ವಿಶ್ವ ಶಾಂತಿ, ಮಾನವ ಹಕ್ಕು, ಸಮನ್ವಯ ಮತ್ತು ಸ್ವಾತಂತ್ರ್ಯದ ಸಂಸ್ಕೃತಿಗೆ ನೆಲ್ಸನ್ ಮಂಡೇಲಾ ಅವರ ಕೊಡುಗೆಯನ್ನು ನೆನಪಿಸಲು ಜುಲೈ 18 ರಂದು ವಿಶ್ವದಾದ್ಯಂತ ನೆಲ್ಸನ್ ಮಂಡೇಲಾ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ.
ಒಂದು ಕಾಲದಲ್ಲಿ ವರ್ಣಭೇದ ನೀತಿಯಿಂದಾಗಿ ಬಿಳಿಯರಿಂದ ಕಪ್ಪು ವರ್ಣೀಯರು ನಿರಂತವಾಗಿ ದಬ್ಬಾಳಿಕೆಗೆ ಒಳಗಾಗಿದ್ದರು, ಈ ವರ್ಣಭೇದ ನೀತಿಯನ್ನು ತೊಡೆದು ಹಾಕಲು ಹಲವಾರು ಹೋರಾಟಗಳು ನಡೆದಿವೆ. ಈ ಹೋರಾಟಗಳಲ್ಲಿ ನೆಲ್ಸನ್ ಮಂಡೇಲಾ ಅವರ ಹೆಸರು ಮುಖ್ಯವಾಗಿ ಕೇಳಿ ಬರುತ್ತದೆ.
ವರ್ಣಭೇದ ನೀತಿಯ ವಿರುದ್ಧದ ಹೋರಾಟದಲ್ಲಿ ನೆಲ್ಸನ್ ಮಂಡೇಲಾ ಅವರ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಪ್ರಪಂಚದಾದ್ಯಂತ ಶಾಂತಿಯ ಸಂದೇಶವಾಹಕನಾಗಿ ಅವರು ಪ್ರಸಿದ್ಧರಾಗಿದ್ದಾರೆ.
ಮಹಾತ್ಮ ಗಾಂಧಿಯಂತೆ ಮಂಡೇಲಾ ಕೂಡಾ ಅಹಿಂಸೆಯ ಮಾರ್ಗವನ್ನು ಅನುಸಿರಿಸದ ವ್ಯಕ್ತಿ. ಅವರನ್ನು ಆಫ್ರಿಕಾದ ಗಾಂಧಿ ಎಂದು ಕರೆಯಲಾಗುತ್ತದೆ. ವರ್ಣಭೇದ ನೀತಿಯ ವಿರುದ್ಧ ಹೋರಾಡಿ ಮಂಡೇಲಾ 27 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು.
ಶಾಂತಿಗಾಗಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ದಕ್ಷಿಣ ಆಫ್ರಿಕಾದ ಮಾಜಿ ಅದ್ಯಕ್ಷ ನೆಲ್ಸನ್ ಮಂಡೇಲಾ ಅವರ ಜನ್ಮದಿನದ ನೆನಪಿಗಾಗಿ ವಿಶ್ವಸಂಸ್ಥೆಯು ಪ್ರತಿ ವರ್ಷ ಜುಲೈ 18 ರಂದು ನೆಲ್ಸನ್ ಮಂಡೇಲಾ ಅಂತರರಾಷ್ಟ್ರೀಯ ದಿನವನ್ನು ಆಚರಿಸುತ್ತದೆ.
2009ರ ನವೆಂಬರ್ನಲ್ಲಿ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ವಿಶ್ವದಲ್ಲಿ ಶಾಂತಿ ಮತ್ತು ಸ್ವಾತಂತ್ರ್ಯದ ಸಂಸ್ಕೃತಿಗೆ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಾದ ನೆಲ್ಸನ್ ಮಂಡೇಲಾ ಅವರ ಕೊಡುಗೆಯನ್ನು ಗುರುತಿಸಲು ಜುಲೈ 18 , ಮಂಡೇಲಾ ಅವರ ಜನ್ಮ ದಿನವನ್ನು ‘ನೆಲ್ಸನ್ ಮಂಡೇಲಾ ಅಂತರರಾಷ್ಟ್ರೀಯ ದಿನ’ವೆಂದು ಘೋಷಿಸಿತು. ಜುಲೈ 18, 2010 ರಲ್ಲಿ ಮೊದಲ ನೆಲ್ಸನ್ ಮಂಡೇಲಾ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಯಿತು.
ಮಂಡೇಲಾ ಅವರು ಪ್ರಜಾಸತಾತ್ಮಕವಾಗಿ ಚುನಾಯಿತರಾದ ಮೊದಲ ಕಪ್ಪು ವರ್ಣೀಯಾ ಅಧ್ಯಕ್ಷರು ಮಾತ್ರವಲ್ಲದೆ ಜಗತ್ತನ್ನು ಪರಿವರ್ತಿಸುವ ಬೃಹತ್ ಕನಸುಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದರು. ಈ ದಿನ ಬಡತನ, ಲಿಂಗ ಅಸಮಾನತೆ, ವರ್ಣಭೇದ ನೀತಿ ಮತ್ತು ಮಾನವ ಹಕ್ಕುಗಳ ನಿರ್ಮೂಲನೆ ವಿರುದ್ಧದ ಅವರ ಹೋರಾಟವನ್ನು ನೆನಪಿಸುತ್ತದೆ.
ಪೊಟೋ ಕೃಪೆ: Garphic Online
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….