ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿ ಮಾವಿನಕೆರೆ ಗ್ರಾಮ ಚಿಕ್ಕ ಹಳ್ಳಿಯಾದರೂ ಅಲ್ಲಿಯ ಭವ್ಯ ಮೂರ್ತಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಮಹಿಮೆ ಅತಿ ದೊಡ್ಡದು.
ಮಾವಿನಕೆರೆಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯವೂ ಪ್ರೇಕ್ಷಣೀಯ ಸ್ಥಳವಾಗಿದೆ. ಅದು ಹರಿಹರ ಸೌಹಾರ್ದತೆಯ ಪಂಥಕ್ಕೆ ನಿದರ್ಶನವಾಗಿರುವ ಸ್ಥಳಗಳವಾಗಿರುತ್ತದೆ. ಹೊಳೆನರಸೀಪುರದ ಪಕ್ಕದಲ್ಲಿಯೇ ಹರಿಯುವ ಹೇಮಾವತಿ ನದಿಗೆ ಇದು ಸಮೀಪದಲ್ಲಿದೆ.
ಹಾಸನದಿಂದ ಸುಮಾರು 12 ಮೈಲುಗಳ ದೂರದಲ್ಲಿ ಮಾವಿನಕೆರೆ ಇದೆ. ಮಾವಿನಕೆರೆ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದ ಮಹಾದ್ವಾರವನ್ನು ಪ್ರವೇಶಿಸುತ್ತಿದ್ದಂತೆಯೇ ದೇವಾಲಯದ ಪ್ರಾಕಾರ ಸಿಗುವುದು.
ಇದರ ಮಧ್ಯದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯ ದೇವಾಲಯವು ಬಹು ಎತ್ತರದ ಜಗಲಿಯ ಮೇಲಿದೆ. ಮುಂದಿನ ಭಾಗವು ಸಭಾ ಮಂಟಪದಂತಿದೆ. ಮುಂದೆ ಹೋದರೆ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯು ನಿಂತಿರುವ ಭಂಗಿಯಲ್ಲಿದ್ದು ತನ್ನಲ್ಲಿಗೆ ಬರುವವರ ಮನೋಭಿಲಾಷ್ಟಗಳನ್ನು ನೆರವೇರಿಸುವಂತೆ ಅತ್ಯಂತ ಶುಭ ಪ್ರದಾಯಕನಾಗಿ ಕಂಡುಬರುವನು.
ಸ್ವಾಮಿಯು ಚತುರ್ಭುಜನಾಗಿ ಬಲಪಾಶ್ರ್ವದ ಮೇಲ್ಗೈನಲ್ಲಿ ಚಕ್ರವನ್ನು ಕೆಳಕೈನಲ್ಲಿ ಅಭಯ, ಎಡಪಾಶ್ರ್ವದ ಮೇಲ್ಗೈನಲ್ಲಿ ಶಂಖವನ್ನು ಕೆಳಕೈನಲ್ಲಿ ವರದ ಮುದ್ರೆಯನ್ನು ಧರಿಸಿರುವನು ಈ ಗುಡಿಗೆ ಹೊಂದಿಕೊಂಡಂತೆ ನಮ್ಮ ಬಲ ಪಾಶ್ರ್ವದಲ್ಲಿ ಶ್ರೀ ಮಹಾಲಕ್ಷ್ಮಿಯ ಗುಡಿಯಿದೆ.
ಕರುಣಾಮಯಿ ಜಗನ್ಮಾತೇ ಶ್ರೀ ಮಹಾಲಕ್ಷ್ಮಿಯು ಸ್ವಾಮಿ ಚಿತ್ತಾನುವರ್ತಿನಿಯಾಗಿ ಭಕ್ತರಿಗೆ ಫಲ ನೀಡಲು ಸಿದ್ದಳಿರುವಂತೆ ಕಂಗೋಳಿಸುತ್ತಿರುವಳು. ಶ್ರೀ ಲಕ್ಷ್ಮಿಯು ಚತುರ್ಭುಜೆಯಾಗಿ ತನ್ನ ಬಲಭಾಗದ ಮಲ್ಗೈನಲ್ಲಿ ಚಕ್ರ ಕೆಳಗೈನಲ್ಲಿ ವರದ ಮುದ್ರೆಯನ್ನು ಧರಿಸಿರುವಳು.
ಈ ಗುಡಿಗೆ ಹೊಂದಿಕೊಂಡಂತೆ ನಮ್ಮ ಬಲ ಪಾಶ್ರ್ವದಲ್ಲಿ ಶ್ರೀ ಮಹಾಲಕ್ಷ್ಮಿಯ ಗುಡಿ ಇದೆ. ಕರುಣಾಮಯಿ ಜಗನ್ಮಾತೆ ಶ್ರೀ ಮಹಾಲಕ್ಷ್ಮೀಯು ಸ್ವಾಮಿ ಚಿತ್ತಾನುವರ್ತಿನಿಯಾಗಿ ಭಕ್ತರಿಗೆ ಫಲ ನೀಡಲು ಸಿದ್ದಳಿರುವಂತೆ ಕಂಗೊಳಿಸುತ್ತಿರುವಳು.
ಸಂಗ್ರಹ ವರದಿ: ಗಣೇಶ್. ಎಸ್., ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….