ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Darshan) ಕೇರಳದ ಕಣ್ಣೂರಿನಲ್ಲಿರುವ ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ ಎನ್ನಲಾದ ಕೆಲವೇ ಸೆಕೆಂಡ್ ಗಳ ವಿಡಿಯೋ ಕೆಲ ಖಾಸಗಿ ನ್ಯೂಸ್ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿದೆ.
ಕೇರಳದ ಈ ಪ್ರಸಿದ್ಧ ದೇವಸ್ಥಾನದಲ್ಲಿ ನಟ ದರ್ಶನ್ ಕಾಣಿಸಿಕೊಂಡಿರುವುದು ಅವರ ವಿರುದ್ಧ ಕಪೋಕಲ್ಪಿತ ವರದಿ ಪ್ರಸಾರ ಮಾಡಿದ್ದ ಕೆಲ ಖಾಸಗಿ ಚಾನಲ್ ಗಳ ಮಾಲೀಕರು ಮತ್ತು ನಿರೂಪಕರ ಆತಂಕಕ್ಕೆ ಕಾರಣವಾಗಿದೆ.
ಇದಕ್ಕೆ ಕಾರಣ ದರ್ಶನ್ ಅವರು ಶತ್ರು ಸಂಹಾರ ಪೂಜೆಗೆ ಪ್ರಸಿದ್ಧವಾದ ಈ ದೇವಸ್ಥಾನಲ್ಲಿ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ಆಪ್ತ ಧನ್ನೀರ್ ಅವರೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು.
ಏಕೆಂದರೆ ಗೆಳತಿಗೆ ಅಶ್ಲೀಲ ಸಂದೇಶ ಕಳಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದ ಅಡಿಯಲ್ಲಿ ದರ್ಶನ್ ಮತ್ತು ಸಂಗಡಿಗರು ನ್ಯಾಯಾಂಗ ಬಂಧನಕ್ಕೆ ಒಳಗಾದಾಗ ಕೆಲ ಖಾಸಗಿ ಚಾನಲ್ ಗಳು ಕಪೋಕಲ್ಪಿತ ವರದಿಗಳ ಮೂಲಕ ದರ್ಶನ್ ಅವರನ್ನು ಶತೃವಿನಂತೆ ಕಂಡಿದ್ದವು.
ಈ ಹಿನ್ನೆಲೆಯಲ್ಲಿ ಈಗ ದರ್ಶನ್ ಕೇರಳದ ಕಣ್ಣೂರಿನಲ್ಲಿರುವ ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದಕ್ಕೆ, ಶತ್ರು ಸಂಹಾರ ಪೂಜೆ ಎಫೆಕ್ಟ್ ಕಪೋಕಲ್ಪಿತ ವರದಿ ಪ್ರಸಾರ ಮಾಡಿದಕ್ಕೆ ಪರಿಣಾಮ ಬೀರಬಹುದು ಎಂಬ ಆತಂಕ ನಿರೂಪಕರು, ಚಾನಲ್ ಮಾಲೀಕರದ್ದಾಗಿದೆ ಎಂಬ ಮಾತುಗಳು ನ್ಯೂಸ್ ರೂಮ್ ಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.