ಹುಬ್ಬಳ್ಳಿ, (ಸೆ.07): ಪ್ರಧಾನಿ ಮೋದಿಯವರಿಗೆ 9 ವರ್ಷದ ಮೇಲೆ ಭಾರತ್ ನೆನಪಾಗಿದೆ ಇಷ್ಟು ವರ್ಷ ಯಾಕೆ ನೆನಪಿರಲಿಲ್ಲ? ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿರುವ ಅವರು, ಭಾರತ ಅನ್ನೋದು ಬಿಜೆಪಿಯವರಿಗೆ ಈಗ್ಯಾಕೆ ನೆನಪಾಯ್ತು. ಇಂಡಿಯಾ ವಿದೇಶದ್ದೆಂದು ಈಗ ಶುರುವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರದ್ದು ಇದು ಎರಡನೇಯ ಅವಧಿ. ಈಗ ಹೊಸದಾಗಿ ಪ್ರೆಸಿಡೆಂಟ್ ಆಫ್ ಇಂಡಿಯಾ ಶುರುವಾಗಿದೆ. ನಾವೆಲ್ಲರೂ ಭಾರತೀಯರು ಅಂತಾನೇ ಹೇಳ್ತೀವಿ ಎಂದರು.
ಇಂಡಿಯಾ ಘಟಬಂಧನದ ಒಗ್ಗಟ್ಟು ನೋಡಿ ಬಿಜೆಪಿಯವರು ಭಯಗೊಂಡಿದ್ದಾರೆ. ಇಂಡಿಯಾ ಹೆಸರು ಜನಪ್ರಿಯ ಪಡೆಯುತ್ತಿದೆ ಎಂದು ಗೊತ್ತಾಗಿ ಹೆಸರು ಬದಲಾಯಿಸುತ್ತಿದ್ದಾರೆ. ಮೋದಿಯವರಿಗೆ ಒಂಬತ್ತು ವರ್ಷದ ಮೇಲೆ ಭಾರತ ನೆನಪಾಗಿದೆ. ಕೇವಲ ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ, ಇದು ಸರಿಯಲ್ಲ ಎಂದರು.
ವೈಯಕ್ತಿಕ: ಸನಾತನ ಧರ್ಮದ ವಿಚಾರವಾಗಿ ಉದಯ್ ನಿಧಿ ಸ್ಟಾಲಿನ್ ಹೇಳಿಕೆ ಕುರಿತು ಮಾತನಾಡಿ, ಭಾರತ ದೇಶದಲ್ಲಿರುವ ನಾವೆಲ್ಲಾ ಹಿಂದೂಗಳು. ನಾವೆಲ್ಲ ಹಿರಿಯರ ಮಾತಂತೆ ಎಲ್ಲಾ ಹಬ್ಬ ಹರಿದಿನಗಳನ್ನು ಮಾಡುತ್ತಿದ್ದೇವೆ. ಉದಯ ನಿಧಿ ಹೇಳಿಕೆ ವೈಯಕ್ತಿಕವಾದದ್ದು. ಸನಾತನ ವಿಚಾರವನ್ನು ಗಟ್ಟಿಯಾಗಿ ಮಾತಾಡಲು ಮೋದಿಯವರೇ ಹೇಳಿದ್ದಾರೆ. ಹತ್ತು ವರ್ಷ ಸರ್ಕಾರ ಮಾಡಿದಾಗ ನಮ್ಮ ಕೆಲಸದ ಬಗ್ಗೆ ಹೇಳಬೇಕು. ಕೆಲಸ ಮಾಡದೇ ಇದ್ದಾಗ ಭಾವನಾತ್ಮಕ ವಿಷಯ ಮುನ್ನೆಲೆಗೆ ಬರುತ್ತೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….