ಬೆಂಗಳೂರು, (ಜುಲೈ.18): ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿ ವಿಶ್ವವಿದ್ಯಾನಿಲಯಗಳು ರೈತರ ಕೃಷಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ದ್ಯೇಯೋದ್ದೇಶಗಳು ಹೊಂದಿವೆ. ಈ ನಿಟ್ಟಿನಲ್ಲಿ ನಿರಂತರವಾಗಿ ತರಬೇತಿ ಕಾರ್ಯಕ್ರಮಗಳನ್ನು ಸ್ಥಳೀಯ ಮಟ್ಟದಲ್ಲಿ ಆಯೋಜಿಸುತ್ತಿವೆ.
ಕೋವಿಡ್-19 ಸಮಯದಲ್ಲಿ ಆನ್ಲೈನ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಮುಂದುವರೆಸಿಕೊಂಡು ಬಂದಿವೆ. ಕಾಲಕಾಲಕ್ಕೆ ರಾಜ್ಯಮಟ್ಟದ ರೈತರ ಕೃಷಿ ಸಮಸ್ಯೆಗಳನ್ನು ಗುರುತಿಸಿ ನಿರಂತರವಾಗಿ ಆನ್ಲೈನ್ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಹಣ ಮತ್ತು ಸಮಯ ಉಳಿತಾಯವಾಗುವುದರ ಜೊತೆಗೆ ಶೀಘ್ರವಾಗಿ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ.
ಸಮೇತಿ(ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಸಮೇತಿ(ಉತ್ತರ) ಕೃಷಿ ವಿಶ್ವವಿದ್ಯಾನಿಲಯ, ಧಾರವಾಡದವರು ರಾಜ್ಯ ಮಟ್ಟದ ರೈತರ ಕೃಷಿ ಸಮಸ್ಯೆಗಳು ಮತ್ತು ಪರಿಹಾರ ಎಂಬ ವಿನೂತನ ಸರಣಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ.
ತೊಗರಿಯನ್ನು ಪ್ರಮುಖವಾಗಿ ಕಲುಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬೀದರ್, ಬೆಂಗಳೂರು (ಗ್ರಾಮಾಂತರ) ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ತೊಗರಿಯನ್ನು ರಾಜ್ಯದಲ್ಲಿ 16.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ತೊಗರಿಗೆ ಬರುವ ಪ್ರಮುಖ ರೋಗವೆಂದರೆ ಸೊರಗು ರೋಗ ಅಥವಾ ನೆಟ್ಟೆ ರೋಗ. ಈ ರೋಗವು ಕಳೆದ ವರ್ಷ (2022-23) ತೊಗರಿ ಕಣಜ ಎಂದು ಹೆಸರು ಪಡೆದಿರುವ ಕಲುಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸುಮಾರು 0.78 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತುತ್ತಾಗಿತ್ತು. ಈ ವರ್ಷವು ಸಹ ಬಿತ್ತನೆಯಾದ ತೊಗರಿ ಬೆಳೆಯು ಸೊರಗು ರೋಗಕ್ಕೆ ತುತ್ತಾಗುತ್ತಿದೆ.
ಇದನ್ನು ಮನಗೊಂಡು ಮುಂಜಾಗ್ರತ ಕ್ರಮವಾಗಿ ಕೃಷಿ ಇಲಾಖೆ, ಸಮೇತಿ (ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಸಮೇತಿ (ಉತ್ತರ) ಕೃಷಿ ವಿಶ್ವವಿದ್ಯಾನಿಲಯ, ಧಾರವಾಡದವರು ಜಂಟಿಯಾಗಿ ದಿನಾಂಕ:19-07-2023 (ಬುಧವಾರ) ದಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ನೂತನ ಪ್ರಯತ್ನವಾಗಿ ಇದೇ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಆನ್ಲೈನ್ ತರಬೇತಿ ಕಾರ್ಯಕ್ರಮವ ಹಮ್ಮಿಕೊಂಡಿವೆ.
ಒಂದೇ ಸಲ 3 ಸಾವಿರ ತೊಗರಿ ಬೆಳೆಗಾರರು ಮತ್ತು ವಿಸ್ತರಣಾ ಕಾರ್ಯಕರ್ತರು ಭಾಗವಹಿಸಬಹುದು ಎನ್ನಲಾಗಿದೆ.
ಆನ್ಲೈನ್ ತರಬೇತಿಗೆ ಲಿಂಕ್ https://zoom.us/j/92953255829?pwd=TUV0VGZyTWJZMTdUSG5DNU1ScTQ1UT09 ಮತ್ತು ಪಾಸ್ ಕೋಡ್:123123 ಆಗಿದೆ.
ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಯ ಆತ್ಮ ಸಿಬ್ಬಂದಿ/ಅಧಿಕಾರಿಗಳು ಅಥವಾ ಮೊಬೈಲ್ ಸಂ:9113624432 / 9481425522 / 9591212871 / 9964689340ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….