01. ಭಾರತದ ಅತಿ ದೊಡ್ಡ ರಾಜ್ಯ ಈ ಕೆಳಗಿನವುಗಳಲ್ಲಿ ಯಾವುದು.?
- ಎ. ಮಹಾರಾಷ್ಟ್ರ
- ಬಿ. ಕರ್ನಾಟಕ
- ಸಿ. ರಾಜಸ್ಥಾನ
- ಡಿ. ಗುಜರಾತ್
ಉತ್ತರ: ಸಿ) ರಾಜಸ್ಥಾನ
02. ಭಾರತದ ಜನಸಂಖ್ಯೆಯಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು.?
- ಎ. ಮಣಿಪುರ
- ಬಿ. ಸಿಕ್ಕಿಂ
- ಸಿ. ಕರ್ನಾಟಕ
- ಡಿ. ತಮಿಳುನಾಡು
ಉತ್ತರ: ಬಿ) ಸಿಕ್ಕಿಂ
03. ಈ ಕೆಳಗಿನ ಯಾವ ವರ್ಷದಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಬ್ರಿಟಿಷ್ ಸರ್ಕಾರ ಬಂಧಿಸಿತು.?
- ಎ. 1942
- ಬಿ. 1940
- ಸಿ. 1947
- ಡಿ. 1951
ಉತ್ತರ: ಎ) 1942
04. ಜ್ಞಾನಪೀಠ ಪುರಸ್ಕೃತ “ವಿ ಕೃ ಗೋಕಾಕ್” ರವರು ಜನಿಸಿದ ವರ್ಷ ಯಾವುದು.?
- ಎ. 1920
- ಬಿ. 1909
- ಸಿ. 1919
- ಡಿ. 1910
ಉತ್ತರ: ಬಿ) 1909
05. ಕರ್ನಾಟಕ ರಾಜ್ಯದಲ್ಲಿ ನಿರ್ಮಾಣವಾದ ಪ್ರಥಮ ಕೆರೆ ಯಾವುದು.?
- ಎ. ಅರಳುಮಲ್ಲಿಗೆ ಕೆರೆ
- ಬಿ. ನಾಗರ ಕೆರೆ
- ಸಿ. ಗುಂಜೂರು ಕೆರೆ
- ಡಿ. ಚಂದ್ರವಳ್ಳಿ ಕೆರೆ
ಉತ್ತರ: ಡಿ) ಚಂದ್ರವಳ್ಳಿ ಕೆರೆ
06. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಯಾವುದು.?
- ಎ. ಇಂದಿರಾಬಾಯಿ
- ಬಿ. ಸಾರಾಭಾಯಿ
- ಸಿ. ಕುಸುಮಬಾಲೆ
- ಡಿ. ನಳ ಚರಿತ್ರೆ
ಉತ್ತರ: ಎ) ಇಂದಿರಾಬಾಯಿ
07. ಇತಿಹಾಸದ ದಾಖಲೆಗಳ ಪ್ರಕಾರ ವಾಸ್ಕೋ-ಡಿ-ಗಾಮ ಕೇರಳದ ಕಲ್ಲಿಕೋಟೆಯನ್ನು ಯಾವಾಗ ತಲುಪಿದನು.
- ಎ. 1498 ಮೇ 17
- ಬಿ. 1497 ಮೇ 17
- ಸಿ. 1410 ಜನವರಿ 26
- ಡಿ. 1511 ಮೇ 17
ಉತ್ತರ: ಎ) 1498 ಮೇ 17
08. ಹಿಮಾಲಯದ ಪಾದ ಬೆಟ್ಟಗಳು ಎಂದು ಕರೆಯುವ ಬೆಟ್ಟಗಳು ಯಾವುವು.?
- ಎ. ನಂದಾದೇವಿ
- ಬಿ. ಗಾರೋ
- ಸಿ. ಸಿವಾಲಿಕ್
- ಡಿ. ಜೀರ್
ಉತ್ತರ: ಸಿ) ಸಿವಾಲಿಕ್
09. ಭಾರತದಲ್ಲಿ ನಿರುದ್ಯೋಗಕ್ಕೆ ಪ್ರಮುಖ ಕಾರಣವೇನು.?
- ಎ. ಮಾನವ ಶಕ್ತಿಯ ಬಳಕೆಯ ಯೋಜನೆಯಲ್ಲಿನ ದೋಷ
- ಬಿ. ಸೋಮಾರಿತನ
- ಸಿ. ಹೆಚ್ಚಿನ ಜನನ ಪ್ರಮಾಣ
- ಡಿ. ಉದ್ಯೋಗ ಸೃಷ್ಟಿಯಲ್ಲಿ ದೋಷ
ಉತ್ತರ: ಎ) ಮಾನವ ಶಕ್ತಿಯ ಬಳಕೆಯ ಯೋಜನೆಯಲ್ಲಿನ ದೋಷ
10. “ಸುರ್ಮಾ ಕಣಿವೆ” ಇರುವುದು ಎಲ್ಲಿ.?
- ಎ. ಗುಜರಾತ್
- ಬಿ. ಒರಿಸ್ಸಾ
- ಸಿ. ಅಸ್ಸಾಂ
- ಡಿ. ಜಮ್ಮು ಮತ್ತು ಕಾಶ್ಮೀರ
ಉತ್ತರ: ಸಿ) ಅಸ್ಸಾಂ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….