ಬೆಂಗಳೂರು, (ಆಗಸ್ಟ್.12): ಯುವತಿ ಎದೆಭಾಗ ಮುಟ್ಟಿ ಪರರಿಯಾಗಿದ್ದ ಆರೋಪಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಲಬುರಗಿಯ ಜೇವರ್ಗಿ ಮೂಲದ 28 ವರ್ಷದ ಬಸವರಾಜು ಎಂದು ಗುರುತಿಸಲಾಗಿದೆ.
ಜಿ.ಎನ್.ಎಮ್ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿನಿಯ ಎದೆಯ ಭಾಗ ಮುಟ್ಟಿ ಪರಾರಿಯಾಗಿದ್ದ ಆರೋಪಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. 21 ವರ್ಷದ ಯುವತಿ ನರ್ಸಿಂಗ್ ಓದಲು ಹೊರ ರಾಜ್ಯದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾಳೆ.
8ನೇ ಮೈಲಿಯ ಅಪೋಲೋ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಬಸವರಾಜ್ ಚಿಕ್ಕಬಾಣಾವರದ ಮಾರುತಿನಗರದಲ್ಲಿ ವಾಸವಾಗಿದ್ದಾನೆ. ಜುಲೈ 30 ರಂದು ವಿದ್ಯಾರ್ಥಿನಿ ರಾತ್ರಿ 9 ಗಂಟೆಗೆ ಸಪ್ತಗಿರಿ ಕಾಲೇಜ್ ಬಳಿಯ ಫುಟ್ ಪಾತ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಪಲ್ಸರ್ ಬೈಕ್ ಮೇಲೆ ಬಂದ ಆರೋಪಿ ಬಸವರಾಜ್ ವಿದ್ಯಾರ್ಥಿನಿಯ ಎದೆಭಾಗವನ್ನು ಮುಟ್ಟಿದ್ದಾನೆ. ಆಕೆ ಜೋರಾಗಿ ಚೀರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.
ಬಳಿಕ ವಿದ್ಯಾರ್ಥಿನಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇನ್ಸ್ಪೆಕ್ಟರ್ ಹರಿಯಪ್ಪ ಮಾರ್ಗದರ್ಶನದಲ್ಲಿ ತನಿಖೆಗಿಳಿದ ಪಿಎಸ್ಐ ಧನುಷ್ ಮತ್ತು ಕೃಪಾಲ್ ಪ್ರಕರಣದ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….