ದೊಡ್ಡಬಳ್ಳಾಪುರ, (ಸೆ.05): ನಗರದ ಹೊರವಲಯದಲ್ಲಿ ಶ್ರೀರಾಮ್ ಪ್ರಾಪರ್ಟಿಸ್ ಅವರು ನೂತನವಾಗಿ ನಿರ್ಮಿಸುತ್ತಿರುವ ಬಡಾವಣೆಯಲ್ಲಿ ಅಳವಡಿಸಿರುವ ನಾಮ ಫಲಕಗಳಲ್ಲಿ ಕನ್ನಡ ಬಳಸಿಲ್ಲವೆಂದು ಆರೋಪಿಸಿ ಕರೆವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ನಾಮ ಫಲಕಗಳಿಗೆ ಮಸಿಬಳೆದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಮಾಹಿತಿ ನೀಡಿ, ಡಿ.ಮಾರ್ಟ್ ಬಳಿ ಶ್ರೀರಾಮ್ ಪ್ರಾಪರ್ಟಿಸ್ ಅವರು ನೂತನವಾಗಿ ಬಡಾವಣೆ ನಿರ್ಮಿಸುತ್ತಿದ್ದು, ಅವರಿಗೆ ಈ ಹಿಂದೆಯೆ ಆಂಗ್ಲ ಭಾಷೆಯ ಜಾಹಿರಾತು ಫಲಕಗಳನ್ನು ತೆರವು ಗೊಳಿಸಿ ಕನ್ನಡದ ಫಲಕಗಳನ್ನು ಅಳವಡಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಆದನ್ನ ಕಡೆಗಣಿಸಿ ಉದ್ಧಟತನದಿಂದ ಮತ್ತೆ ಆಂಗ್ಲ ಭಾಷೆಯ ನಾಮ ಫಲಕಗಳನ್ನು ಬಳಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಮಫಲಕಗಳಿಗೆ ಮಸಿ ಬಳೆದು ಕನ್ನಡಕ್ಕೆ ಅಗೌರವ ತೋರಿದರೆ ಕ್ಷಮಿಸುವುದಿಲ್ಲವೆಂದು ಎಚ್ಚರಿಕೆ ನೀಡಿದ್ದೇವೆ ಎಂದರು.
ಈ ವೇಳೆ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಮುಖಂಡರಾದ ಎಸ್.ಎಲ್.ಎನ್ ವೇಣು, ಆನಂದ್ ಕುಮಾರ್, ಕಾರಹಳ್ಳಿ ಮಂಜು, ಮುಕ್ಕೇನಹಳ್ಳಿ ರವಿ, ರಘುನಂದನ್, ಬಾಬು, ಸೀನಪ್ಪ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….