ಹರಿತಲೇಖನಿ ದಿನಕ್ಕೊಂದು ಕಥೆ: ಹಿರಣ್ಯಕಶಿಪು ಘೋರ ತಪಸ್ಸು

ದಿತಿ – ಕಾಶ್ಯಪರ ಪುತ್ರರು ಹಿರಣ್ಯಾಕ್ಷ ಮತ್ತು ಹಿರಣ್ಯ ಕಶಿಪು [ಜಯ – ವಿಜಯ] ಇವರು ಬಹಳ ವೀರರೂ ಶಕ್ತಿಶಾಲಿಗಳು ಆಗಿದ್ದರು, ಆದರೆ ಭೂಮಿಯನ್ನು ಅಪಹರಿಸಲು ಮುಂದಾದ ಹಿರಣ್ಯಾಕ್ಷನು ವರಾಹರೂಪಿ ಶ್ರೀಹರಿಯಿಂದ ಹತನಾದ ನಂತರ ಶೋಕತಪ್ತರಾದ ತನ್ನ ತಾಯಿ ಮತ್ತು ಕುಟುಂಬದವರನ್ನು ಕಂಡ ಹಿರಣ್ಯ ಕಶಿಪು ಕೋಪದಿಂದ ನಡುಗುತ್ತ ಉಗ್ರವಾದ ದೃಷ್ಟಿಯಿಂದ ತುಂಬಿದ ಸಭೆಯಲ್ಲಿ ತ್ರಿಶೂಲವನ್ನೆತ್ತಿ ದ್ವಿಮೂರ್ಧಾ, ತ್ರ್ಯಕ್ಷ, ಶಂಬರ, ಶತಬಾಹು, ಹಯಗ್ರೀವ, ನಮೂಚಿ, ಪಾಕ, ಇಲ್ವಲ, ವಿಪ್ರಚಿತ್ತಿ, ಪುಲೋಮ ಮತ್ತು ಶಕುನ ಮೊದಲಾದವರನ್ನು ಕುರಿತು “ಎಲೈ ದಾನವರೇ, ಕ್ಷುದ್ರರಾದ ನನ್ನ ಶತ್ರುಗಳು ನನ್ನ ಪ್ರೀತಿಯ, ಹಿತೈಷಿಯೂ ಆದ ತಮ್ಮನನ್ನು ವಿಷ್ಣುವಿನಿಂದ ಕೊಲ್ಲಿಸಿರುವುದು ನಮಗೆಲ್ಲಾ ತಿಳಿದೇ ಇದೆ.

ಇದರಿಂದ ಗಾಬರಿಗೊಂಡ ದೇವತೆಗಳು ಸ್ವರ್ಗದಿಂದ ಬ್ರಹ್ಮಲೋಕಕ್ಕೆ ಹೋಗಿ ಬ್ರಹ್ಮದೇವರಲ್ಲಿ ತಮಗೆ ಬಂದ ಸಂಕಷ್ಟವನ್ನು ನಿವೇದಿಸಿ ಪರಿಹಾರಕ್ಕಾಗಿ ಪ್ರಾರ್ಥಿಸುತ್ತಾ, ಹಿರಣ್ಯಕಶಿಪು ಬ್ರಹ್ಮ ಪದವಿಯ ಪ್ರಾಪ್ತಿ ಹಾಗೂ ಪಾಪ-ಪುಣ್ಯಗಳ ನಿಯಮಗಳನ್ನು ಬದಲಾವಣೆ ಮಾಡುವುದೇ ಮೊದಲಾದ ಉದ್ದೇಶವನ್ನಿಟ್ಟುಕೊಂಡು ತಪಸ್ಸನ್ನಾಚರಿಸುವ ಬಗ್ಗೆಯೂ ಸೂಕ್ಷ್ಮವಾಗಿ ತಿಳಿಸಿದರು.

ನಂತರ ಬ್ರಹ್ಮದೇವರು ಭೃಗು ,ದಕ್ಷ ಮುಂತಾದವರನ್ನು ಕೂಡಿಕೊಂಡು ಹಿರಣ್ಯಕಶಿಪುವಿನ ತಪೋಭೂಮಿಗೆ ಹೋದರು. ಅಲ್ಲಿ ಹುತ್ತದಿಂದ ಮತ್ತು ಹುಲ್ಲು ಬಿದಿರುಗಳಿಂದ ಹಿರಣ್ಯಕಶಿಪುವಿನ ದೇಹವು ಮುಚ್ಚಿಹೋಗಿತ್ತು. ಅವನ ದೇಹದ  ಚರ್ಮ ,ಮೇಧಸ್ಸು, ಮಾಂಸ ,ರಕ್ತ ಇವೆಲ್ಲವನ್ನೂ ಇರುವೆಗಳು ಹಾಗು ಹುಳಗಳು ತಿಂದುಬಿಟ್ಟಿದ್ದವು. ಮೋಡಗಳಿಂದ ಮುಚ್ಚಲ್ಪಟ್ಟ ಸೂರ್ಯನಂತಿರುವ ಕಶ್ಯಪ ಸಂಭೂತನು ತನ್ನ ತಪೋ ತೇಜದಿಂದ ಲೋಕಗಳನ್ನು ಸುಡುತ್ತಿದ್ದನು. ಅವನನ್ನು ನೋಡಿ ಬ್ರಹ್ಮ ದೇವರು ಕೂಡ ಒಂದು ಕ್ಷಣ ಮೂಕವಿಸ್ಮಿತರಾಗಿ ನಗುತ್ತಾ, ” ವತ್ಸ ಏಳು; ಎದ್ದೇಳು! ನಿನಗೆ ಮಂಗಳವಾಗಲಿ… ನಿನ್ನ ತಪಸ್ಸು ಸಿದ್ಧಿಸಿತು. ನಿನಗೆ ವರವನ್ನು ಕೊಡಲು ನಾನೇ ಬಂದಿರುವೆನು.

ಅಯ್ಯಾ… ಹುಳ-ಹುಪ್ಪಟೆಗಳು ನಿನ್ನ ದೇಹವನ್ನು ತಿಂದಿದ್ದರು ನಿನ್ನ ಪ್ರಾಣಗಳು ಅಸ್ಥಿಗತವಾಗಿ ಉಳಿದಿದೆ. ಇಂತಹ ಕಠಿಣವಾದ ತಪಸ್ಸನ್ನು ಈ ಹಿಂದೆ ಯಾರು ಮಾಡಿಲ್ಲ ಮುಂದೆ ಯಾರೂ ಮಾಡಲಾರರು. ದೇವತೆಗಳ ದಿವ್ಯವಾದ ನೂರು ವರ್ಷಗಳ ವರೆಗೆ ಪವನಾಶನಾಗಿ ಯಾರು ತಾನೆ ಇರಬಲ್ಲರು. ಇಂತಹ ಕಾರ್ಯವನ್ನು ಧೀರರು ಮಾತ್ರ ಕಷ್ಟದಿಂದ ಮಾಡಬಲ್ಲರು. ಈ ತಪೋ ನಿಷ್ಠೆಯಿಂದ ನೀನು ನನ್ನನ್ನು ವಶಪಡಿಸಿಕೊಂಡಿರುವೆ. ದೈತ್ಯ ಶಿರೋಮಣಿಯೇ  ನಿನಗೆ ಬೇಕಾದ ವರವನ್ನು ಬೇಡಿಕೋ ಎಂದು ತನ್ನ ಕಮಂಡಲುವಿನ ಜಲವನ್ನು ಅಭಿಮಂತ್ರಿಸಿ ಅವನಿಗೆ ಪ್ರೋಕ್ಷಿಸಿದನು. ತಕ್ಷಣವೇ ಕಟ್ಟಿಗೆಯ ರಾಶಿಯಿಂದ ಬೆಂಕಿಯು ಉರಿದೇಳುವಂತೆ ಹುತ್ತದ ಮಣ್ಣಿನಿಂದ, ಪರಿಪೂರ್ಣವಾದ, ವಜ್ರದಂತೆ ಕಠೋರವಾದ, ಚಿನ್ನದಂತೆ ಥಳಥಳಿಸುವ ದೇಹವುಳ್ಳ ಹಿರಣ್ಯಕಶಿಪು ಎದ್ದು ನಿಂತನು .

ತನ್ನ ಮುಂದೆ ಅಂತರಿಕ್ಷದಲ್ಲಿ ಹಂಸವಾಹನರಾಗಿ ಇರುವ ಬ್ರಹ್ಮದೇವರನ್ನು ಕಂಡು ಆನಂದ ಭರಿತರಾಗಿ ತನ್ನ ಶಿರಸ್ಸನ್ನು ಭೂಮಿಯಲ್ಲಿ ಇರಿಸಿ ಶಿರಸಾ ನಮಸ್ಕರಿಸಿದನು. ಮತ್ತೆ ಅಂಜಲೀಭದ್ದನಾಗಿ ವಿನಮ್ರಭಾವದಿಂದ ನಿಂತುಕೊಂಡು ಗದ್ಗದ ವಾಣಿಯಿಂದ ಬ್ರಹ್ಮನನ್ನು ಸ್ತುತಿಸಿದನು. ಪ್ರಭುವೇ ನೀನು ವರಕೊಡುವುದರಲ್ಲಿ ಸರ್ವ ಶ್ರೇಷ್ಠನು. ನೀನು ನನಗೆ ಅಭೀಷ್ಟವಾದ ವರವನ್ನು ಕೊಡುವುದಾದರೆ – ನೀನು ಸೃಷ್ಟಿಸಿರುವ ಯಾವುದೇ ಪ್ರಾಣಿ, ಪಕ್ಷಿ ಮನುಷ್ಯ ದೇವತೆ ದೈತ್ಯ ನಾಗಾದಿಗಳಿಂದಲೂ ನನಗೆ ಮರಣವು ಪ್ರಾಪ್ತವಾಗಬಾರದು. ಒಳಗಾಗಲೀ ಹೊರಗಾಗಲಿ, ಹಗಲು-ರಾತ್ರಿಗಳಲ್ಲಾಗಲಿ , ಯಾವುದೇ ಶಸ್ತ್ರ ಅಸ್ತ್ರಗಳಿಂದಾಗಲಿ , ಭೂಮಿಯಾಕಾಶಾದಿಗಳಲ್ಲಿ ನನಗೆ ಮರಣ ಉಂಟಾಗದಿರಲಿ. ಯುದ್ಧದಲ್ಲಿ ನನಗೆ ಯಾವುದೇ ಎದುರಾಳಿಗಳಿಲ್ಲದೆ ಏಕಚ್ಛತ್ರಾಧಿಪತಿಯಾಗಿ ಮೆರೆಯುವಂತೆ ವರವನ್ನು ಕರುಣಿಸು ಎಂದು ಬ್ರಹ್ಮದೇವನಲ್ಲಿ ಬೇಡಿದನು.

ಹಿರಣ್ಯಕಶಿಪು ಈ ಪ್ರಕಾರ ದುರ್ಲಭವಾದ ವಾರಗಳನ್ನ ಬೇಡಲು ಮಹಾ ಮಹಿಮರಾದ ಬ್ರಹ್ಮ ದೇವರು ಪ್ರಸನ್ನರಾಗಿ ವರಗಳನ್ನು ಕರುಣಿಸಿದರು. ನಂತರ ಬ್ರಹ್ಮದೇವರು “ವತ್ಸ , ನೀನು ಪಡೆದಿರುವ ವರಗಳು ಅತಿ ದುರ್ಲಭವಾದವುಗಳು. ಈ ವರಗಳು ಎಂದು ಸುಳ್ಳಾಗುವುದಿಲ್ಲ” ಎಂದು ಹೇಳಿ ಬ್ರಹ್ಮದೇವರು ತಮ್ಮ ಲೋಕಕ್ಕೆ ಹೊರಟು ಹೋದರು.

ಕೃಪೆ: ಸಾಮಾಜಿಕ ಜಾಲತಾಣ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ: ಕುಮಾರ ಬಂಗಾರಪ್ಪ

ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ: ಕುಮಾರ ಬಂಗಾರಪ್ಪ

ಬಿಜೆಪಿ (BJP) ರಾಜ್ಯ ಘಟಕದ ಅಧ್ಯಕ್ಷರ ನೇಮ ಕದ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ನಮ್ಮ ಬದ್ದರಾಗಿದ್ದೇವೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ (Kumara Bangarappa) ಹೇಳಿದರು.

[ccc_my_favorite_select_button post_id="116983"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಡೆದು ಕೆಲವೇ ಗಂಟೆಯೊಳಗೆ ಆರೋಪಿಯನ್ನು (Chain snatcher) ಬಂಧಿಸುವಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದ

[ccc_my_favorite_select_button post_id="116820"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!