ದೊಡ್ಡಬಳ್ಳಾಪುರ, (ಆ.12): ಹಿಂದು ಜಾಗರಣಾ ವೇದಿಕೆ ವತಿಯಿಂದ ಚೈತನ್ಯ ನಗರದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಬೃಹತ್ ಪಂಜಿನ ಮೆರವಣಿಗೆಯನ್ನು ಆಗಸ್ಟ್ 14 ರಾತ್ರಿ 09 ಗಂಟೆಗೆ ಆಯೋಜಿಸಲಾಗಿದೆ.
ಈ ಕುರಿತಂತೆ ಪ್ರಕಟಣೆ ನೀಡಿರುವ ಹಿಂಜಾವೇ 1947 ಆಗಸ್ಟ್ 14ರ ಮಧ್ಯರಾತ್ರಿ ನಮ್ಮ ದೇಶ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಬ್ರಿಟಿಷರ ಕಪಿಮುಷ್ಠಿಯಿಂದ ಬಿಡುಗಡೆಯನ್ನು ಪಡೆದವು ಎಂಬುದು ಎಷ್ಟು ಸತ್ಯವೋ, ಅದೇ ದಿನ ನಮ್ಮ ದೇಶವನ್ನು ತುಂಡುಮಾಡಿ ಪಾಕಿಸ್ತಾನ ಎಂಬ ರಾಷ್ಟ್ರವನ್ನು ನಿರ್ಮಾಣವಾಗಿರುವುದು ಅಷ್ಟೇ ಸತ್ಯ.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ವೀರಗಾತೆಯನ್ನು ಇಂದಿನ ಪೀಳಿಗೆಗೆ ಮರೆತುವಿಟ್ಟಿದೆ ಈ ವೀರ ಪರಂಪರೆಯ ಹೋರಾಟವನ್ನು ನೆನಪಿಸಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ನಮ್ಮ ಹಿರಿಯರ ತ್ಯಾಗ ಬಲಿದಾನ ಪರಾಕ್ರಮ ಸಾಹಸ ಚರಿತ್ರೆಯ ಸ್ಮರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಆ. 14ರಂದು ರಾತ್ರಿ ಚೈತನ್ಯ ನಗರದ ಮುತ್ಯಾಲಮ್ಮ ಬಯಲು ಬಳಿಯಿಂದ ಬೃಹತ್ ಪಂಜಿನ ಮೆರವಣಿಗೆ ಹೊರಡಲಿದ್ದು, ವಿದ್ಯಾನಗರ, ಕೊಂಗಾಡಿಯಪ್ಪ ಕಾಲೇಜು ರಸ್ತೆ, ವೀರಭದ್ರನಪಾಳ್ಯ, ತೇರಿನಬೀದಿ ವೃತ್ತ ಮುಂತಾದ ಪ್ರಮುಖ ಬೀದಿಗಳಲ್ಲಿ ಸಾಗಿ ಮತ್ತೆ ಚೈತನ್ಯ ನಗರದ ಮುತ್ಯಾಲಮ್ಮ ಬಯಲಿಗೆ ಸೇರಲಿದ್ದು, ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ವಹಿಸಲಿದ್ದು, ಎಬಿವಿಪಿ ಅಗ್ರಿವಿಷನ್ ರಾಷ್ಟ್ರೀಯ ಸಹಸಂಚಾಲಕರಾದ ಉತ್ಕರ್ಷ್‌ರೆಡ್ಡಿ ಮುಖ್ಯಭಾಷಣ ಮಾಡಲಿದ್ದಾರೆಂದು ಪ್ರಕಟಣೆ ನೀಡಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….