ಪ್ರತಿ ವರ್ಷ ಸೆಪ್ಟಂಬರ್ 16 ರಂದು ವಿಶ್ವ ಓಜೋನ್ ದಿನ ಎಂದು ಆಚರಿಸುತ್ತಾರೆ. ಆದರೆ ಅದರ ಮಹತ್ವವನ್ನರಿಯದ ನಾವು ಅದರ ವಿನಾಶದ ಹಂಚಿಗೆ ಕಾರಣರಾಗುತ್ತಿದ್ದೇವೆ.
ಮನು ಕುಲವನ್ನು ರಕ್ಷಿಸಲು ಉದ್ಭವಾಗಿರುವ ಹಲವಾರು ಪ್ರಕೃತಿ ರಕ್ಷ ಕವಚಗಳಲ್ಲಿ ಓಜೋನ್ ಪದರವು ಒಂದು. ಆದರೆ ಅಂತಹ ರಕ್ಷೆ ಒದಗಿಸುವ ಕವಚದ ಧ್ವಂಸ ಮಾಡುವ ಧೈರ್ಯ ಮಾಡುತ್ತಿದ್ದೇವೆ. ಅದರ ಪರಿಣಾಮದ ಆಳ ಅರಿಯದೇ ಪರಿಸರ ಮಾಲಿನ್ಯದಂತಹ ಕೃತ್ಯಗಳನ್ನು ಮುಂದುವರಿಸಿಯುತ್ತಿದ್ದೇವೆ.
ಓಜೋನ್ ಎಂದರೆ ಆಮ್ಲಜನಕದ ಒಂದು ರೂಪ. ಅದರ ರಾಸಾಯನಿಕ ಸಂಕೇತ “ಓ’.1839ರಲ್ಲಿ ಶೋಧ ಮಾಡುವ ಮೂಲಕ ಓಜೋನ್ ಪದರವನ್ನು ವಾತಾವರಣದ ನೈಸರ್ಗಿಕ ಅನಿಲವೆಂದು ಕಂಡುಕೊಂಡಿದ್ದರು.
ಸಾಮಾನ್ಯ ಆಮ್ಲಜನಕವು ಎರಡು ಪರಮಾಣುಗಳನ್ನು ಒಳಗೊಂಡಿರುತ್ತದೆ. ಓಜೋನ್ನಲ್ಲಿ ಮೂರು ಪರಮಾಣುಗಳಿರುತ್ತವೆ.
ಓಜೋನ್ ಹೇರಳವಾಗಿ ಇರುವುದು: ವಾಯುಮಂಡಲದ “ಸ್ಟ್ರಾಟೋಸಿಯರ್’ನಲ್ಲಿ 15 ರಿಂದ 50 ಕಿ.ಮೀ ಮೇಲ್ಮಟ್ಟದ ಪ್ರದೇಶದಲ್ಲಿ ಅದು ಯಥೇತ್ಛವಾಗಿ ಇರುತ್ತದೆ. ಭೂಮಂಡಲದ ಜೀವಿಗಳಿಗೆ ಓಜೋನ್ ತುಂಬಾ ಮುಖ್ಯ.
ಸೂರ್ಯನಿಂದ ಹೊಮ್ಮುವ ಅಪಾಯಕಾರಿಯಾದ ಅತಿನೇರಳೆ ವಿಕಿರಣಗಳ ಬಹುಪಾಲನ್ನು ಓಜೋನ್ ಹೀರಿಕೊಳ್ಳುತ್ತದೆ. ಒಂದು ವೇಳೆ ಓಜೋನ್ನ ಈ ಫಿಲ್ಟರ್ ಇರದೇ ಇದ್ದರೆ ಇಷ್ಟು ಹೊತ್ತಿಗೆ ಭೂಮಿಯ ಜೀವಿಗಳೆಲ್ಲಾ ನಾಶವಾಗಿರುತ್ತಿದ್ದವು.
ದಿನದಿಂದ ದಿನಕ್ಕೆ ಹೆಚ್ಚಾದ ಓಜೋನ್ ಕುರಿತ ಚರ್ಚೆಗಳುವ: ಕ್ಲೋರೊಪಿರೊ, ಇಂಗಾಲದಂಥ ರಾಸಾಯನಿಕಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಓಜೋನ್ ಪದರ ತೆಳುವಾಗುತ್ತಿದೆ ಎಂಬುದು ವಿಜ್ಞಾನಿಗಳಿಗೆ ಸ್ಪಷ್ಟವಾಗಿದೆ. ಹಾಗಾಗಿ ಆ ಪದರಕ್ಕೆ ಇನ್ನೂ ಹೆಚ್ಚು ಹಾನಿ ಮಾಡದಂತೆ ಹಾಗೂ ಕ್ಲೋರೊಪಿರೊ ಮತ್ತು ಇಂಗಾಲದ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಸಲಹೆಗಳು ವಿಶ್ವದ ವಿವಿಧೆಡೆಯಿಂದ ಹರಿದು ಬರುತ್ತಿವೆ.
ಓಜೋನ್ ಪದರ ಕರಗಲು ಮುಖ್ಯ ಕಾರಣ:
* ಬೆಳೆಯುತ್ತಿರುವ ಕೈಗಾರಿಕ ಘಟಕಗಳು.
* ಕಾರ್ಖಾನೆಗಳಿಂದ ಹೊರಹುಮ್ಮುವ ವಿಷಕಾರಕ ಅನಿಗಳು.
* ವಾಹನಗಳಿಂದ ಹೊರಬರುವ ಹೊಗೆ ಹಾಗೂ ಶೀಥಲೀಕರಣ ಯಂತ್ರದಿಂದ ಬರುವ ಅನಿಲ.
* ಮಿಥೇನ್, ಕಾರ್ಬನ್ ಮೋನೋಕ್ಸೆ„ಡ್, ಕ್ಲೋರೋಪ್ಲೋರೋ ಕಾರ್ಬನ್, ಕ್ಲೋರಿನ್, ಬ್ರೋಮಿನ್, ಮೀಥೈಲ್ ಬ್ರೋಮೈಡ್, ಹೈಡ್ರೋ ಫ್ಲೋರೋ ಕಾರ್ಬನ್ ಮುಂತಾದ ಅನಿಗಳಿಂದಲ್ಲೂ ಮಾರಕ.
ಓಜೋನ್ ಪದರ ತೆಳುವಾದರೇ:
* ಪರಿಸರದ ಸಮತೋಳನ ಕಳೆದುಹೋಗಿ, ಭೂಮಿ ಬರಡಾಗುತ್ತದೆ.
* ಜೀವ ವೈವಿಧ್ಯಗಳು ನಾಶಗೊಂಡು ಭೂಮಿ ಬದುಕಲು ಯೋಗ್ಯವಲ್ಲದ ಬಂಜರು ಭೂಮಿಯಾಗುತ್ತದೆ.
* ಪರಿಣಾಮ ಮನುಷ್ಯ ಆರೋಗ್ಯದಲ್ಲಿ ಏರುಪೇರಾಗಿ ಚರ್ಮದ ಕ್ಯಾನ್ಸರ್ ಬರಬಹುದು.
* ನೀರಿನ ಕೊರತೆ ಕಾಡಬಹುದು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….