ಬೆಂಗಳೂರು, (ಆಗಸ್ಟ್ 12): ನಗರದ ನಿಮಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 157ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ಭಾನುವಾರ ಬೆಳಗ್ಗೆ ಇಲ್ಲಿನ ನಿಮಾನ್ದ್ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಿದ್ದ 157ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯ ಉದ್ಘಾಟನೆಯನ್ನು ಬ್ರೈನೋಬ್ರೈನ್ ಅಬಾಕಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಆನಂದ್ ಸುಬ್ರಮಣಿಯಂ ನೆರವೇರಿಸಿದರು.
ಸ್ಪರ್ಧೆಯಲ್ಲಿ ಬೆಳಗಾವಿ, ತಿಪಟೂರು, ನಾಗರಬಾವಿ, ತುಮಕೂರು, ಬಟ್ವಾಡಿ, ಗೋಣಿಕೊಪ್ಪಲು, ತಿಲಕವಾಡಿ, ದೊಡ್ಡಬಳ್ಳಾಪುರ, ದೊಡ್ಡಬೆಳವಂಗಲ, ಮೈಸೂರು ಸಿದ್ಧಾರ್ಥ ಲೇಔಟ್, ಸದಾಶಿವ ನಗರ, ಮೈಸೂರು, ವಿಜಯನಗರ, ಮಂಗಳೂರು, ಮುದ್ಗಲ್, ಸಿಂಧನೂರು, ಲಿಂಗಸುಗೂರು, ಕಲಬುರಗಿ, ಗೌರಿಬಿದನೂರು, ಗುಬ್ಬಿ, ಮಡಿಕೇರಿ, ಬಾಗಲಕೋಟೆ, ರಾಯಚೂರು, ಮೈಸೂರು ಕುವೆಂಪು ನಗರ ಕೇಂದ್ರಗಳ ಸಾವಿರಾರು ಮಕ್ಕಳು ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಅಬಾಕಸ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಾಂಪಿಯನ್ ಟ್ರೋಫಿ, ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ಅಬಾಕಸ್ ತರಬೇತಿ ಕೇಂದ್ರದ ಮುಖ್ಯಸ್ಥೆ ವಿ.ಎ.ಪುಷ್ಪ ನೇತೃತ್ವದಲ್ಲಿ ತಾಲೂಕಿನ ಪ್ರತಿಷ್ಠಿತ ಎಂಎಸ್‌ವಿ ಪಬ್ಲಿಕ್ ಶಾಲೆ, ಶ್ರೀ ದೇವರಾಜ್ ಅರಸ್ ಅಂತರರಾಷ್ಟ್ರೀಯ ವಸತಿ ಶಾಲೆ, ಅಕ್ಷರ ಪಬ್ಲಿಕ್ ಸ್ಕೂಲ್ ಸೇರಿದಂತೆ ವಿವಿಧ ಶಾಲೆಗಳ 103 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮೂರು ನಿಮಿಷದಲ್ಲಿ ವಿವಿಧ ಆಯಾಮಗಳ ಅತಿ ಹೆಚ್ಚು ಲೆಕ್ಕಗಳನ್ನು ಮಾಡುವ ಮೂಲಕ 49 ವಿದ್ಯಾರ್ಥಿಗಳು ಚಾಂಪಿಯನ್ ಟ್ರೋಫಿಗಳನ್ನು, 34 ವಿದ್ಯಾರ್ಥಿಗಳು ಚಿನ್ನದ ಪದಕ ಹಾಗೂ 20 ವಿದ್ಯಾರ್ಥಿಗಳು ಬೆಳ್ಳಿ ಪದಗಳನ್ನು ಪಡೆದಿದ್ದಾರೆ.
ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ತಾಂತ್ರಿಕ ನಿರ್ದೇಶಕ ಆರುಳ್ ಸುಬ್ರಮಣಿಯಂ, ಹಾಗೂ ಕರ್ನಾಟಕ ಪ್ರಾದೇಶಿಕ ವ್ಯವಸ್ಥಾಪಕ ನೀಲ್ ಕಮಲ್ ಇದ್ದರು.
ಈ ವೇಳೆ ದೊಡ್ಡಬಳ್ಳಾಪುರ ಅಬಾಕಸ್ ತರಬೇತಿ ಕೇಂದ್ರ ವಿದ್ಯಾರ್ಥಿಗಳು ಅತಿ ಹೆಚ್ಚು ಚಾಂಪಿಯನ್ ಟ್ರೋಫಿ, ಪದಕಗಳನ್ನು ಪಡೆದಿರುವುದು ವ್ಯಾಪಕ ಪ್ರಶಂಸಗೆ ಪಾತ್ರವಾಯಿತು.
ಅಲ್ಲದೆ ತರಬೇತುದಾರರಾದ ವಿ.ಎ.ಪುಷ್ಪಾ ಅವರ ನೇತೃತ್ವದಲ್ಲಿ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಾ, ಉತ್ತಮ ಸಾಧನೆ ಮಾಡುತ್ತಿರುವುದನ್ನು ದೊಡ್ಡಬಳ್ಳಾಪುರದ ಕೀರ್ತಿಯನ್ನು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾರುತ್ತಿರುವುದಕ್ಕೆ ಆಯೋಜಕರು ಅಭಿನಂದನೆ ವ್ಯಕ್ತಪಡಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….