ದೆಹಲಿ, (ಸೆ.03): ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ಆಳ್ವಿಕೆಯಲ್ಲಿರುವ ಹಲವು ರಾಜ್ಯಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಬುಲ್ಡೋಜರ್ ನ್ಯಾಯ’ ಪದ್ದತಿಯತ್ತ ಗಮನಹರಿಸಿದ ಸುಪ್ರೀಂ ಕೋರ್ಟ್, ಅದರ ವಿರುದ್ದವಾದ ಅಭಿಪ್ರಾಯ ವ್ಯಕ್ತಪಡಿಸಿದೆ.
ಆರೋಪಿಯಷ್ಟೇ ಅಲ್ಲ, ಅಪರಾಧ ಸಾಬೀತಾದರೂ ಆತನ ಮನೆ, ಆಸ್ತಿಯನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡುವುದು ಸರಿಯಲ್ಲ ಎಂದು ಪೀಠ ಹೇಳಿದೆ.
ಗಂಭೀರ ಪ್ರಕರಣಗಳ ಆರೋಪ ಹೊತ್ತವರ ಮನೆ-ವಾಣಿಜ್ಯ ಕಟ್ಟಡಗ ಳನ್ನು ಬುಲ್ಡೋಜರ್ನಿಂದ ಧ್ವಂಸಗೊಳಿಸುವ ಸರಕಾರಗಳ ಕ್ರಮದ ವಿರುದ್ಧ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಬಿ.ಆರ್.ಗವಾಯ್ ಮತ್ತು ನ್ಯಾ.ಕೆ.ವಿ.ವಿಶ್ವನಾಥನ್ ಅವರ ಪೀಠ, ‘ಆರೋಪಿಯ ಮನೆ ಧ್ವಂಸ ಸಾಧ್ಯವಿಲ್ಲ. ಅಪರಾಧಿ ಎಂದು ಘೋಷಣೆಯಾದರೂ ಇಂಥ ಕ್ರಮ ಕೈಗೊಳ್ಳುವಂತಿಲ್ಲ. ಇದಕ್ಕಾಗಿ ದೇಶಕ್ಕೊಂದು ಮಾರ್ಗಸೂಚಿ ರಚಿಸುವ ಪ್ರಸ್ತಾವನೆ ಮುಂದಿಡುವುದಾಗಿ ಸೋಮವಾರ ಹೇಳಿದೆ.
ಮನೆ ಅಕ್ರಮವಾಗಿದ್ದರೆ ತೆರವುಗೊಳಿಸಲು ಯಾವುದೇ ಸಮಸ್ಯೆ ಇಲ್ಲ ನೊಟೀಸ್ ನೀಡಿ, ಕಾನೂನು ಪರಿಹಾರ ಕಂಡು ಕೊಳ್ಳಲು ಅವಕಾಶ ನೀಡಿ ಮನೆ ಕೆಡವಬಹುದು ಅಲ್ಲವೇ? ಎಂದಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….