ಬೆಂ.ಗ್ರಾ.ಜಿಲ್ಲೆ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ತಾಲ್ಲೂಕಿನ ಹಾಡಿಗಳು, ತಾಂಡಗಳು, ಗೊಲ್ಲರಹಟ್ಟಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಗೊಟ್ಟಿಪುರ, ಹನುಮಂತಪುರ, ದೇವನಗುಂದಿ, ಕಲ್ಕುಂಟೆ ಅಗ್ರಹಾರ, ಕೋಟೂರು, ತಿರುವರಂಗ, ಮುಗಬಾಳ, ಅಂಬೇಡ್ಕರ್ ಕಾಲೋನಿ ಮತ್ತು ಸೂಲಿಬೆಲೆ ಹಾಗೂ ನೆಲಮಂಗಲ ತಾಲ್ಲೂಕಿನ ಚಿಕ್ಕಮಾರನಹಳ್ಳಿ ಕಾಲೋನಿ, ರಾಜೀವ್ ಗಾಂಧಿ ನಗರ ಮತ್ತು ವಸಂತನಗರ.
ದೊಡ್ಡಬಳ್ಳಾಪುರ ತಾಲ್ಲೂಕಿನ ಮಜರಹೊಸಹಳ್ಳಿ, ಗೆದ್ದಲಪಾಳ್ಯ, ಕೆಳಗಿನ ನಾಯ್ಕರಂಡಹಳ್ಳಿ, ಸುತ್ತಹಳ್ಳಿ ಮತ್ತು ಅರೇಗುಡ್ಡದಹಳ್ಳಿ ಹಾಗೂ ದೇವನಹಳ್ಳಿ ತಾಲ್ಲೂಕಿನ ಚಿಕ್ಕತೆತ್ತಮಂಗಲ, ಆವತಿ, ಯರ್ತಿಗಾನಹಳ್ಳಿ, ದೊಡ್ಡಸಣ್ಣೆ ಮತ್ತು ಚಿನ್ನಪ್ಪ ಬಡಾವಣೆ, ಭುವನಹಳ್ಳಿ, ನೀರುಘಂಟಿಪಾಳ್ಯ, ಬೊಮ್ಮನಹಳ್ಳಿ, ದಿನ್ನೆ ಸೋಲೂರು, ಹೊಲ್ಲೇರಹಳ್ಳಿ, ಬಿದಲಪುರ, ರಾಮನಹಳ್ಳಿ, ಗೋಕರೆ, ಜನತಾ ಕಾಲೋನಿ, ಅಂಬೇಡ್ಕರ್ ಕಾಲೋನಿ, ಡಿ ವಿ ಎಂ ಕಾಲೋನಿ, ಭೋವಿ ಪಾಳ್ಯ, ಗೊಲ್ಲಹಳ್ಳಿ ಗ್ರಾಮಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಆಸಕ್ತ ವ್ಯಕ್ತಿಗಳು ಸಂಘ ಸಂಸ್ಥೆಗಳು 2022ರ ಜನವರಿ 27 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲ್ಲೂಕು ತಹಶೀಲ್ದಾರ್‌ಗಳ ಕಚೇರಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾಡಳಿತ ಸಂಕೀರ್ಣ, ಕೊಠಡಿ ಸಂಖ್ಯೆ: 204, ಎರಡನೇ ಮಹಡಿ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂ.ಸಂ.: 08029563343 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….