ನವದೆಹಲಿ: ಪಾಕ್ ಸೆರೆ ಹಿಡಿದಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಕುಮಾರ್ ಶಾ (Purnam Kumar Shaw) ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.
ಇಂದು ಬೆಳಗ್ಗೆ 10.30 ರ ವೇಳೆಗೆ, ಕಾನ್‌ಸ್ಟೆಬಲ್ ಪೂರ್ಣಂ ಕುಮಾರ್ ಶಾ ಅವರನ್ನು ಪಾಕಿಸ್ತಾನದಿಂದ ಅಟ್ಟಾರಿ-ವಾಘಾ ಗಡಿಯಲ್ಲಿ ಬಿಎಸ್‌ಎಫ್ ವಾಪಸ್ ಕರೆದೊಯ್ದಿದೆ.
ಏಪ್ರಿಲ್ 23 ರಂದು ಫಿರೋಜ್‌ಪುರ ಸೆಕ್ಟರ್ ಪ್ರದೇಶದಲ್ಲಿ ಕಾರ್ಯಾಚರಣೆಯ ವೇಳೆ ಆಕಸ್ಮಿಕವಾಗಿ ಗಡಿ ದಾಟಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಕುಮಾರ್ ಶಾ ಅವರನ್ನು ಪಾಕಿಸ್ತಾನದ ಸೈನಿಕರು ಸೆರೆಹಿಡಿದಿದ್ದರು.
ಇದರ ಬೆನ್ನಲ್ಲೇ ಭಾರತ ನಡೆಸಿದ್ದ ಆಪರೇಷನ್ ಸಿಂಧೂರ್ ನಿಂದಾಗಿ ಪೂರ್ಣಂ ಕುಮಾರ್ ಶಾ ಬಿಡುಗಡೆ ಕಗ್ಗಂಟಾಗಿ, ಆತಂಕ ವ್ಯಕ್ತವಾಗಿತ್ತು.
ಪೂರ್ಣ ಶಾ ಬಿಡುಗಡೆಗಾಗಿ ಭಾರತ ನಿರಂತರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿತ್ತು. ನಿನ್ನೆಯಷ್ಟೆ ಪೂರ್ಣಂ ಕುಮಾರ್ ಪತ್ನಿ ಸರ್ಕಾರದ ಬಳಿ ಪತಿಯ ಬಿಡುಗಡೆಗೆ ಮನವಿ ಮಾಡಿಕೊಂಡಿದ್ದರು.
ಪೂರ್ಣಂ ಬಂಧನದ ಬೆನ್ನಲ್ಲೇ ಭಾರತವೂ ಸಹ ಪಾಕಿಸ್ತಾನದ ಯೋಧನೊಬ್ಬನನ್ನು ಜೀವಂತವಾಗಿ ಸೆರೆಹಿಡಿದಿತ್ತು.
ಕೂಡಲೇ ಎಚ್ಚೆತ್ತುಕೊಂಡ ಪಾಕಿಸ್ತಾನವು ಈಗ ತನ್ನ ಯೋಧನ ಬಿಡುಗಡೆಗಾಗಿ ಭಾರತದ ಯೋಧನನ್ನು ಬಿಡುಗಡೆ ಮಾಡಿದೆ.
