ಮಧುಗಿರಿ: ಸಂಸಾರದ ಕಲಹದಿಂದ ಬೇಸತ್ತು ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಸಿದ್ದಾಪುರ ಕೆರೆಗೆ ಬಿದ್ದು ಸಾವನ್ನಪ್ಪಿರುವ ( sucide ) ಘಟನೆ ಗುರವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಸಿದ್ದಾಪುರ ಕೆರೆಯನ್ನು ವೀಕ್ಷಣೆ ಮಾಡಿ ಬರೋಣ ಎಂದು ಮಕ್ಕಳಿಗೆ ಹೇಳಿ ಕರೆದುಕೊಂಡು ಹೋಗಿ ಏಕಾಏಕಿ ಕೆರೆಗೆ ಹಾರಿದ್ದಾರೆ.
ಮಧುಗಿರಿ ಪಟ್ಟಣದ ಒಂದನೇ ಬ್ಲಾಕ್ ನ ಅಲ್ಪಾ ಮೆಡಿಕಲ್ಸ್ ಸಮೀಪದ ವಾಸಿಗಳಾದ ಮೊಹಮ್ಮದ್ ಶಫೀಕ್ ಪಾಷಾ ಹೆಂಡತಿಯಾದ ಹಸೀನಾ(26 ವರ್ಷ), ಮಕ್ಕಳಾದ ಅಲ್ಪಿಯಾ ಕೊನೆನ್ (04 ವರ್ಷ) ಹಾಗೂ ಆಫಿಯಾ ಕೊನೆನ್ (08 ವರ್ಷ) ಮೃತರು.
ಶಾಲಾ ಸಮವಸ್ತ್ರ ದಲ್ಲೇ ಇರುವ ಮಕ್ಕಳ ಶವಗಳನ್ನ ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಹೊರ ತೆಗೆದಿದ್ದಾರೆ.
ಮಧುಗಿರಿ ಪಟ್ಟಣದ ಎಸ್. ಎಂ.ಶಾಲೆಯ ವಿಧ್ಯಾರ್ಥಿಗಳಾಗಿದ್ದಾರೆ. ಮಧುಗಿರಿ ಪಿಎಸ್‌ಐ ವಿಜಯಕುಮಾರ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃಷಿ ಹೊಂಡಕ್ಕೆ ಬಿದ್ದು ವೈದ್ಯ ವಿದ್ಯಾರ್ಥಿ ಸಾವು: ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಕೀರ್ತನ್.ವಿ (19 ವರ್ಚ) ಆಕಸ್ಮಿಕವಾಗಿ ತಮ್ಮ ತೋಟದ ಕೃಷಿ ಹೊಂಡಕ್ಕೆ ಬಿದ್ದು ಮೃತ ಪಟ್ಟ ಘಟನೆ ಗುರುವಾರ ನಡೆದಿದೆ.
ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮದ ನೆಲಗೊಂಡನಹಳ್ಳಿ ತೋಟದ ಮನೆಯಲ್ಲಿ ವಾಸವಿದ್ದರು.
ಗುರುವಾರ ಸಂಜೆ ವೇಳೆ ತಮ್ಮ ತೋಟದಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದ ಸಂದರ್ಭ ಟ್ರ್ಯಾಕ್ಟರ್ ರಿವರ್ಸ್ ತೆಗೆಯಲು ಹೋದಾಗ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.