ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ತದಿಗೆ ಜ.16. 2025 ಗುರುವಾರ| Astrology
ಮೇಷ ರಾಶಿ: ಸ್ವಲ್ಪ ಕೋಪ, ಮಾನಸಿಕವಾಗಿ ನೆಮ್ಮದಿ ಕಮ್ಮಿ, ಧನಾಗಮ ವಿಚಾರದಲ್ಲಿ ಅಧಿಕವಾದ ಆಸಕ್ತಿ.. ನಿಧಾನ ಸಂಪಾದನೆ, ಬರಬೇಕಾದ ಹಣವು ಸಹ ಬರುವುದಿಲ್ಲ. ಸ್ವಲ್ಪ ಕಷ್ಟ, ವಿದ್ಯಾರ್ಜನೆಗೆ ಶುಭ ಶುಭ ಕಾರ್ಯಗಳಲ್ಲಿ ಆಸಕ್ತಿ. (ಪರಿಹಾರಕ್ಕಾಗಿ ಆಂಜನೇಯನ ಪೂಜೆ ಮಾಡಿ)
ವೃಷಭ ರಾಶಿ: ಅಧಿಕವಾದ ತಿರುಗಾಟ_ ಮನಸ್ಸಿಗೆ ನೆಮ್ಮದಿ ಇಲ್ಲ. ಆದರೂ ಸಹ ಅನುಕೂಲವಾಗುತ್ತದೆ ಎಂಬ ಭರವಸೆ.. ಹತಾಶೆಯಿಂದ ಹೊರಬನ್ನಿ. ಗಮನ ಕೊಟ್ಟು ಮಾಡಿ ಶುಭವಾಗುತ್ತದೆ. (ಪರಿಹಾರಕ್ಕಾಗಿ ಬಾಲ ಗಣಪತಿಯನ್ನು ಆರಾಧನೆ ಮಾಡಿ)
ಮಿಥುನ ರಾಶಿ: ಅತ್ಯಂತ ಭಯ, ಕಾರ್ಯಗಳು ಆಗುತ್ತವೆಯೇ ಎಂಬ ನಿರಾಸೆ.. ಒಳ್ಳೆಯದಾಗುತ್ತದೆ ಆಸೆಯನ್ನು ಕಮ್ಮಿ ಮಾಡಿಕೊಳ್ಳಿ, ಉತ್ತಮವಾದ ವ್ಯವಹಾರಿಕ ಜ್ಞಾನವಿದೆ.. ಉಪಯೋಗಿಸಿಕೊಳ್ಳಿ ಎಲ್ಲ ರೀತಿಯಲ್ಲೂ ನಿಧಾನವಾಗಿ ಅನುಕೂಲವಾಗುತ್ತದೆ.. (ಪರಿಹಾರಕ್ಕಾಗಿ ಶಿವನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)
ಕಟಕ ರಾಶಿ: ಒಳ್ಳೆಯದಾಗಿದೆ ಮುಂದು ಒಳ್ಳೆಯದಾಗುತ್ತದೆ ಚಿಂತೆಯ ಅಗತ್ಯವಿಲ್ಲ.. ವಿದ್ಯಾರ್ಥಿಗಳಿಗೆ ಅನುಕೂಲ, ಧನಾರ್ಜನಗೆ ಶುಭವಾಗಿದೆ.. ಯೋಚನೆ ಮಾಡುವಾಗತ್ಯವಿಲ್ಲ, ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಿ. (ಪರಿಹಾರಕ್ಕಾಗಿ ಕೃಷ್ಣನನ್ನು ಆರಾಧನೆ ಮಾಡಿ)
ಸಿಂಹ ರಾಶಿ: ಎಲ್ಲ ಕಾರ್ಯದಲ್ಲೂ ಜಯ. ಆದರೆ ನೀವೇ ಮುನ್ನುಗ್ಗುತ್ತಿಲ್ಲ, ಮುನ್ನುಗ್ಗಿ ಕಾರ್ಯವನ್ನು ಮಾಡಿ ಒಳ್ಳೆಯದಾಗುತ್ತದೆ. ಶುಭಫಲಗಳನ್ನು ನಿರೀಕ್ಷಿಸಬಹುದು. (ಪರಿಹಾರಕ್ಕಾಗಿ ಶಿವನ ಮಂತ್ರವನ್ನು ಜಪ ಮಾಡಿ)
ಕನ್ಯಾ ರಾಶಿ: ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರ, ನಿರ್ಧಾರಗಳು ಚೆನ್ನಾಗಿದೆ ಆದರೆ ಸ್ವಲ್ಪ ದೃಢವಾಗಿ ನಿರ್ಧರಿಸಬೇಕು.. ಒಳ್ಳೆಯ ಪರಿಣಾಮಕ್ಕಾಗಿ ಇನ್ನಷ್ಟು ಆಲೋಚನೆ ಮಾಡಿ, ಕಾರ್ಯವನ್ನು ಸರಿ ತೂಗಿಸಿ. (ಪರಿಹಾರಕ್ಕಾಗಿ ಮಹಾಸರಸ್ವತಿಯ ಪೂಜೆಯನ್ನು ಮಾಡಿಸಿ)
ತುಲಾ ರಾಶಿ: ವಿದ್ಯೆ ಗೋಸ್ಕರ ಕಷ್ಟಪಟ್ಟು ಶ್ರಮಿಸಬೇಕು. ನಿರಂತರ ಓದಬೇಕು, ಶ್ರಮವಹಿಸಿ ಓದಿದರೆ ಅನುಕೂಲವಾಗುತ್ತದೆ. ಧನಾಗಮದಲ್ಲೂ ಅತ್ಯಂತ ಶುಭವಾಗಿದೆ.. ಅತಿಯಾದ ಕೋಪ ಕಮ್ಮಿ ಮಾಡಿಕೊಳ್ಳಿ. (ಪರಿಹಾರಕ್ಕಾಗಿ ಆಂಜನೇಯನ ಪೂಜೆ ಮಾಡಿ )
ವೃಶ್ಚಿಕ ರಾಶಿ: ಎಲ್ಲಾ ರೀತಿಯಲ್ಲೂ ಉತ್ತಮವಾದ ಭವಿಷ್ಯ.. ಯೋಚನೆಯು ಫಲ ಕೊಡುತ್ತದೆ, ಸಾಧನೆ ಬಹಳವಾಗಿ ಬೇಕಾಗುತ್ತದೆ.. ಚಿಂತಿಸಿ ಪುನಃ ಪುನಃ ಪ್ರಯತ್ನ ಮಾಡಿ, ಸಾಧಿಸಿ, ಒಳ್ಳೆಯದಾಗುತ್ತದೆ. ವಿದ್ಯಾರ್ಥಿಗಳು ಸ್ವಲ್ಪ ಗಮನ ಕೊಟ್ಟು ಓದಬೇಕು. (ಪರಿಹಾರಕ್ಕೆ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)
ಧನಸ್ಸು ರಾಶಿ: ಒಳ್ಳೆಯ ವಿಚಾರಗಳನ್ನು ಕಲಿಯುತ್ತಿರಿ.. ಮಕ್ಕಳ ಜೊತೆ ಆಟವಾಡಿ, ಕೆಲವು ನೋವುಗಳನ್ನು ಮರೆಯಬೇಕು. ಪ್ರಯತ್ನ ಮಾಡಿ ದುಡ್ಡಿನ ತೊಂದರೆ ಸ್ವಲ್ಪ ಜಾಸ್ತಿ ಇರುತ್ತದೆ. ಬರಬೇಕಾದ ಹಣವು ಬರುವುದು ನಿಧಾನ, ಅನುಸರಿಸಬೇಕು. (ಪರಿಹಾರಕ್ಕಾಗಿ ನರಸಿಂಹನನ್ನು ಪೂಜೆ ಮಾಡಿ)
ಮಕರ ರಾಶಿ: ಕೆಲಸ ಕಾರ್ಯಗಳಲ್ಲಿ ತೊಂದರೆ. ಜೀವನದಲ್ಲಿ ಅತಿಯಾದ ಆಸೆ. ಅತಿಯಾದ ನಂಬಿಕೆ. ಇದನ್ನು ಸ್ವಲ್ಪ ಕಮ್ಮಿ ಮಾಡಿಕೊಳ್ಳಿ, ವ್ಯವಹರಿಸುವಾಗ ಎಚ್ಚರ. ಆದರೆ ಎಲ್ಲದಕ್ಕೂ ಸಮಯ ಬರಬೇಕು. ನಿಧಾನವಾಗಿ ಕಾಯಿರಿ, ಅನುಕೂಲವಾಗುತ್ತದೆ. (ಪರಿಹಾರಕ್ಕಾಗಿ ದತ್ತಾತ್ರೇಯರ ಆರಾಧನೆ ಮಾಡಿ)
ಕುಂಭ ರಾಶಿ: ಒಳ್ಳೆಯದಾಗಿದೆ ಆದರೆ ಈ ಸಮಯದಲ್ಲಿ ಸ್ವಲ್ಪ ನಿಧಾನವಾಗುತ್ತದೆ. ಮಾಡಿದ ಕೆಲಸಗಳು ಪ್ರತಿಫಲವನ್ನು ಸ್ವಲ್ಪ ನಿಧಾನವಾಗಿ ಕೊಡುತ್ತವೆ, ಸಮಯ ಬರಬೇಕು ಕಾಯಿರಿ. (ಪರಿಹಾರಕ್ಕಾಗಿ ವೈಷ್ಣವಿ ದೇವಿಯನ್ನು ಆರಾಧನೆ ಮಾಡಿ)
ಮೀನ ರಾಶಿ: ಸ್ವಲ್ಪ ಯೋಚನೆ ಜೊತೆಗೆ ನಿರಾಸೆ ಇದರಿಂದ ಹೊರಗೆ ಬರಬೇಕಾದರೆ ಧ್ಯಾನ ಬಹಳ ಅವಶ್ಯ, ಚಿಂತೆ ಮಾಡಬೇಡಿ ಎಲ್ಲ ಬಂಧುಬಾಂಧವರೊಡನೆ ಕೂಡಿಕೊಂಡು ಆನಂದವಾಗಿ ಪ್ರವಾಸ ಹೋಗಿಬನ್ನಿ.. (ಪರಿಹಾರಕ್ಕಾಗಿ ಧನ್ವಂತ್ರಿ ವಿಷ್ಣು ವನ್ನು ಆರಾಧನೆ ಮಾಡಿ)
ರಾಹುಕಾಲ: 1-30PM ರಿಂದ 3-00PM
ಗುಳಿಕಕಾಲ: 9-00AM ರಿಂದ 10-30 AM
ಯಮಗಂಡಕಾಲ: 6-00AMರಿಂದ 7-30AM
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572