ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪ್ರತಿಪತ್ ವಿಶೇಷವಾಗಿ ಸಂಕ್ರಮಣ: ಈ ದಿನ ಯಾರು ಸೂರ್ಯ ಮಂಡಲ ಸ್ತೋತ್ರವನ್ನು ಪಾರಾಯಣ ಮಾಡುತ್ತಾರೋ.. ಅವರಿಗೆ ಸರ್ವ ಪಾಪಗಳಿಂದ ವಿಮುಕ್ತಿ ಹೊಂದಿ ಅನುಗ್ರಹವಾಗುತ್ತದೆ. Astrology
ಮೇಷ ರಾಶಿ: ಅತ್ಯಂತ ಶುಭದಿನ.. ಧನಾರ್ಜನೆ ಉತ್ತಮವಾಗಿದೆ. ಸ್ವಲ್ಪ ರೀತಿಯ ಸಂದೇಹ, ಚಿಂತೆ, ಇವುಗಳನ್ನು ಮನಸ್ಸಿನಿಂದ ತೆಗೆಯಿರಿ. ಮೋಸ ಮಾಡುತ್ತಾರೆ ಎಚ್ಚರಿಕೆ, ಒಳ್ಳೆಯ ಸಂಬಂಧಗಳನ್ನು ಉಳಿಸಿಕೊಳ್ಳಿ. (ಪರಿಹಾರಕ್ಕಾಗಿ ಸೂರ್ಯ ಅಷ್ಟಕವನ್ನು ಪಾರಾಯಣ ಮಾಡಿ)
ವೃಷಭ ರಾಶಿ: ಶುಭ ಸೂಚನೆ, ಮನಸ್ಸಿನಲ್ಲಿ ಧರ್ಮ ಕಾರ್ಯದ ಬಗ್ಗೆ ಚಿಂತನೆ.. ಆಸಕ್ತಿ, ಅತಿಯಾದ ವಿಶ್ವಾಸ.. ಭಗವಂತನಲ್ಲಿ ಪ್ರೇಮ, ವಿದ್ಯೆಯಲ್ಲಿ ಆಸಕ್ತಿ, ದೈವ ಕಾರ್ಯಗಳಲ್ಲಿ ನಂಬಿಕೆ.. ಶುಭ ದಿವಸ.
(ಪರಿಹಾರಕ್ಕಾಗಿ ಸೂರ್ಯ ಮಂಡಲ ಸ್ತೋತ್ರವನ್ನು ಕೇಳಿ)
ಮಿಥುನ ರಾಶಿ: ವಿದ್ಯೆ ಕುಂಠಿತ, ಆದಾಯದಲ್ಲಿ ಬಹು ಭಾಗ ಖರ್ಚು.. ಅನಾವಶ್ಯಕ ಚಿಂತೆ, ಅವ್ಯವಸ್ಥೆ.. ಬರುವ ಹಣವು ಸಹ ಸ್ವಲ್ಪ ಸ್ವಲ್ಪವಾಗಿ ಬರುತ್ತದೆ.. ವಿದ್ಯಾರ್ಜನೆಯಲ್ಲಿ ಅಲ್ಪ ಲಾಭ, ಪ್ರಯತ್ನ ಸಾಲದು ಶುಭವಾಗುತ್ತದೆ. (ಪರಿಹಾರಕ್ಕಾಗಿ ಆದಿತ್ಯ ಹೃದಯಪಾರಾಯಣವನ್ನು ಮಾಡಿ ಅಥವಾ ಕೇಳಿಸಿಕೊಳ್ಳಿ)
ಕಟಕ ರಾಶಿ: ಶುಭ ದಿವಸ. ಆದರೆ ಸ್ವಲ್ಪ ಕಷ್ಟ. ಮನಸ್ಸಿನಲ್ಲಿ ಚಿಂತೆ, ಸೋಂಬೇರಿತನ. ಆಲಸ್ಯ ಏನಾಗುತ್ತದೆ ಎಂಬ ಭಯ. ಅಧ್ಯಯನ ಸಾಲದು, ಪೂರ್ಣ ಅಧ್ಯಯನ ಮಾಡಬೇಕೆಂಬ ಆಸೆ.. ಆದರೆ ಏಕಾಗ್ರ ಚಿತ್ತವಿಲ್ಲ. (ಪರಿಹಾರಕ್ಕಾಗಿ ಸೂರ್ಯ ಶತನಾಮ ಸ್ತೋತ್ರವನ್ನು ಕೇಳಿ)
ಸಿಂಹ ರಾಶಿ: ಅನಾವಶ್ಯಕ ಮಾತುಗಳು, ಅದೈರ್ಯದಿಂದ ಕೆಟ್ಟ ನಿರ್ಧಾರಗಳು, ಧೈರ್ಯ ಸಾಲದು.. (ಪರಿಹಾರಕ್ಕಾಗಿ ಸೂರ್ಯನಮಸ್ಕಾರವನ್ನು ಮಾಡಿ)
ಕನ್ಯಾ ರಾಶಿ: ಮನಸ್ಸು ಕೆಟ್ಟದ್ದನ್ನು ಆಲೋಚಿಸುತ್ತಿದೆ.. ಬಂಧು ಮಿತ್ರರೊಂದಿಗೆ ಕೆಟ್ಟದಾಗಿ ಚಿಂತಿಸಬೇಡಿ ಯೋಚಿಸಬೇಡಿ, ಅನುಕೂಲವಾಗುತ್ತದೆ ಆದರೆ ಕೆಲವು ಕೆಟ್ಟ ಸ್ವಭಾವಗಳನ್ನು ಬಿಡಬೇಕು. (ಪರಿಹಾರಕ್ಕಾಗಿ ಚಂದ್ರಶೇಖರ ಅಷ್ಟಕವನ್ನು ಕೇಳಿ)
ತುಲಾ ರಾಶಿ: ಚಿಂತೆಯಿಂದ ದೂರವಿರಿ, ಆರೋಗ್ಯವನ್ನು ಹುಷಾರಾಗಿ ನೋಡಿಕೊಳ್ಳಿ.. ಸಾಧ್ಯವಾದರೆ ದೇಹದಲ್ಲಿ ಇರುವ ಸಣ್ಣಪುಟ್ಟ ರೋಗಗಳಿಗೆ ಮೊದಲು ಔಷಧೋಪಚಾರ ಮಾಡಿಸಿ. (ಪರಿಹಾರಕ್ಕಾಗಿ ಧನ್ವಂತ್ರಿ ಮಂತ್ರವನ್ನು ಜಪ ಮಾಡಿ)
ವೃಶ್ಚಿಕ ರಾಶಿ: ಅನಾರೋಗ್ಯ, ಸ್ವಲ್ಪ ಸುಸ್ತು, ಧನದ ವ್ಯಯ, ವಿದ್ಯಾರ್ಜನೆ, ಸ್ವಲ್ಪ ಕಠಿಣ ಆದರು ಒಳ್ಳೆಯದಾಗುತ್ತದೆ.. ಚಿಂತಿಸಬೇಡಿ ಧನಾರ್ಜನೆ ಅನುಕೂಲವಿಲ್ಲ. (ಪರಿಹಾರಕ್ಕಾಗಿ ಪವಮಾನ ಪಾರಾಯಣವನ್ನು ಮಾಡಿಸಿ)
ಧನಸ್ಸು ರಾಶಿ: ಒಳ್ಳೆಯ ವಿಚಾರಗಳಿಗೆ ಆತ್ಮೀಯವಾಗಿ ಯೋಚಿಸುತ್ತೀರಿ. ಆದರೆ ಧರ್ಮ ಬುದ್ಧಿಯ ಚಿಂತನೆ ಕಮ್ಮಿಯಾಗಿದೆ, ಸ್ವಲ್ಪ ಬುದ್ಧಿವಂತರಾಗಿ, ಧರ್ಮದ ಕಡೆ ಒಲವು ಇರಲಿ, ಅನಾವಶ್ಯಕ ಚಿಂತೆ ಬೇಡ ಶುಭವಾಗುತ್ತದೆ. (ಪರಿಹಾರಕ್ಕಾಗಿ ಮನೆಯಲ್ಲಿ ನವಗ್ರಹ ಪೂಜೆ ಮಾಡಿಸಿ)
ಮಕರ ರಾಶಿ: ಅತಿಯಾಗಿ ಚಿಂತಿಸಬೇಡಿ ಹೋದ ಸಮಯ ವಾಪಸ್ ಆಗುವುದಿಲ್ಲ. ಈಗ ಏನು ಮಾಡಬೇಕು ಎಂಬುದನ್ನು ಯೋಚಿಸಿ, ನಿರಂತರ ಮನಸ್ಸಿಗೆ ತೊಂದರೆ ಕೊಡಬೇಡಿ.. ಚಿಂತೆಯಿಂದ ಯಾವುದು ಅನುಕೂಲವಾಗುವುದಿಲ್ಲ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಶ್ಲೋಕಗಳನ್ನು ಪಾರಾಯಣ ಮಾಡಿ ಅಥವಾ ಕೇಳಿಕೊಳ್ಳಿ)
ಕುಂಭ ರಾಶಿ: ಸ್ವಲ್ಪಮಟ್ಟಿನ ಅನಾನುಕೂಲ, ಅತಿಯಾದ ಆಹಾರ ಸೇವನೆ, ಆರೋಗ್ಯದ ಪರಿಸ್ಥಿತಿ ಸ್ವಲ್ಪ ಕೆಟ್ಟಿದೆ. ಎಚ್ಚರಿಕೆ ಹೊಟ್ಟೆಗೆ ಸಂಬಂಧಪಟ್ಟಂತಹ ರೋಗ ಬಾಧೆಗಳು, ಚೇತರಿಸಿಕೊಳ್ಳಿ, ಶುಭವಾಗುತ್ತದೆ. (ಪರಿಹಾರಕ್ಕಾಗಿ ನಾರಾಯಣನ ಸ್ಮರಣೆ ಮಾಡಿ)
ಮೀನ ರಾಶಿ: ಯಾವುದಾದರೂ ಏನು ಎಲ್ಲವನ್ನೂ ಮನಸ್ಸಿನಲ್ಲಿ ಯೋಚಿಸಿ ಕಾರ್ಯಪ್ರವೃತ್ತರಾಗಬೇಕು, ಇದೆ ವಿಶೇಷವಾದ ಲಕ್ಷಣ. ಶುಭವಾಗುತ್ತದೆ, ಅನಾರೋಗ್ಯ ಸ್ವಲ್ಪಮಟ್ಟಿನಲ್ಲಿ ಇರುತ್ತದೆ, ಯಾವುದು ತೊಂದರೆ ಇಲ್ಲ. (ಪರಿಹಾರಕ್ಕಾಗಿ ಗುರುಗಳ ದತ್ತಾತ್ರೇಯರ ಸ್ಮರಣೆ ಮಾಡಿ)
ರಾಹುಕಾಲ: 3-00 PMರಿಂದ 4-30PM
ಗುಳಿಕಕಾಲ: 12-00 PM ರಿಂದ 1-30PM
ಯಮಗಂಡಕಾಲ: 9-00AMರಿಂದ 10-30AM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ, ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572