ದೊಡ್ಡಬಳ್ಳಾಪುರ: ಸುಮಾರು ಒಂದುವರೆ ತಿಂಗಳಿಂದ ಹಾಗೂ ನಾಲ್ಕು ದಿನಗಳಿಂದ ತಾಲ್ಲೂಕಿನಲ್ಲಿ ಸತತವಾಗಿ ಬಿಳುತ್ತಲೇ ಇರುವ ಮಳೆಯಿಂದಾಗಿ ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಟಾಮೋಟೋ, ಕ್ಯಾರೇಟ್, ಹುರುಳಿಕಾಯಿ, ಸೊಪ್ಪುಗಳಂತು ಮಳೆಯಿಂದಾಗಿ ಕೊಳೆತು ಹೋಗಿದ್ದು ನಗರದ ಎಪಿಎಂಪಿಯಲ್ಲಿನ ಮಾರುಕಟ್ಟೆಗೆ ತರಕಾರಿ ಬರುವುದು ಇಳಿಮುಖವಾಗಿದೆ.
ತಾಲ್ಲೂಕಿನ ಮಾರುಕಟ್ಟೆಗೆ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಬರುವುದೇ ಬಳ್ಳಾರಿ, ದಾವಣಗೆರೆ, ಹಾಸನ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದ. ಹೀಗಾಗಿ ಈ ವರ್ಷ ಉತ್ತರ ಕರ್ನಾಟಕದಲ್ಲೂ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಈರುಳ್ಳಿ ಬೆಲೆಯು ಏರಿಕೆಯಾಗಿದೆ.
ಇನ್ನು ತಾಲ್ಲೂಕಿನಲ್ಲೂ ಮಳೆ ಹೆಚ್ಚಾಗಿರುವುದರಿಂದ ಟಾಮೋಟೊ, ಹುರುಳಿಕಾಯಿ, ಕ್ಯಾರೇಟ್ ಬೆಲೆಯು ಹೆಚ್ಚಾಗಿದೆ.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಭಾನುವಾರ ತರಕಾರಿ ಬೆಲೆ(1 ಕೆ.ಜಿ) ಟಾಮೋಟೋ ರೂ 50, ಕ್ಯಾರೇಟ್ ರೂ80, ಗೆಡ್ಡೆಕೋಸು ರೂ 100, ಅಲಸಂದೆ ರೂ60, ತೊಗರಿ ರೂ60, ಈರುಳ್ಳಿ ರೂ50, ಬೆಳ್ಳುಳ್ಳಿ ರೂ200, ಹೀರೇಕಾಯಿ ರೂ60, ಕೊತ್ತಂಬರಿ ಸೊಪ್ಪು (ಒಂದು ಕಟ್ಟು) ರೂ30 ಆಗಿತ್ತೆಂದು ವರ್ತಕರು ತಿಳಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……