as India's air defence intercepts Pakistani drones amid blackout in Samba.
— ANI (@ANI) May 12, 2025
(Visuals deferred by unspecified time) pic.twitter.com/EyiBfKg6hs
ಜಮ್ಮು-ಕಾಶ್ಮೀರವಷ್ಟೇ ಅಲ್ಲದೇ ಕಥುವಾ, ಅಮೃತ್ ಸರಗಳಲ್ಲಿಯೂ ಪಾಕ್ ಡ್ರೋನ್ ಗಳು ಭಾರತದ ಮೇಲೆ ದಾಳಿಗೆ ಯತ್ನಿಸಿದ್ದು, ಭಾರತೀಯ ಸೇನೆ ಅವುಗಳನ್ನು ಸಮರ್ಥವಾಗಿ ಎದುರಿಸಿದೆ.
ಪ್ರಧಾನಿ ಮೋದಿ ಅವರ ಎಚ್ಚರಿಕೆಯ ಕೆಲವೇ ನಿಮಿಷಗಳಲ್ಲಿ ಪಾಕ್ ಉದ್ಧಟತನ ತೋರಿದ್ದು ಮತ್ತೆ ಭಾರತದ ಪ್ರದೇಶಗಳ ಮೇಲೆ ದಾಳಿಗೆ ಯತ್ನಿಸಿದೆ