ಹರಿತಲೇಖನಿ ದಿನಕ್ಕೊಂದು ಕಥೆ: ಕಳ್ಳನ ನೀತಿ

ಕಳ್ಳನೊಬ್ಬ ಮಧ್ಯ ರಾತ್ರಿಯಲ್ಲಿ ಶ್ರೀಮಂತನೋರ್ವನ ಮನೆಗೆ ಕದಿಯಲು ಹೋದ. ಮನೆಯ ಎಲ್ಲರೂ ಗಾಢ ನಿದ್ರೆಯಲ್ಲಿದ್ದದನ್ನು ತಾನು ತಂದಿದ್ದ ಬ್ಯಾಟರಿಯ ಬೆಳಕಿನಿಂದ ಗಮನಿಸಿದ. ಅದೇ ಕೋಣೆಯಲ್ಲಿ ತಿಜೋರಿಯ ಬೀಗದ ಕೈ ಗೋಡೆಗೆ ನೇತು ಹಾಕಿರುವುದನ್ನು ಆತ ಕಂಡ. ಇದರಿಂದ ತನ್ನ ಕೆಲಸ ಇನ್ನಷ್ಟು ಸುಲಭವಾಯಿತೆಂದು ಆತ ಅಂದುಕೊಂಡು, ತಡ ಮಾಡದೆ ತಿಜೋರಿಯ ಬೀಗ ತೆಗೆದು ನೋಡಿದ. ಅಲ್ಲಿ ಹಣ, ಒಡವೆಗಳು ಸೇರಿದಂತೆ ಬಹಳಷ್ಟು ಬಂಗಾರದ ನಾಣ್ಯಗಳು ಅವನ ಕಣ್ಣಿಗೆ ಬಿದ್ದವು.

ಸಂತೋಷಗೊಂಡ ಕಳ್ಳ ಸದ್ದು ಮಾಡದೆ ತಾನು ತಂದಿದ್ದ ಚೀಲದಲ್ಲಿ ಆ ದ್ರವ್ಯಗಳನ್ನು ತುಂಬಿಕೊಳ್ಳುತ್ತಿರುವಾಗ ಅವನ ಒಂದು ಬೆರಳಿನ ಉಗುರು ಮುರಿದು ನೆಲಕ್ಕೆ ಬಿತ್ತು. ಕಳ್ಳ ಕದಿಯುವ ಕೆಲಸ ಬಿಟ್ಟು ಆ ಉಗುರನ್ನು ಹುಡುಕಲು ಮುಂದಾದ. ಸರಿಯಾದ ಬೆಳಕಿಲ್ಲದ ಆ ಕೋಣೆಯಲ್ಲಿ ಬ್ಯಾಟರಿಯ ಬೆಳಕಿನ ಸಹಾಯದಿಂದ ಎಷ್ಟು ಹುಡುಕಿದರೂ ಆ ಉಗುರು ಸಿಗಲಿಲ್ಲ. ಮುಂಜಾನೆಯ ಬೆಳಕು ಹರಿಯಿತು. ಆಗಲೂ ಕಳ್ಳನಿಗೆ ಉಗುರಿನ ಪತ್ತೆ ಆಗಲಿಲ್ಲ.

ಮನೆ ಯಜಮಾನ ನಿದ್ರೆಯಿಂದ ಎಚ್ಚರಗೊಂಡು ನೋಡಲು ಮನೆಯಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಓಡಾಡುತ್ತಿದ್ದಾನೆ. ತಿಜೋರಿಯ ಬಾಗಿಲು ತೆರೆದು ಚಿನ್ನದ ಒಡವೆ, ನಾಣ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗಾಬರಿಗೊಂಡ ಶ್ರೀಮಂತ ಕಳ್ಳನ ಹಿಡಿದು ವಿಚಾರಿಸಿದ. ಭಯಭೀತನಾದ ಕಳ್ಳ ‘ಸ್ವಾಮಿ, ಈ ದಿನ ನಿಮ್ಮ ಮನೆಗೆ ಕನ್ನ ಹಾಕಲು ಬಂದೆ. ಅಕಸ್ಮಾತಾಗಿ ನನ್ನ ಒಂದು ಉಗುರು ಮುರಿದು ಮನೆಯೊಳಗೆ ಬಿತ್ತು. ಎಷ್ಟು ಹುಡುಕಿದರೂ ಸಿಗಲಿಲ್ಲ’ ಎಂದ ಅವನ ವರ್ತನೆ ಅರ್ಥವಾಗದೇ ಶ್ರೀಮಂತ ‘ಅಲ್ಲಾ, ಉಗುರು ಮುರಿದು ಹೋದರೆ ನಿನಗೇನಾಯ್ತು? ಒಡವೆಗಳನ್ನು ತೆಗೆದುಕೊಂಡು ನೀನು ಹೋಗಬಹುದಾಗಿತ್ತಲ್ಲ’ ಎಂದು ಸಮಾಧಾನದಿಂದ ಕೇಳಿದ.

ಅದಕ್ಕೆ ಕಳ್ಳ ‘ಛೆ, ಛೇ…ಎಲ್ಲಾದರೂ ಉಂಟಾ ಸ್ವಾಮಿ? ಉಗುರನ್ನು ಮನೆಯೊಳಗೆ ಬಿಟ್ಟರೆ ದರಿದ್ರ ನಿಮಗೆ’ ಅಂಥ ಮತ್ತೆ ವಿಚಿತ್ರವಾಗಿ ಉತ್ತರಿಸಿದ. ತಾಳ್ಮೆ ಕಳೆದುಕೊಳ್ಳದ ಶ್ರೀಮಂತ ಕುತೂಹಲದಿಂದ ‘ನಾನು ದರಿದ್ರನಾದರೆ ನಿನಗೇನು? ನಿನ್ನ ಪಾಡು ನಿನ್ನದಲ್ಲ’ ಅಂಥ ಮರು ಉತ್ತರ ನೀಡಿದ. ಆಗ ಕಳ್ಳ ‘ಸ್ವಾಮಿ, ತಾವು ಶ್ರೀಮಂತಿಕೆಯಿಂದ ಇದ್ದ ಕಾರಣಕ್ಕೆ ನಾನು ಇಲ್ಲಿಗೆ ಕದಿಯಲು ಬಂದೆ. ನೀವು ದರಿದ್ರರಾಗಿಬಿಟ್ಟರೆ ನನ್ನಂಥ ಕಳ್ಳರ ಗತಿ ಏನು? ಆದ್ದರಿಂದ ನೀವು ಚೆನ್ನಾಗಿರಬೇಕು. ಕೊಡುವವನು ಯಾವಾಗಲೂ ಎತ್ತರದ ಸ್ಥಾನದಲ್ಲೇ ಇರಬೇಕು’ ಎಂದು ನುಡಿದ.

ತನಗೆ ಆಪತ್ತು ಒದಗುವುದು ಎಂದು ತಿಳಿದರೂ ತನ್ನ ನೀತಿಯನ್ನು ಬಿಡದ ಕಳ್ಳನನ್ನು ನೋಡಿ ಶ್ರೀಮಂತನಿಗೆ ಅತೀವ ಆನಂದವಾಯಿತು. ಬಳಿಕ ಆತ ಅವನಿಗೆ ಬೇಕಾಗುವಷ್ಟು ಒಡವೆ, ನಾಣ್ಯಗಳನ್ನು ನೀಡಿ ಸಂತೋಷದಿಂದ ಕಳುಹಿಸಿದ. ನಮ್ಮ ನಡವಳಿಕೆಯಿಂದ ಇನ್ನೊಬ್ಬರ ಬದುಕು ಹಸನಾಗದಿದ್ದರೂ ಪರವಾಗಿಲ್ಲ. ವಿನಾಶವಾಗಬಾರದು ಎಂಬುದನ್ನು ಈ ಕತೆಯಿಂದ ತಿಳಿದುಕೊಳ್ಳಬಹುದು.

ಕೃಪೆ: ಸಾಮಾಜಿಕ ಜಾಲತಾಣ ರವೀಂದ್ರ ಸಿಂಗ್‌

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ: ಕುಮಾರ ಬಂಗಾರಪ್ಪ

ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ: ಕುಮಾರ ಬಂಗಾರಪ್ಪ

ಬಿಜೆಪಿ (BJP) ರಾಜ್ಯ ಘಟಕದ ಅಧ್ಯಕ್ಷರ ನೇಮ ಕದ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ನಮ್ಮ ಬದ್ದರಾಗಿದ್ದೇವೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ (Kumara Bangarappa) ಹೇಳಿದರು.

[ccc_my_favorite_select_button post_id="116983"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಡೆದು ಕೆಲವೇ ಗಂಟೆಯೊಳಗೆ ಆರೋಪಿಯನ್ನು (Chain snatcher) ಬಂಧಿಸುವಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದ

[ccc_my_favorite_select_button post_id="116820"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!