ಬೆಂ.ಗ್ರಾ.ಜಿಲ್ಲೆ: ತೋಟಗಾರಿಕೆ ಇಲಾಖೆಯು 2021-22ನೇ ಸಾಲಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ “ಸಂರಕ್ಷಿತ ಬೇಸಾಯದಡಿಯಲ್ಲಿ ಪಾಲಿಥೀನ್ ಶೀಟ್ ಹಾಗೂ ಗಿಡಗಳ ಬದಲಾವಣೆಗೆ ಸಹಾಯಧನ” ನೀಡಲು ಅವಕಾಶವಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಸಿರು ಮನೆಯಲ್ಲಿ ಗುಲಾಬಿ, ಕಾರ್ನೇಷಿಯಾ, ಜರ್ಬೆರಾ, ಸೇವಂತಿಗೆ, ಆರ್ಕಿಡ್ಸ್, ಆಂಥೋರಿಯಂ ಮುಂತಾದ ಪುಷ್ಪಗಳನ್ನು ಹಾಗೂ ಟೊಮ್ಯಾಟೋ, ಕ್ಯಾಪ್ಸಿಕಂ, ಬದನೆ, ಸೌತೆಕಾಯಿ(Cucumber) ತರಕಾರಿಗಳನ್ನು ಬೆಳೆಸಿ ಸ್ಥಳೀಯ ಮಾರುಕಟ್ಟೆ, ದೇಶ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೆಚ್ಚು ರೈತರು ಆಸಕ್ತಿಯನ್ನು ತೋರಿಸಿರುತ್ತಾರೆ.
ಪ್ರಾರಂಭದಲ್ಲಿ ಇಂತಹ ಉನ್ನತ ತಂತ್ರಜ್ಞಾನದ ಪುಷ್ಪ ಹಾಗೂ ತರಕಾರಿ ಸಂರಕ್ಷಿತ ಬೇಸಾಯವು ಸಾಕಷ್ಟು ಆದಾಯವನ್ನು ಬೆಳೆಗಾರರಿಗೆ ತಂದರೂ, ನಂತರದ ದಿನಗಳಲ್ಲಿ ಹಲವಾರು ಕಾರಣಗಳಿಂದಾಗಿ ಈ ಉದ್ದಿಮೆಯ ಬೆಳವಣಿಗೆ ಹಿಮ್ಮುಖವಾಗುವುದರ ಜೊತೆಗೆ ಇವುಗಳನ್ನು ಅವಲಂಬಿಸಿದವರು ಆರ್ಥಿಕ ತೊಂದರೆಯಿಂದಾಗಿ ಅಂತಹ ಪುಷ್ಪ ಹಾಗೂ ತರಕಾರಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಅನೇಕ ಹೈಟೆಕ್ ಸಂರಕ್ಷಿತ ಬೇಸಾಯ ಘಟಕಗಳನ್ನು ಪುನಃಶ್ಚೇತನಗೊಳಿಸಲು ಪಾಲಿಥೀನ್ ಶೀಟ್ ಹರಿದು ಹೋಗಿರುವ ರೈತ ಫಲಾನುಭವಿಗಳು ಶೀಟ್ ಹರಿದುಹೋದ ಛಾಯಾಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಿದ್ದಲ್ಲಿ, ಆಯಾ ತಾಲ್ಲೂಕಿನ ಅಧಿಕಾರಿಗಳು ಬಂದು ಪರಿಶೀಲಿಸಿ, ನಂತರ ಸಹಾಯಧನಕ್ಕೆ ಪರಿಗಣಿಸಲಾಗುವುದು. ಅರ್ಜಿ ಸಲ್ಲಿಸಲು 2022ರ ಜನವರಿ 10 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೇವನಹಳ್ಳಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ(ಜಿಪಂ) ಪಿ.ಮಂಜುಳಾ(ಮೊ.ಸಂ.:9448825101), ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ(ಜಿಪಂ) ಎಂ.ಎಸ್.ದೀಪಾ(ಮೊ.ಸಂ.:9880210892), ಹೊಸಕೋಟೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ(ಜಿಪಂ) ಪ್ರಶಾಂತ್.ಆರ್(ಮೊ.ಸಂ.:9538953949), ನೆಲಮಂಗಲ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ(ಜಿಪಂ) ಸುಬ್ರಮಣ್ಯ.ಜೆ.ವಿ.(ಮೊ.ಸಂ.: 9901754339) ಇವರನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರಾದ ಗುಣವಂತ.ಜೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….