ಸಂತ ಕಬೀರರು ಒಂದು ಸಲ ಪೇಟೆಯಿಂದ ಹೋಗುತ್ತಿದ್ದರು, ಮಾರ್ಗದಲ್ಲಿ ಒಬ್ಬ ವ್ಯಾಪಾರಿಯ ಪತ್ನಿಯು ಹಿಟ್ಟನ್ನು ಬೀಸುತ್ತಿರುವುದು ಕಾಣಿಸಿತು. ಹಿಟ್ಟನ್ನು ನೋಡಿ ಕಬೀರರಿಗೆ ಅಳು ಬಂತು.
ಅನೇಕ ಜನರು ಅವರಿಗೆ ಅಳುತ್ತಿದ್ದ ಕಾರಣವನ್ನು ಕೇಳಿದರು. ಆದರೆ ಕಬೀರರು ಏನೂ ಹೇಳಲಿಲ್ಲ. ಅಷ್ಟರಲ್ಲೇ ನಿಪಟ ನಿರಂಜನ ಎಂಬ ಸಾಧು ಬಂದರು. ಅವರು ಕಬೀರರಿಗೆ ಅಳುವ ಕಾರಣವನ್ನು ಕೇಳಿದರು.
ಆ ಸಾಧುವಿನ ಶ್ರೇಷ್ಠತೆಯನ್ನು ತಿಳಿದ ಕಬೀರರು ಹೇಳಿದರು “ಈ ಹಿಟ್ಟನ್ನು ಬೀಸುವುದನ್ನು ನೋಡುವಾಗ ನನ್ನ ಮನಸ್ಸಿನಲ್ಲಿ ಚಿಂತೆಯು ಉತ್ಪನ್ನವಾಗಿದೆ”, ಈ ಗಿರಣಿಯಲ್ಲಿ ಗೋಧಿಯನ್ನು ಹಾಕಿದಾಗ ಹೇಗೆ ಬೀಸಿ ಹಿಟ್ಟಾಗುತ್ತದೆಯೊ, ಅದೇ ಪ್ರಕಾರ ಈ ಭವಸಾಗರದಲ್ಲಿ ಸಿಕ್ಕು ನನ್ನ ಸ್ಥಿತಿಯು ಆಗಿದೆ”.
ಈ ವಿಚಾರದಿಂದ ಮನಸ್ಸು ದುಃಖಿಯಾಗಿದೆ. ಆಗ ಆ ಸಾಧು ಸ್ವಲ್ಪ ವಿಚಾರ ಮಾಡಿ ಹೇಳಿದರು “ಕಬೀರರೇ, ಗಿರಣಿಯಲ್ಲಿ ಗೋಧಿಯನ್ನು ಹಾಕಿದಾಗ ಬೀಸಿ ಹಿಟ್ಟಾಗುತ್ತದೆ, ಇದು ಸತ್ಯವಿದೆ.
ಆದರೆ ಖುಂಟೆಯ ಹತ್ತಿರ ಯಾವ ಕಾಳು ಇದ್ದಿತೋ, ಅದು ಪುಡಿಯಾಗಲಿಲ್ಲ. ಹಾಗೆಯೇ ಪರಮೇಶ್ವರನ ನಾಮದಿಂದ ಯಾರು ದೂರ ಇರುತ್ತಾರೋ, ಅವರು ಕಾಲದ ಪ್ರವಾಹದಲ್ಲಿ ಸಿಲುಕಿಕೊಳುತ್ತಾರೆ, ಆದರೆ ನಾಮಜಪ ಮಾಡುವವರಿಗೆ, ಈಶ್ವರನ ನಿಕಟದಲ್ಲಿ ಇರುವವರಿಗೆ ಕಾಲದ ಭಯವಾಗುವುದಿಲ್ಲ”.
ಕೃಪೆ: ಹಿಂದೂ ಜಾಗೃತಿ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….