ಬಳ್ಳಾರಿ: ವಿದ್ಯುತ್ ಉಪಕರಣಗಳಿಗೆ ಕಳ್ಳತನದಿಂದ (Electricity Theft) ವಿದ್ಯುತ್ ಉಪಯೋಗಿಸಿ ಅನಧೀಕೃತ ಲಾಭ ಪಡೆದು ಜೆಸ್ಕಾಂ ಕಂಪನಿಗೆ ಹಾನಿ ಮಾಡಿರುವುದರಿಂದ, ಪೂರ್ಣಿಮ ಎಂಟರ್ ಪ್ರೈಸಸ್ ನ ಮಾಲೀಕರಿಗೆ ರೂ.18,02,951/- ದಂಡ ವಿಧಿಸಿ ಇಲ್ಲಿನ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ ಅವರು ಆದೇಶಿಸಿದ್ದಾರೆ.
ಏಳುಬೆಂಚಿಯ ಆರ್‌ಒ ಪ್ಲಾಂಟ್ ನ ಪೂರ್ಣಿಮ ಎಂಟರ್ ಪ್ರೈಸಸ್ ನ ಮಾಲೀಕರಾದ ಅಮರೇಶ್ವರ ಶಾಸ್ತ್ರಿ ಇವರಿಗೆ ಮಂಜೂರಾದ ಹಾಲಿ ವಿದ್ಯುತ್ ಮಾಪಕವನ್ನು ಬೈಪಾಸ್ ಮಾಡಿಕೊಂಡು ಅನಧಿಕೃತವಾಗಿ ತಮ್ಮ ಇಂಡಸ್ಟ್ರಿ ಕಳ್ಳತನ ಆರೋಪ ಎದುರಿಸಿದೆ.
ಇಲ್ಲಿ ವಿದ್ಯುತ್ ಉಪಕರಣಗಳಿಗೆ ಕಳ್ಳತನದಿಂದ ವಿದ್ಯುತ್ ಉಪಯೋಗಿಸಿ ಅನಧೀಕೃತ ಲಾಭ ಪಡೆದು ಜೆಸ್ಕಾಂ ಕಂಪನಿಗೆ ಹಾನಿ ಮಾಡಿರುವುದರಿಂದ ರೂ.18,02,951/- ದಂಡ ಮತ್ತು ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ವಿಧಿಸಿ ಇಲ್ಲಿನ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ ಅವರು ಆದೇಶಿಸಿದ್ದಾರೆ.
2022ರ ಆ.18 ರಂದು ಬೆಳಿಗ್ಗೆ 10.39 ಗಂಟೆಗೆ ಜೆಸ್ಕಾಂ ಜಾಗೃತ ದಳದ ಎಇ ಕೆ.ಗಾದಿಲಿಂಗಪ್ಪ ತಮ್ಮ ಸಿಬ್ಬಂದಿಯವರೊಂದಿಗೆ ವಿವಿಧೆಡೆ ವಿದ್ಯುತ್ ಕಳ್ಳತನ ಪ್ರಕರಣ ಪತ್ತೆಗಾಗಿ ಹೋದಾಗ ಕಂಡುಬಂದಿದ್ದು, ಇವರ ಮೇಲೆ ಕ್ರಮ ಕೈಗೊಳ್ಳಲು ಮುದ್ದೆ ಮಾಲುನೊಂದಿಗೆ ಜೆಸ್ಕಾಂ ಇಲಾಖೆಯವರು ಲಿಖಿತ ದೂರು ನೀಡಿದ್ದರು.
ಪ್ರಕರಣದ ಸಾಕ್ಷಿದಾರರ ವಿಚಾರಣೆಯಿಂದ ಹಾಗೂ ತನಿಖೆಯಿಂದ ಆರೋಪಿತರ ವಿರುದ್ಧ ಆರೋಪ ಸಾಬಿತಾಗಿದ್ದರಿಂದ ಕಲಂ: 135(1) ವಿದ್ಯುತ್ ಅಧಿನಿಯಮ 2003 ರ ರೀತ್ಯ ನ್ಯಾಯಾಲಯಕ್ಕೆ ಈ ದೋಷಾರೋಪಣ ಪತ್ರ ಸಲ್ಲಿಸಿಕೊಂಡಿರುತ್ತದೆ.
ಪ್ರಕರಣದಲ್ಲಿ ಸಾಕ್ಷ್ಯ ವಿಚಾರಣೆಯಾದ ನಂತರ ಆರೋಪ ಸಾಬೀತಾಗಿದ್ದರಿಂದ ನ್ಯಾಯಾಲಯವು ಆರೋಪಿ ಅಮರೇಶ್ವರ ಶಾಸ್ತ್ರಿ ಗೆ ಜ.20 ರಂದು ತೀರ್ಪು ನೀಡಿದೆ.
ತನಿಖಾಧಿಕಾರಿ ಆರ್.ಗಾಯತ್ರಿ ಪಿ.ಐ., ಜೆಸ್ಕಾಂ ಜಾಗೃತದಳರವರು ದೋಷಾರೋಪಣ ಪತ್ರ ಸಲ್ಲಿಸಿದ್ದರು. ಬಿ.ಜೆ.ರೆಹಮಾನ್, ಪಿ.ಸಿ. ಸಾಕ್ಷಿಗಳ ವಿಚಾರಣೆ ಕಾಲಕ್ಕೆ ಸಹಕರಿಸಿದ್ದರು.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಶೇಖರಪ್ಪ ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದರು.