ದೊಡ್ಡಬಳ್ಳಾಪುರ, (ಜುಲೈ.02): ನಾಗರಕೆರೆ ಕಲುಷಿತವಾಗುತ್ತಿರುವುದನ್ನು ತಡೆಗಟ್ಟುವುದು ಸೇರಿದಂತೆ ಕೆರೆಯ ಪುನಶ್ಚೇತನಕ್ಕೆ ಅಗತ್ಯ ಸಹಕಾರ ನೀಡುವುದರೊಂದಿಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುವುದು ಎಂದು ನಗರ ಸಭಾ ಸದಸ್ಯ ಎಂ.ಮಲ್ಲೇಶ್ ಹೇಳಿದರು.
ನಾಗರಕೆರೆ ಜೀವ ವೈವಿದ್ಯತೆ ಸಂರಕ್ಷಣಾ ಸಮಿತಿ ವತಿಯಿಂದ ನಾಗರಕೆರೆ ಏರಿಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ನಗರಸಭಾ ಸದಸ್ಯರೊಂದಿಗೆ ಸಭೆಯಲ್ಲಿ ಅವರು ಮಾತನಾಡಿದರು.
ನಾಗರಕೆರೆಯೊಂದಿಗೆ ತಮ್ಮ ಭಾವನಾತ್ಮಕ ನಂಟು ಇರುವ ಬಗ್ಗೆ ಮೆಲುಕು ಹಾಕಿದ ಅವರು, ಕೆರೆಯಲ್ಲಿ ಅವೈಜ್ಞಾನಿಕ ಒಳ ಚರಂಡಿ ಚೇಂಬರ್‍ಗಳನ್ನು ಹಾಕಿರುವ ಕುರಿತು ವಿರೋಧಗಳು ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಇದು ಅವೈಜ್ಞಾನಿಕ ಎಂದು ಮನವರಿಕೆಯಾಗಿದೆ. ಕೆರೆಯು ಸಣ್ಣ ನೀರಾವರಿ ಇಲಾಖೆಗೆ ಸೇರಿರುವುದರಿಂದ ಈ ಇಲಾಖೆಯ ಅಕಾರಿಗಳನ್ನು ನಗರಸಭೆಯ ಸಭೆಗೆ ಕರೆದು ಅವರ ಸಮನ್ವಯದೊಂದಿಗೆ ಇಲ್ಲಿನ ಕಾಮಗಾರಿಗಳನ್ನು ನಡೆಸಲಾಗುವುದು ಎಂದರು.
ನಗರ ಸಭಾ ಸದಸ್ಯೆ ಇಂದ್ರಾಣಿ ಮಾತನಾಡಿ, ನಾಗರಕೆರೆ ಅರ್ಕಾವತಿ ನದಿ ನೀರಿನ ಪ್ರಮುಖ ಭಾಗವಾಗಿದೆ. ಈ ಪ್ರದೇಶಗಳಲ್ಲಿ ಚೆಕ್ ಡ್ಯಾಂ ನಿರ್ಮಿಸುವುದು, ರಾಜಕಾಲುವೆಗಳನ್ನು ತೆರವು ಮಾಡುವುದು, ಒತ್ತುವರಿ ತೆರವು ಕಾರ್ಯಗಳಾಗಬೇಕಿದ್ದು, ಈ ಬಗ್ಗೆ ಮನವಿ ಸಲ್ಲಿಸಲಾಗಿದೆ ಎಂದರು.
ನಗರ ಸಭಾ ಸದಸ್ಯ ಬಂತಿ ವೆಂಕಟೇಶ್ ಮಾತನಾಡಿ, ಒಳ ಚರಂಡಿ ಚೇಂಬರ್ ಗಳನ್ನು ಸ್ಥಳಾಂತರಿಸಲು ಈಗಾಗಲೇ 4 ಕೋಟಿ ರೂ ಟೆಂಡರ್ ಕರೆಯಲಾಗಿದ್ದು, ಪ್ರಕ್ರಿಯೆ ನಡೆಯುತ್ತಿದೆ ಎಂದರು.
ನಗರ ಸಭಾ ಸದಸ್ಯರಾದ ಜಿ.ನಾಗರಾಜು, ಲಕ್ಷ್ಮೀಪತಿ ಮಾತನಾಡಿ, ನಾಗರಕೆರೆ ಸಂರಕ್ಷಣೆಗೆ ಸಮಿತಿಯ ಸಲಹೆಗಳಿಗೆ ಮನ್ನಣೆ ನೀಡಿ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿ ಸದಸ್ಯರಾದ ಚಿದಾನಂದ, ಜಿ.ಯಲ್ಲಪ್ಪ, ಸಿ.ನಟರಾಜ್, ಏಕಾಶಿಪುರ ವೆಂಕಟರಾಜು ಮಾತನಾಡಿ, ನಾಗರಕೆರೆಯಲ್ಲಿ ಈ ಹಿಂದೆ ಒಳ ಚರಂಡಿ ಚೇಂಬರ್‍ಗಳನ್ನು ಹಾಕುವಾಗಲೇ ವಿರೋಸಲಾಗಿತ್ತು. ಆದರೆ ಚೇಂಬರ್‍ಗಳ ಎತ್ತರಕ್ಕೆ ಇರುತ್ತವೆ ಕೆರೆಗೆ ಹಾನಿಯಾವುದಿಲ್ಲ ಎಂದು ಅಕಾರಿಗಳು ದಿಕ್ಕು ತಪ್ಪಿಸಿ ತರಾತುರಿಯಲ್ಲಿ ಚೇಂಬರ್‍ಗಳನ್ನು ನಿರ್ಮಾಣ ಮಾಡಿ ಇಂದು ಚರಂಡಿ ನೀರು ಕೆರೆಗೆ ಸೇರುವಂತಾಗಿದೆ. ಇವುಗಳನ್ನು ಸ್ಥಳಾಂತರಗೊಳಿಸುವಂತೆ ಹೇಳಿದ್ದರೂ ಅದಕ್ಕೂ ಸೊಪ್ಪು ಹಾಕದೇ ಎಲ್ಲವೂ ಸರಿಯಾಗಿದೆ ಎನ್ನುವ ಧೋರಣೆ ತಳೆದಿದ್ದಾರೆ. ಒಟ್ಟಿನಲ್ಲಿ ಕೆರೆ ಸ್ವಚ್ಛವಾಗಿ, ಪುನಶ್ಚೇತನವಾಗಬೇಕು. ಇಲ್ಲಿ ಜೀವ ವೈವಿದ್ಯಗಳು ನೆಲೆಗೊಳ್ಳಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಗಳು ಕರೆ ವಿಚಾರದಲ್ಲಿ ಆಗಬೇಕಾದ ಕೆಲಸಗಳಲ್ಲಿ ಖುದ್ದಾಗಿ ನೋಡಿಕೊಳ್ಳುವ ಮೂಲಕ ನಮಗೆ ಸಹಕಾರ ನೀಡಬೇಕಿದೆ ಎಂದು ನಾಗರಕೆರೆಯಲ್ಲಿ ಆಗಬೇಕಾದ ಕಾರ್ಯಗಳ ಕುರಿತು ಮನವರಿಕೆ ಮಾಡಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….