ಬೆಂಗಳೂರು, (ಆ.26): ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದ್ದು, ಪ್ರೊಫೈಲ್ ಫೋಟೊ, ಕವರ್ ಪೋಟೋವನ್ನು ಬದಲಿಸಿ ಯುವತಿ ಹಾಗೂ ಕಾರಿನ ಪೋಟೊ ಹಾಕಲಾಗಿತ್ತು ಎನ್ನಲಾಗಿದೆ.
ಶನಿವಾರ ಸಂಜೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಫೇಸ್‌ಬುಕ್‌ನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿ ಅವರ ಪ್ರೊಫೈಲ್ ಫೋಟೊ ಹಾಗೂ ಕವರ್ ಫೋಟೊ ಬದಲಾವಣೆ ಮಾಡಿದ್ದಾರೆ.
ಪ್ರೊಫೈಲ್ ಫೋಟೊದಲ್ಲಿ ಹುಡುಗಿಯ ಪೋಟೊ ಹಾಗೂ ಕವರ್ ಪಿಕ್ಚರ್‌ನಲ್ಲಿ ಕಾರ್‌ನ ಫೋಟೊ ಹಾಕಿದ್ದರು.
ಕೂಡಲೇ ಈ ಅಂಶವನ್ನು ಗಮನಿಸಿದ ಕುಮಾರಸ್ವಾಮಿ ಅವರ ಸಾಮಾಜಿಕ ಜಾಲತಾಣದ ನಿರ್ವಹಣಾ ಸಿಬ್ಬಂದಿ ಎಚ್ಚೆತ್ತುಕೊಂಡು ಹ್ಯಾಕ್ ಆಗಿದ್ದ ಅಕೌಂಟ್ ಅನ್ನು ರಿಕವರ್ ಮಾಡಿಕೊಂಡಿದ್ದಾರೆ.
ನಂತರ ಪ್ರೋಪೈಲ್ ಫೋಟೋ ಬದಲಾವಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….