ದೊಡ್ಡಬಳ್ಳಾಪುರ, (ಆ.26): ತಾಲೂಕಿನ KAIDB ಮತ್ತು ಅಪೆರೆಲ್ ಪಾರ್ಕ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯದ ಕಾರಣ, ಈ ವ್ಯಾಪ್ಯಿಯಲ್ಲಿ ಆಗಸ್ಟ್ 27 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ದೊಡ್ಡಬಳ್ಳಾಪುರ ನಗರ ಉಪವಿಭಾಗದ ಎಇಇ ಮಂಜುನಾಥ್ ತಿಳಿಸಿದ್ದಾರೆ.
ಈ ಕುರಿತಂತೆ ಹರಿತಲೇಖನಿಗೆ ಮಾಹಿತಿ ನೀಡಿರುವ ಅವರು, KAIDB ಮತ್ತು ಅಪೆರೆಲ್ ಪಾರ್ಕ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯದ ಕಾರಣ ಆ.27 ರಂದು ಬೆಳಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ತಿಳಿಸಿದ್ದು, HT ಮತ್ತು LT ಗ್ರಾಹಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ವಿದ್ಯುತ್ ಅಡಚಣೆಯುಂಟಾಗುವ ಪ್ರದೇಶಗಳು: ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯ ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶಗಳು, ಬಾಶೆಟ್ಟಿಹಳ್ಳಿ, ದೊಡ್ಡತುಮಕೂರು, ಚಿಕ್ಕತುಮಕೂರು, ಬೈರಸಂದ್ರ, ಹೊಸಹುಡ್ಯ, ಎಸ್.ಎಲ್.ಆರ್.ಕಾರ್ಖಾನೆ, ಹಿಮಾತ್‌ಸಿಂಗ್ ಕಾರ್ಖಾನೆ, ಏಕಾಶಿಪುರ, ಕಸುವನಹಳ್ಳಿ, ಬಿಸುವನಹಳ್ಳಿ, ಅರಳುಮಲ್ಲಿಗೆ, ಎಸ್.ಎಂ.ಗೊಲ್ಲಹಳ್ಳಿ, ಜಕ್ಕಸಂದ್ರ, ಆಲಹಳ್ಳಿ, ಜಿಂಕೆಬಚ್ಚಹಳ್ಳಿ, ಮಂಜರಹೊಸಹಳ್ಳಿ, ಭುವನೇಶ್ವರಿನಗರ, ಬಾಶೆಟ್ಟಿಹಳ್ಳಿ, ಶ್ರೀನಗರ, ದೊಡ್ಡಬಳ್ಳಾಪುರ ನಗರ, ಅಪೆರೆಲ್‌ಪಾರ್ಕ್ ಕೈಗಾರಿಕಾ ಪ್ರದೇಶಗಳು, ಓಬದೇನಹಳ್ಳಿ 3ನೇಹಂತ ಕೈಗಾರಿಕಾ ಪ್ರದೇಶಗಳು, ಓಬದೇನಹಳ್ಳಿ, ಅರೆಹಳ್ಳಿಗುಡ್ಡದಹಳ್ಳಿ, ರೈಲ್ವೆನಿಲ್ದಾಣ, ಇಂಡನಾ ಇಂಡಿಯಾ ಕಾರ್ಖಾನೆ, ಎಲ್&ಟಿ ಕಾರ್ಖಾನೆ, ಜೆ.ಕೆ.ಪೈಟ್ಸ್ ಕಾರ್ಖಾನೆ, ಮುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಲಿದೆ. (ಕೊನೆಯ ಕ್ಷಣದ ಬದಲಾವಣೆ ಹೊರತು ಪಡಿಸಿ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….