ದೊಡ್ಡಬಳ್ಳಾಪುರ, (ಸೆ.05): ನಗರದಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ರಸ್ತೆಗಳಿಗೆ ಚರಂಡಿ ನೀರು ನುಗ್ಗಿ ವಾಹನ ಸವಾರರು ರಸ್ತೆಯಲ್ಲಿ ಹೋಗಲು ಪರದಾಡುವಂತಾಗಿತ್ತು.
ನಗರದ ತಾಲೂಕು ಕಚೇರಿ ಮುಂದಿನ ರಸ್ತೆ ಸೇರಿದಂತೆ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗಲು ಸಾಧ್ಯವಾಗದಂತೆ ಪ್ಲಾಸ್ಟಿಕ್ ಕವರ್ಗಳಿಂದ ಚರಂಡಿಗಳು ಬಂದ್ ಆಗಿದ್ದರಿಂದ ಕೊಚ್ಚೆ ನೀರು ರಸ್ತೆಯಲ್ಲಿ ಹರಿದವು.
ಒಳಚರಂಡಿ ಮ್ಯಾನ್ ಓಲ್ಗಳ ಗುಂಡಿಗಳು ರಸ್ತೆಯಲ್ಲಿ ಬಿದ್ದಿರುವುದು ಕಾಣದಂತೆ ಮಳೆ ನೀರು ನಿಂತಿದ್ದರಿಂದ ಬೈಕ್ ಸವಾರರು ಬಿದ್ದು ಅಪಘಾತಗಳಿಗೆ ಕಾರಣವಾಗಿತ್ತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….