ಮೈಸೂರು, (ಆಗಸ್ಟ್.10); ಈ ಕಾಂಗ್ರೆಸ್ ಸರ್ಕಾರ ದರಿದ್ರ ಸರ್ಕಾರ. ಈ ಸರ್ಕಾರಕ್ಕೆ ಅಂಗವಿಕಲರಿಗೆ ಕೊಡುವ ಯೋಗ್ಯತೆ ಇಲ್ಲ. ಕಳೆದ ಆರು ತಿಂಗಳಿಂದ ಮಾಸಾಶನ ನೀಡಿಲ್ಲ. ಇಂತಹ ದರಿದ್ರ ಸರ್ಕಾರ ಒಂದಾದ ಮೇಲೆ ಒಂದರಂತೆ ಹಗರಣದಲ್ಲಿ ಮುಳುಗಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಮೈಸೂರಿನಲ್ಲಿ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅವರಿಗೆ ಸಿದ್ದರಾಮಯ್ಯ ಅನ್ನಲ್ಲ. ಅಂದ್ರೆ, ಹಿಂದುಳಿದ ನಾಯಕನ ತುಳಿಯುವ ಪ್ರಯತ್ನ ಅಂತಾರೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ದರಿದ್ರ ಸರ್ಕಾರ ಬೇಡ. ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದರು.
ದುರಹಂಕಾರದಿಂದ ವಿಪಕ್ಷಗಳಿಗೆ ಧಮ್ಕಿ ಹಾಕುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸವಾಲು ಹಾಕುವೆ. ಬನ್ನಿ ಹಗರಣ ಬಿಚ್ಚಿಡಿ. ಅದರ ಬಗ್ಗೆ ಚರ್ಚೆ ಮಾಡೋಣ. ಅದು ಬಿಟ್ಟು ವಿಪಕ್ಷಗಳಿಗೆ ಧಮ್ಕಿ ಹಾಕುವುದನ್ನು ಬಿಟ್ಟು ಬಿಡಿ ಎಂದು ಗರಂ ಆಗಿ ಹೇಳಿದರು.
ಯಡಿಯೂರಪ್ಪ ಬಡವರ, ರೈತರ ನಾಯಕ. ಅವರ ರಾಜಕೀಯ ನಿವೃತ್ತಿ ಬಗ್ಗೆ ಮಾತಾಡುತ್ತಿರಲ್ಲ. ಅವರಿಗೆ 82 ವಯಸ್ಸಾಗಿದೆ. ಅವರನ್ನು ಕಂಡಿರೆ ನಿಮಗೆ ಇನ್ನೂ ಭಯ ಇದೆವೇ ಎಂದು ಕೆಣಕಿದರು.
ನಿಮ್ಮ ಸ್ಥಾನ ಉಳಿಸಿಕೊಳ್ಳಿ. ಯಡಿಯೂರಪ್ಪ ಬಗ್ಗೆ ಮಾತಾಡೋದು ಬಿಡಿ. ಅವರ ಮೇಲೆ ಮಾರಾಣಾಂತಿಕ ಹಲ್ಲೆ ಆದಾಗ, ಅವರು ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಅವರು ಬಡವರ ಪರ, ರೈತರ ಪರ ಇರುತ್ತಾರೆ. ಅವರ ರಾಜೀನಾಮೆ ಕುರಿತು ನೀಡಿದ ಹೇಳಿಕೆ ಹಿಂದಕ್ಕೆ ಪಡೆಯಿರಿ ಎಂದು ಸಲಹೆ ನೀಡಿದರು.
ಸದನದಲ್ಲಿ ಮುಡಾ ಹಗರಣ, ಶೋಷಿತರ ಬಹುಕೋಟಿ ಅವ್ಯವಹಾರದ ಚರ್ಚೆಗೆ ಕಾಂಗ್ರೆಸ್ ಸರ್ಕಾರ ಅವಕಾಶ ಕೊಟ್ಟಿಲ್ಲ. ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೆ ಸಿಎಂ ಸಿದ್ದರಾಮಯ್ಯನವರು ಪಲಾಯನ ಮಾಡಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….