ದೊಡ್ಡಬಳ್ಳಾಪುರ, (ಆ.12): ಬೆಂಗಳೂರು ರೋಟರಿ ಕ್ಲಬ್ ಬ್ಲೂ ಜೆ ಕರುನಾಡು ಟ್ರಸ್ಟ್ ವತಿಯಿಂದ ತಾಲೂಕಿನ ಹೊನ್ನಾವರ ಹಾಗೂ ಅಂಜನಮೂರ್ತಿ ನಗರ ಕ್ಲಸ್ಟರ್ ಗಳ ಸುಮಾರು 20ಕ್ಕು ಹೆಚ್ಚು ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳಿಗೆ ಟೈ- ಬೆಲ್ಟ್ ಹಾಗೂ ಐಡಿ ಕಾರ್ಡ್ ವಿತರಿಸಲಾಯಿತು.
ತಾಲೂಕಿನ ಪುರುಷನಹಳ್ಳಿ ಶ್ರೀ ಸಿದ್ದಗಂಗಾ ಅನುದಾನಿತ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟೈ- ಬೆಲ್ಟ್ ಹಾಗೂ ಐಡಿ ಕಾರ್ಡ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬ್ಲೂ ಜೆ ಕರುನಾಡು ಟ್ರಸ್ಟ್‌ನ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಉಮೇಶ್, ಸಿಆರ್‌ಪಿ ಕುಮಾರ್, ಶಿಕ್ಷಣ ಸಂಯೋಜಕ ಆಂಜಿನಪ್ಪ, ಬಿಆರ್‌ಪಿ ಶ್ರೀಕಾಂತ್ ಎಂ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….