ದೊಡ್ಡಬಳ್ಳಾಪುರ: ವಕೀಲರ ಮೇಲೆ ಹಲ್ಲೆ ಖಂಡಿಸಿ ನ್ಯಾಯಾಲಯದ ಕಲಾಪ ಬಹಿಷ್ಕಾರ

ದೊಡ್ಡಬಳ್ಳಾಪುರ, (ಆ.21): ಪ್ರತ್ಯೇಕ ಪ್ರಕರಣಗಳಲ್ಲಿ ಗೌರಿಬಿದನೂರು ಮತ್ತು ದೇವನಹಳ್ಳಿಯ ವಕೀಲರ‌ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ, ದೊಡ್ಡಬಳ್ಳಾಪುರ ತಾಲೂಕು ವಕೀಲರು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ‌‌ ಮಾತನಾಡಿದ ನ್ಯಾಯವಾದಿಗಳು, ದೇವನಹಳ್ಳಿಯ ವಕೀಲರಾದ ಮಹೇಶ್ ಅವರ ಮೇಲಿನ ಮಾರಣಾಂತಿಕ ಹಲ್ಲೆ, ಗೌರಿಬಿದನೂರು ವಕೀಲರಾದ ಧನಂಜಯ ಅವರ ಮೇಲೆ ಜಾಮೀನು ನೀಡುವ ವಿಚಾರವಾಗಿ ಕಚೇರಿಗೆ ನುಗ್ಗಿ ಹಲ್ಲೆ ನಡೆಸಿರುವುದು ಖಂಡನೀಯ, ಈ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಮತ್ತು ಮುಂದೆ ನಡೆಯುವ ರಾಜ್ಯ ಸರ್ಕಾರದ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಹೆಚ್.ಎಂ.ಮಂಜುನಾಥ್, ಬಿ.ಎಂ.ಬೈರೇಗೌಡ, ಹಿರಿಯ ನ್ಯಾಯವಾದಿಗಳಾದ ಎಂ.ಕೃಷ್ಣಮೂರ್ತಿ, ಎ.ಕೃಷ್ಣಮೂರ್ತಿ, ರವಿಮಾವಿನಕುಂಟೆ, ರುದ್ರಾರಾಧ್ಯ, ನ್ಯಾಯವಾದಿಗಳಾದ ಡಿಕೆ ಲಕ್ಷ್ಮೀನಾರಾಯಣ್ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!