ದೊಡ್ಡಬಳ್ಳಾಪುರದಲ್ಲಿ ಯಶಸ್ವಿ ಪತ್ರಕರ್ತರ ಸಮ್ಮೇಳನ: 09 ನಿರ್ಣಯಗಳಿಗೆ ಅನುಮೋದನೆ, ಗಣ್ಯರ ಹಾರೈಕೆ

ದೊಡ್ಡಬಳ್ಳಾಪುರ, (ಆ.30): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದೊಡ್ಡಬಳ್ಳಾಪುರ ತಾಲೂಕು ಘಟಕದವತಿಯಿಂದ ಇಂದು ಪತ್ರಕರ್ತರ ಸಮ್ಮೇಳನ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಸಮ್ಮೇಳನವನ್ನು ಉದ್ಘಾಟಿಸಿದ ಖಾಸಗಿ ಸುದ್ದಿವಾಹಿನಿ ಕಾರ್ಯನಿರ್ವಾಹಕ ಸಂಪಾದಕ ರಮಾಕಾಂತ್.ಎ.ಎಸ್ ಮಾತನಾಡಿ, ಸಮಾಜಕ್ಕೆ ಏನಾದರೂ ಕೊಡುಗೆಯ ನೀಡಬೇಕು ಎಂಬ ತುಡಿತ ಪತ್ರಕರ್ತನಿಗೆ ಇರುತ್ತದೆ‌, ಮತ್ತೊಬ್ಬರ ನೋವು ತನ್ನ ನೋವಂತೆ ಭಾವಿಸಿ ಅವರಿಗೆ ಪರಿಹಾರ ದೊರಕಿದಾಗ, ಅವರ ನಗುವನ್ನು ತನ್ನ ನಗುವೆಂದು ಸಭ್ರಮಿಸುವ ವ್ಯಕ್ತಿ ಪತ್ರಕರ್ತ ಮಾತ್ರ.

ಪತ್ರಿಕೋದ್ಯಮ ತಿರುವಿನ ಅಂಚಿಗೆ ಬಂದು ನಿಂತಿದೆ, ಪ್ರಸ್ತುತ ಸಂದರ್ಭದಲ್ಲಿ ಅಧಿಕಾರದಲ್ಲಿ ಇರುವವರ ನಿಲುವನ್ನು ವಿರೋಧಿಸಿ ಬರೆದರೆ ಆ ಪತ್ರಕರ್ತರನ್ನು ಮತ್ತೊಂದು ಪಕ್ಷದ ಏಜೆಂಟ್ ಎಂದು ಕರೆಯಲಾರಂಭಿಸಿದ್ದಾರೆ. ಅಧಿಕಾರದಲ್ಲಿ ಇರುವವರ ಖಂಡಿಸಿ ಒಂದು ವರದಿ ಪ್ರಕಟಿಸಿದರೆ ಓ ನೀನಾ, ನೀ ಆ ಪಾರ್ಟಿತಾನೆ ಎಂಬ ಮಟ್ಟಕ್ಕೆ ಪತ್ರಿಕೋದ್ಯಮದ ವ್ಯವಸ್ಥೆ ಬಂದು ನಿಂತಿದೆ. ಈಗ್ ಇಲ್ಲಿ ಎರಡೇ ಆಯ್ಕೆ, ಒಂದು ನನ್ನ ಪಾರ್ಟಿ, ಇಲ್ಲ ಎದುರಾಳಿ ಪಾರ್ಟಿ ಅಷ್ಟೇ ಸಮಾಜದ ಪರ ಎಂಬ ನಿಲುವಿಗೆ ಅರ್ಥವೇ ಇಲ್ಲದಂತಾಗಿದೆ. 

ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಶಾಶ್ವತ ವಿರೋಧ ಪಕ್ಷ ಎಂದರೆ ಅದು ಪತ್ರಕರ್ತ ಮಾತ್ರ. ಅದು ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಜನ ಪರವಾಗಿ ವಿರೋಧಿಸುವುದೇ ಅತನ ಕಾಯಕ.

ಇದು ಬಿಟ್ಟು ಕಾಂಪ್ರಮೈಸ್ ಪತ್ರಕರ್ತರಾಗಲು ಮುಂದಾದರೆ, ಅದು ಕೇವಲ ಪತ್ರಕರ್ತರ ಸೋಲಲ್ಲ. ಸಮಾಜದ ಸೋಲು, ಧೀನ ದಲಿತರ ಸೋಲು, ಬಡವರ ಸೋಲು, ಅಸಹಾಯಕರ ಸೋಲು, ನೊಂದವರ ಸೋಲಾಗುತ್ತದೆ. 

ಸಮಾಜದಲ್ಲಿ ಪತ್ರಿಕೋದ್ಯಮ ಜೀ ಹುಜೂರ್ ಎಂಬಂತೆ ಮಾಡಿದಕ್ಕೆಲ್ಲ ಶಬ್ಬಾಶ್‌ಗಿರಿ ಕೊಟ್ಕೊಂಡು, ಏನ್ ಅಧ್ಬುತ, ಏನ್ ಅಧ್ಬುತ ಎಂದು ಅಧಿಕಾರದಲ್ಲಿರುವವರ ಪರ ಭಜನೆ ಮಾಡಿದರೆ ಆ ಸಮಾಜದಲ್ಲಿ ಅನಾರೋಗ್ಯ ಶುರುವಾಗುತ್ತದೆ. ಅಂದರೆ ಆ ಸಮಾಜವನ್ನು ಕಾಪಾಡಬೇಕಾದ ಪ್ರತಿರೋಧಕ ಶಕ್ತಿಕಳೆದುಕೊಂಡಿದೆ ಎಂದರ್ಥ. ಸಮಾಜವನ್ನು ಕಾಪಾಡಬೇಕಾದಲ್ಲಿ ಪತ್ರಕರ್ತರು ರೋಗನಿರೋಧಕ ಶಕ್ತಿಯಂತೆ ಕಾರ್ಯ ನಿರ್ವಹಿಸಬೇಕೆಂದು ಕರೆ ನೀಡಿದರು.

ಶಾಸಕ ಧೀರಜ್ ಮುನಿರಾಜು ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಗುಣಾತ್ಮಕವಾದ, ಪ್ರಜ್ಞಾವಂತ ಪತ್ರಕರ್ತರಿರುವುದು ಗಣನೀಯವಾದ ಅಂಶ. ಪತ್ರಕರ್ತರದ್ದು ವಿರೋಧ ಪಕ್ಷವಾಗಿ ಕೆಲಸ ಮಾಡುವ ಜೊತೆಗೆ, ಬಡವರ ಪಕ್ಷಪಾತಿಯಾಗಿರಬೇಕೆಂದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗಂಗರಾಜ್ ಶಿರವಾರ ಮಾತನಾಡಿ, ಪತ್ರಿಕೋದ್ಯಮ ಉದ್ಯಮವಾಗಿ ಬದಲಾಗಿದೆ, ಸಮಾಜದ ಪರವಾಗಿ ದನಿ ಎತ್ತುವ ಪತ್ರಕರ್ತರಿಗೆ ನೆಲೆ, ಬೆಲೆ ಸಿಗುತ್ತಿಲ್ಲ.

ಜಾಹೀರಾತು ನೀಡಿದರೆ ಮಾತ್ರ ದೊಡ್ಡ ಸಂಸ್ಥೆಗಳಲ್ಲಿ ಪತ್ರಕರ್ತನಾಗಬಹುದು, ದೊಡ್ಡ ದೊಡ್ಡ ಪತ್ರಿಕೆಗಳು ಬಿಡಿ ಸುದ್ದಿ ಸಂಗ್ರಹರನ್ನಾಗಿ ನೇಮಿಸಿ, ಎಲ್ಲಾ ಸೌಲಭ್ಯಗಳಿಂದ ಪತ್ರಕರ್ತರ ವಂಚಿತರನ್ನಾಗಿಸುತ್ತಿದೆ. ಆ ಮೂಲಕ ಊಳಿಗಮಾನ್ಯ ಪದ್ಧತಿ ಪತ್ರಕರ್ತರಿಗೆ ಬಂದೋದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಚಾರಗೋಷ್ಠಿ: ಸಮ್ಮೇಳನದಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿದ್ದು, ಅಧ್ಯಕ್ಷತೆಯನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಿ.ಶ್ರೀಕಾಂತ್ ವಹಿಸಿದ್ದರು, ಸಂಕ್ರಮಣ ಕಾಲ ಘಟ್ಟದಲ್ಲಿ ಪತ್ರಿಕೋದ್ಯಮ ವಿಷಯದ ಸಿದ್ದಾರ್ಥ ಮೀಡಿಯಾ ಸ್ಟಡೀಸ್ ಉಪನ್ಯಾಸಕರಾದ ವಿ.ಎಲ್.ಪ್ರಕಾಶ್, ಪತ್ರಿಕೋದ್ಯಮದಲ್ಲಿ ಮಹಿಳೆಯರು ವಿಷಯದ ಕುರಿತು ಲೇಖಕಿ ಕೆ.ಎಸ್.ಪ್ರಭಾ ವಿಷಯ ಮಂಡಿಸಿದರು‌

ಸಮ್ಮೇಳನ ಸಮಾರೋಪ: ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕಳೆದ 10 ವರ್ಷಗಳ ಅಧಿಕಾರಾವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಪತ್ರಕರ್ತರು ನೀಡಿದ ಸಲಹೆ ಕೂಡ ಕಾರಣವಾಗಿದೆ ಎಂದರು.

ಹಕ್ಕೋತ್ತಾಯಗಳು: ಸಮ್ಮೇಳನದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸರ್ಕಾರದಿಂದ ನಿವೇಶನ ಪಡೆಯಲು ಶ್ರಮಿಸುವುದು, ಪತ್ರಕರ್ತರ ವಾಹನಗಳಿಗೆ ರಾಜ್ಯದ ಟೋಲ್ ಗಳಲ್ಲಿ ಉಚಿತ ಸಂಚಾರ ಅವಕಾಶ ಕಲ್ಪಿಸಿಕೊಡಲು ರಾಜ್ಯ ಸಂಘದ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಿ ಬೇಡಿಕೆ ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳುವುದು, ಪತ್ರಿಕೋದ್ಯಮ ಮಾನ್ಯತೆಗೆ ಸಣ್ಣ ಪತ್ರಿಕೆಗಳಿಗೆ ಇರುವ ಮಾನದಂಡಗಳ ಸರಳೀಕರಣಕ್ಕೆ ಕ್ರಮ ವಹಿಸಲು‌ ಒತ್ತಾಯ, ಯೂಟ್ಯೂಬ್ ಮತ್ತು ವೆಬ್ ಮಾಧ್ಯಮಗಳಿಗೆ ಅಗತ್ಯ ಮಾನ್ಯತೆ ಕಲ್ಪಿಸಿಕೊಡುವುದು, ದೊಡ್ಡಬಳ್ಳಾಪುರದಲ್ಲಿ ಪತ್ರಕರ್ತರ ಬಡಾವಣೆ ನಿರ್ಮಿಸಿ ಅರ್ಹ ಪತ್ರಕರ್ತರಿಗೆ ನಿವೇಶನ, ವಸತಿ ಕಲ್ಪಿಸಿಕೊಡುವುದು, ಹಿರಿಯ ಪತ್ರಕರ್ತರಿಗೆ ಮಾಸಾಶನ ಒದಗಿಸುವುದು, ಗ್ರಾಮೀಣ ಪ್ರದೇಶದ ಸಣ್ಣ ಪತ್ರಿಕೆಗಳನ್ನೂ ಒಳಗೊಂಡು ಕಾರ್ಯನಿರತ ಎಲ್ಲ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಒದಗಿಸಿಕೊಡುವುದು,‌ ಪತ್ರಕರ್ತರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನ, ಉನ್ನತ ಶಿಕ್ಷಣಕ್ಕೆ ನೆರವು ಒದಗಿಸುವ ಯೋಜನೆ ಜಾರಿ ಸೇರಿದಂತೆ 09 ಹಕ್ಕೊತ್ತಾಯಗಳನ್ನು ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ಫ್ರೊ.ಕೆ.ಆರ್.ರವಿಕಿರಣ್ ಮಂಡಿಸಿದರು.

ಸ‌ನ್ಮಾನ: ಸಮ್ಮೇಳನದಲ್ಲಿ ಭಾಗವಹಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ತಾಲೂಕುಗಳ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್. ಜಿ.ಸಿ‌‌., ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ಸ್ಥಾಯಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮೀ, ಸದಸ್ಯ ತ.ನ.ಪ್ರಭುದೇವ್, ಕೆಪಿಸಿಸಿ ವಕ್ತಾರ ಜಿ.ಲಕ್ಷ್ಮಿಪತಿ, ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಕನ್ನಡ ಪಕ್ಷದ ಸಂಜೀವ್ ನಾಯಕ್, ಪರಮೇಶ್, ಡಿ.ವೆಂಕಟೇಶ್, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎ.ನಂಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ಪತ್ರಕರ್ತರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!