ನವದೆಹಲಿ, (ಆಗಸ್ಟ್ 14); ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಆಡಿರುವ ಮಾತುಗಳ ವಿಡಿಯೋಗಳು, ಮತ್ತೆ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ವ್ಯಾಪಕ ವೈರಲ್ ಆಗುತ್ತಿದ್ದು, ಮೋದಿ ಆಡಿರುವುದೆಲ್ಲ ಮಾತಿಗೆ ಮಾತ್ರ ಸೀಮಿತವೇ ಹೊರತು ಯಾವುದೇ ಬದಲಾವಣೆಯಾವಿಲ್ಲ ಎಂಬ ಆಕ್ರೋಶ ನೆಟ್ಟಿಗರದ್ದಾಗಿದೆ.
ಅಂತೆಯೇ ಒಲಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳ ಕಳಪೆ ಸಾಧನೆ ಬೆನ್ನಲ್ಲೇ, ಅಧಿಕಾರಕ್ಕೆ ಬರುವ ಮುನ್ನ ಒಲಂಪಿಕ್ಸ್ ಪದಕಗಳಿಕೆಯ ಕುರಿತಾಗಿ ಮೋದಿ ಆಡಿದ ವಿಡಿಯೋ ವೈರಲ್ ಆಗುವ ಮೂಲಕ ಮುಜುಗರಕ್ಕೆ ಕಾರಣವಾಗಿತ್ತು.
ಇದೀಗಾ ಗಂಗಾ ನದಿ ಮಲಿಗೊಳ್ಳುತ್ತಿರುವ ವಿಡಿಯೋ ಶೇರ್ ಮಾಡುತ್ತಿರುವ ನೆಟ್ಟಿಗರು, ಮೋದಿಯವರೇ ನೀವು ಎರಡನೇ ತಾಯಿ ಎಂದು ಕರೆಯುವ ಗಂಗಾ ನದಿಯ ದುಸ್ಥಿತಿ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Manu ಎನ್ನುವವರು ಗಂಗಾ ನದಿಯ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಹಿತ ಹಂಚಿಕೊಂಡಿದ್ದು, ಇದು ದೆಹಲಿ ಅಲ್ವ ಹೀಗಾಗಿ ಈ ಅವಾಂತರಗಳಿಗೆ ಇಲ್ಲಿ ಯಾರೂ ಜವಾಬ್ದಾರರಲ್ಲ ಇದು ಗಂಗಾ ನದಿಗೆ ಸೇರುತ್ತಿರುವ ದುರ್ಗಂಧಭರಿತ ಮಲಿನ ನೀರು, ಆಕ್ರೋಶ, ಹತಾಶೆ ವ್ಯಕ್ತಪಡಿಸಿದ್ದಾರೆ.
ಇದು ಗಂಗಾ ಮಾತೆ, ಪ್ರಧಾನಿ ನರೇಂದ್ರ ಮೋದಿ ಇದನ್ನು ಎರಡನೇ ತಾಯಿ ಎಂದು ಹೇಳುತ್ತಾರೆ. ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ಇದನ್ನು ಸ್ವಚ್ಛಗೊಳಿಸುವುದಾಗಿ 2014ರಲ್ಲಿ ಭರವಸೆ ನೀಡಿದ್ದರು. ಆದರೆ ಕಳೆದ 11 ವರ್ಷದಲ್ಲಿ 20 ಸಾವಿರ ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಲಾಗಿದೆ.
ಆದರೆ ಚರಂಡಿ, ಕಾಲುವೆಗಳ ಮೂಲಕ ಕೊಳಚೆ ನೀರು ಗಂಗೆಯ ಒಡಲು ಸೇರುವುದು ತಪ್ಪಿಲ್ಲ. ಈ ವೀಡಿಯೊದಲ್ಲಿ ಗಂಗಾನದಿಯ ದುಸ್ಥಿತಿ ನೋಡಿದರೆ ಭರವಸೆ ಎಲ್ಲಿ ಹೋಯ್ತು ವೆಚ್ಚ ಮಾಡಿದ ಸಾವಿರಾರು ಕೋಟಿಗಳ ಕತೆ ಏನು ಎಂಬ ಪ್ರಶ್ನೆಗಳು ಹುಟ್ಟಿಕೊಂಡರೂ ಉತ್ತರ ಸಿಗದು ಎಂದು ವೀಡಿಯೊ ಹಂಚಿಕೊಂಡಿರುವ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….