ಬೆಂಗಳೂರು, (ಆಗಸ್ಟ್.10); ಚಿನ್ನದ ಆಸೆಗೆ ಮಹಿಳೆಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದಾಳೆ. ಕದ್ದಿದ್ದು ನಾನಲ್ಲ ಎಂದವಳು, ಕದ್ದ ಚಿನ್ನ ಇದ್ದ ಚಿತ್ರವನ್ನು ವಾಟ್ಸ್ ಆ್ಯಪ್ ಡಿಪಿಯಲ್ಲಿ ಫೋಟೋ ಹಾಕಿ ಸಿಕ್ಕಿಬಿದ್ದಿದ್ದಾಳೆ.
ಬೆಂಗಳೂರಿನ ಎಚ್ ಎಎಲ್ ಪೊಲೀಸರು ಹೊಸಪೇಟೆ ಮೂಲದ 38 ವರ್ಷದ ರೇಣುಕಾ ಎಂಬಾಕೆಯನ್ನು ಬಂಧಿಸಿದ್ದಾರೆ.
ರೇಣುಕಾ ಅಪಾರ್ಟ್ಮೆಂಟ್ಗಳ ಬಳಿ ತೆರಳಿ ಮನೆಕೆಲಸ ಇದೆಯೇ ಎಂದು ಕೇಳುತ್ತಿದ್ದಳು. ನನಗೆ ದಕ್ಷಿಣ ಹಾಗೂ ಉತ್ತರ ಭಾಗದ ಎಲ್ಲಾ ಅಡುಗೆಯೂ ಬರುತ್ತದೆ ಎನ್ನುತ್ತಿದ್ದಳು.
ಇತ್ತ ಸೆಕ್ಯುರಿಟಿಗಳು ಅವಶ್ಯಕತೆಯಿದ್ದ ಅಪಾರ್ಟ್ ಮೆಂಟ್ ಮಾಲೀಕರಿಗೆ ಪರಿಚಯ ಮಾಡುತ್ತಿದ್ದರು. ಇದೇ ರೀತಿ ಮಾರತಹಳ್ಳಿಯ ಪೂರ್ವ ಫೌಂಟೇನ್ ಅಪಾರ್ಟ್ ಮೆಂಟ್ನ ಎರಡು ಫ್ಲ್ಯಾಟ್ಗಳಲ್ಲಿ ರೇಣುಕಾ ಕೆಲಸ ಗಿಟ್ಟಿಸಿದ್ದಳು.
ದಿನಕಳೆದಂತೆ ಎರಡೂ ಮನೆಗಳಲ್ಲಿ ಕೈಚಳಕ ತೋರಿ ಸುಮಾರು 100 ಗ್ರಾಂ ಚಿನ್ನಾಭರಣ ಕದ್ದಿದ್ದಳು. ಮನೆ ಮಾಲಕಿಯ ತಾಳಿಯನ್ನೂ ಕದ್ದಿದ್ದಳು. ಪೊಲೀಸರು ಕರೆಸಿ ವಿಚಾರಣೆ ಮಾಡಿದಾಗ ತನಗೇನೂ ಗೊತ್ತಿಲ್ಲ ಎಂದು ನಾಟಕವಾಡಿದಳು. ಬಳಿಕ ಪೊಲೀಸರ ವಿಚಾರಣೆ ಮಾಡಿ ಕಳುಹಿಸಿದ್ದರು.
ಪೊಲೀಸರು ಏನೂ ಮಾಡುವುದಿಲ್ಲ, ಯಾವುದು ಗೊತ್ತಾಗಲ್ಲ ಎಂದು ಕದ್ದ ನೆಕ್ಲೆಸ್ ಧರಿಸಿ ಫೋಟೊ ತೆಗೆದುಕೊಂಡಿದ್ದಳು. ಮಾತ್ರವಲ್ಲ ಆ ಫೋಟೊವನ್ನು ವಾಟ್ಸ್ ಆ್ಯಪ್ ಡಿಪಿಯಲ್ಲಿ ಹಾಕಿದ್ದಳು.
ಡಿಪಿ ನೋಡಿ ರೇಣುಕಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ ಒಡವೆಗಳ ಫೋಟೊ ತೆಗೆದುಕೊಂಡಿದ್ದು ಪತ್ತೆಯಾಗಿದೆ.
ಬಂಧಿತಳಿಂದ 80 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….