ದೊಡ್ಡಬಳ್ಳಾಪುರ, (ಆ.30): ‘ರೈತರೇ ದೇಶದ ಬೆನ್ನೆಲಬು’ ಎಂಬ ಮಾತು ಚಾಲ್ತಿಯಲ್ಲಿದ್ದರೂ ಬೆನ್ನೆಲುಬನ್ನು ಮುರಿಯುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ರೈತ ಕುಟುಂಬದ ಯುವಜನರು ಯಾವುದೇ ಕಾರಣಕ್ಕೂ ಒಕ್ಕಲುತನ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ರೈತರನ್ನು ಮದುವೆಯಾಗಲೂ ಹೆಣ್ಣುಮಕ್ಕಳಿಗೂ ಧೈರ್ಯವಿಲ್ಲದಂತಾಗಿದೆ. ಎಷ್ಟೇ ಜಮೀನಿದ್ದರೂ ನಗರಗಳಲ್ಲಿ ಗೇಟು ಕಾಯುವ ಕೆಲಸ, ಡಿಲಿವರಿ ಬಾಯ್ಸ್ ಆಗಿ ಕೆಲಸ ಹುಡುಕುಕೊಂಡು ಜೀವನ ಸಾಗಿಸುವ ಕೆಲಸ ಮಾಡುವಂತಾಗಿದೆ.
ಇದಕ್ಕೆ ಹೊಣೆಗಾರರು ಯಾರು? ಇದಕ್ಕೆ ಕಾರಣಗಳು ಏನು? ಹಾಗಾದರೆ ಈ ಸಂಕಷ್ಟಕ್ಕೆ ಉತ್ತರವೇನು?
ಇವತ್ತಿನ ತಲೆಮಾರು ಇದೆಲ್ಲದರ ಬಗ್ಗೆ ಯೋಚಿಸಿ ಸಂಘಟಿತಗೊಳ್ಳದಿದ್ದರೆ ರೈತ ಕುಲವೇ ಇಲ್ಲದಂತಾಗುತ್ತದೆ. ಇದು ಈ ದೇಶದ ಪ್ರತಿಯೊಬ್ಬ ಪ್ರಜೆಯ ನಿದ್ದೆಗೆಡಿಸುವ ಸಂಗತಿಯಾಗಿದೆ. ಆದರೆ ನಮ್ಮನ್ನಾಳುತ್ತಿರುವ ಸರ್ಕಾರಗಳಿಗೇ ಆಗಲಿ, ನಾವು ಬೆಳೆಯುವುದನ್ನು ಉಂಡು ಜೀವಿಸುತ್ತಿರುವ ಅಧಿಕಾರಶಾಹಿಗಳಿಗೇ ಆಗಲಿ, ನಗರವಾಸಿಗಳಿಗೇ ಆಗಲಿ ಯಾರಿಗೂ ಏನೂ ಅನ್ನಿಸುತ್ತಿಲ್ಲ. ಏಕೆಂದರೆ ಅನ್ಯಾಯಕ್ಕೊಳಗಾಗಿರುವ ನಮಗೇ ಇನ್ನೂ ಏನೂ ಅನ್ನಿಸುತ್ತಿಲ್ಲ.
ಈ ಹಿನ್ನೆಲೆಯಲ್ಲಿ ರೈತ ಚಳುವಳಿಯಲ್ಲಿ ಯುವಜನರನ್ನು ಭಾಗವಹಿಸುವಂತೆ ಪ್ರೇರೇಪಿಸಿ, ವೈಚಾರಿಕತೆ ಅರ್ಥಮಾಡಿಸಿ ಹೊಸತಲೆಮಾರಿನ ನಾಯಕತ್ವವನ್ನು ತಯಾರು ಮಾಡಲು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕ್ರಮ ರೂಪಿಸಿದೆ.
ರೈತ ಚಳವಳಿಗೆ ಯುವಜನರನ್ನು ಮೌಲ್ಯಾಧಾರಿತವಾಗಿ, ವಿಚಾರವಂತರನ್ನಾಗಿ ಮಾಡುವ ಮೂಲಕ ಸೈದ್ಧಾಂತಿಕ ಬದ್ದತೆಯೊಂದಿಗೆ ಮತ್ತು ನೈತಿಕತೆಯೊಂದಿಗೆ ರೈತ ಸಮುದಾಯವನ್ನು ಸಂಘಟಿಸಿ ಮುನ್ನಡೆಸುವ ಒಂದು ಹೊಸ ಪಡೆನ್ನು ಕಟ್ಟುವ ಉದ್ದೇಶ ಈ ಶಿಬಿರದ್ದಾಗಿದೆ.
ಇಂತಹ ಮಹೋನ್ನತ ಉದ್ದೇಶಗಳ ಜೊತೆ ರೈತ ಯುವಜನರಿಗೆ (ಯುವಕ ಮತ್ತು ಯುವತಿಯರಿಗೆ) ವಿಶೇಷವಾದ ನಾಯಕತ್ವ ಶಿಬಿರವನ್ನು ಆಯೋಜಿಸಲಾಗಿದೆ.
ರೈತ ಸಮುದಾಯದ ಹಿನ್ನೆಲೆಯ 18-35 ವರ್ಷದೊಳಗಿನ ಯುವಜನರು ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು ರೈತರ ಸಂಕಷ್ಟಕ್ಕೆ ಸ್ಪಂದಿಸಲು ಮನಸ್ಸಿರುವ ಮತ್ತು ರೈತ ಸಮುದಾಯವನ್ನು ಗಟ್ಟಿಯಾಗಿ ಸಂಘಟಿಸಲು ಬಯಸುವ ಯುವಜನರು ಶಿಬಿರದಲ್ಲಿ ಭಾಗವಹಿಸಬಹುದು. ಸಂಪರ್ಕಿಸಲು ಕೊನೆಯ ದಿನಾಂಕ 01.09.2023
ಆಸಕ್ತರು ಸಂಪರ್ಕಿಸಬಹುದಾದ ಸಂಪರ್ಕ ಸಂಖ್ಯೆ: ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ಯುನಜರಿಗಾಗಿ: 9900612185,
ದೇವನಹಳ್ಳಿ ಮತ್ತು ಹೊಸಕೋಟೆ ಯುವಜನರಿಗಾಗಿ 6363219079
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….