ಗೌರಿಬಿದನೂರು: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 14 ನವಂಬರ್ 2024ರಿಂದ 24 ಜನವರಿ 2025 ರವರೆಗೆ, 10 ವಾರಗಳ ‘ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ’ ಮತ್ತು ಶಾಲೆಗಳಲ್ಲಿ ಒಂದು ದಿನ “ಮಕ್ಕಳ ವಿಶೇಷ ಗ್ರಾಮ ಸಭೆ (grama sabe) ನಡೆಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ತಾಲೂಕಿನ ಅಲಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಯನ್ನು ನಡೆಸಲಾಯಿತು.
ಈ ವಿಶೇಷ ಮಕ್ಕಳ ಗ್ರಾಮಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ, ಕಾರ್ಯಕ್ರಮ ವ್ಯವಸ್ಥಾಪಕ ಬಿಟಿ ರಾಮಕೃಷ್ಣ, ಸಿಆರ್ಪಿ ರಂಗನಾಥ್, ಪಿಡಿಒ ಮುನಿಯೋಜಿ ರಾವ್, ಮುಖ್ಯಶಿಕ್ಷಕಿ ವನಜಾಕ್ಷಮ್ಮ, ಶಿಕ್ಷಕ ನವೀನ್ ಕುಮಾರ್ ಭಾಗವಹಿಸಿದ್ದರು.
ಈ ವೇಳೆ ಶಾಲಾ ಮೈದಾನ ಸ್ವಚ್ಛತೆ, ಈಗಾಗಲೇ 2 ವರ್ಷದ ಹಿಂದೆ ಮಂಜೂರಾಗಿದ್ದ ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣ, ಶಾಲಾ ಉದ್ಯಾನವನ ಹಾಗೂ ಆಟದ ಮೈದಾನ ಅಭಿವೃದ್ಧಿ, ಹೊಸದಾಗಿ ನಿರ್ಮಾಣ ಮಾಡಿರುವ ಅಡುಗೆ ಕೋಣೆ ತುಂಬಾ ಚಿಕ್ಕದಾಗಿದ್ದು 400 ವಿದ್ಯಾರ್ಥಿಗಳಿರುವ ಶಾಲೆಗೆ ವಿಶಾಲವಾದ ಸುಭದ್ರವಾದ ಕೊಠಡಿ ನಿರ್ಮಾಣ.
ಶಾಲೆಯ ಮುಂಭಾಗದಲ್ಲಿ ಅಪಘಾತಗಳು ಸಂಭವಿಸುತ್ತಿದ್ದೂ ಎರಡು ಕಡೆ ರಸ್ತೆ ದಿಬ್ಬ ನಿರ್ಮಿಸುವುದು, 8 ಶಾಲಾ ಕೊಠಡಿಗಳು ಸೋರುತ್ತಿದ್ದೂ ಮಕ್ಕಳ ಸುರಕ್ಷತೆಗಾಗಿ ಉತ್ತಮ ಕೊಠಡಿಗಳನ್ನು ನಿರ್ಮಿಸಿಕೊಡ ಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.