ನೆಲಮಂಗಲ, (ಆಗಸ್ಟ್ 12): ಲಾರಿ ಡಿಕ್ಕಿ ಹೊಡೆದ ಪರಿಣಾಮ ಟೆಂಪೊದಲ್ಲಿದ್ದ ಮೂವರು ದುರ್ಮರಣ ಹೊಂದಿರುವಂತಹ ಘಟನೆ ತಾಲೂಕು ಕುಲುವನಹಳ್ಳಿ ಬಳಿ ಸಂಭವಿಸಿದೆ.
ಮೃತರನ್ನು ಯಾದಗಿರಿ ಮೂಲದ ಕಟ್ಟಡ ಕಾರ್ಮಿಕಾರದ 34 ವರ್ಷದ ನರಸಪ್ಪ, 35 ವರ್ಷದ ಹುಸೇನಪ್ಪ, ಪಾದಚಾರಿ ತುಮಕೂರು ತಾಲೂಕಿನ ಸೀತಕಲ್ಲು ನಿವಾಸಿ 50 ವರ್ಷದ ಶಿವಗಂಗಪ್ಪ ಎಂದು ಗುರುತಿಸಲಾಗಿದೆ.
ಕಾರ್ಮಿಕರಾದ ಸಾಬಣ್ಣ, ಕಟ್ಟಪ್ಪ, ಬಂಗಾರಪ್ಪಗೆ ಗಂಭೀರ ಗಾಯಾಳುಗಳಾಗಿದ್ದು, ಯಾದಗಿರಿ ಮೂಲದ ಲಕ್ಷ್ಮಿ, ಅನಂತಪ್ಪ, ಭಾನುಪ್ರಿಯ, ನಾಗರಾಜು ಮತ್ತು 3-4 ಮಂದಿ ಮಕ್ಕಳು ವಾಹನದಲ್ಲಿದ್ದವರು.
ಟೆಂಪೊ ಹಿಂದೆ ಕಾಂಕ್ರೀಟ್ ಮಿಕ್ಸರ್ ಮಾಡುವ ಟ್ರಾಲಿ ಕಟ್ಟಿಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದ್ದು, ಕ್ಯಾಂಟರ್ ಡಿಕ್ಕಿ ಬಳಿಕ ಮುಂದೆ ಪಾದಚಾರಿಗೂ ಡಿಕ್ಕಿಯಾಗಿ ಆತನ ಕೂಡ ಮೃತಪಟ್ಟಿದ್ದಾರೆ.
ಟ್ರಾಫಿಕ್ ಜಾಂ: ವಾರಂತ್ಯದಲ್ಲಿ ಅಧಿಕ ವಾಹನ ದಟ್ಟಣೆ ಹಾಗೂ ಪರಊರು ಗಳಿಂದ ರಾಜಧಾನಿ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರತಿ ವಾರಂತ್ಯ ದಲ್ಲಿ ಟ್ರಾಫಿಕ್ ದಟ್ಟಣೆ, ವಾಹನಗಳ ಸಂಖ್ಯೆ ಹೆಚ್ಚಳದಿಂದ ಅಪಘಾತಗಳೂ ಹೆಚ್ಚಿದೆ. ಅಪ ಘಾತದ ಬಳಿಕ 10 ಕಿಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಚಾರ ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಹರಸಾಹಸಪಟ್ಟರು. ಪೊಲೀಸ್ ವಾಹನದಲ್ಲೇ ಗಾಯಾಳು
ಆಸ್ಪತ್ರೆಗೆ: ಅಪಘಾತದಲ್ಲಿ ಕ್ಯಾಂಟರ್‌ಚಾಲಕ ನಿಗೆ ಗಂಭೀರ ಗಾಯವಾಗಿದ್ದು, ವಾಹನದಿಂದ ಹೊರಗೆ ಬರಲು ಸಾಧ್ಯವಾಗದಿದ್ದಾಗಸ್ಥಳದಲ್ಲೇ ಇದ್ದ ಪೊಲೀಸರು, ಪೊಲೀಸ್ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಎಸ್ಪಿ ನಾಗೇಶ್ ಕುಮಾರ್, ನೆಲಮಂಗಲ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಜಗದೀಶ್, ಪಿಎಸ್ ಐಗಳಾದ ರವಿ, ಶಶಿಧರ್, ರಂಜನ್ ಕುಮಾರ್ ರಾಜೀವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗಾಯಾಳುಗಳನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂ ಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….