ನವದೆಹಲಿ (OPERATION SINDOOR): ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಅಮಾಯಕರ ಹತ್ಯೆ ಘಟನೆ ದೇಶವಾಸಿಗಳಲ್ಲಿ ರಕ್ತ ಕುದಿಯುವಂತೆ ಮಾಡಿದೆ.
ಈ ಆಕ್ರೋಶದ ಬೆನ್ನಲ್ಲೇ ಭಾರತೀಯ ಸೇನೆಯು ಮಂಗಳವಾರ ತಡರಾತ್ರಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ನಿರ್ದಿಷ್ಟ ದಾಳಿ ನಡೆಸಿದೆ. ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.
ಈ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ” ಎಂದು ಹೆಸರಿಡಲಾಗಿದೆ.
ವರದಿಗಳ ಪ್ರಕಾರ ಭಾರತೀಯ ಸೇನೆಯ ವಿವಿಧ ಘಟಕಗಳು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಬಹವಲ್‌ಪುರ, ಮುರಿಡ್ಕೆ, ಸಿಯಾಲ್‌ಕೋಟ್ ಮುಂತಾದ 9 ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿವೆ ಎಂದು ತಿಳಿದು ಬಂದಿದೆ.
ದಾಳಿ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತ್ ಮಾತಾಕಿ ಜೈ ಎಂದು ಟ್ವಿಟ್ ಮಾಡಿದ್ದಾರೆ.
ದೇಶಾದ್ಯಂತ ಬುಧವಾರದಿಂದ ಮಾಕ್ ಡ್ರಿಲ್’ನ ಸೈರನ್ ಸದ್ದು ಮಾಡಲಿದೆ.
ಕೇಂದ್ರ ಗೃಹ ಸಚಿವಾಲಯದ ಗುರುತಿಸಿರುವ ಕರ್ನಾಟಕದ ಮೂರು ಜಿಲ್ಲೆಗಳೂ ಸೇರಿದಂತೆ ದೇಶಾದ್ಯಂತ 244 ಜಿಲ್ಲೆಗಳಲ್ಲಿ ಬುಧವಾರದಿಂದ ಒಂದು ವಾರಗಳ ಕಾಲ ಮಾಕ್ ಡ್ರಿಲ್ಡ್ ನಡೆಯಲಿದೆ.
ಈ ವೇಳೆ ತುರ್ತು ಪರಿಸ್ಥಿತಿ ಸಮಯದ ಸೈರನ್ ಮೊಗಳುವುದು ಮಾತ್ರ ವಲ್ಲದೇ, ಯುದ್ಧ ಸಮಯದಲ್ಲಿ ಎದುರಾಗ ಬಹುದಾದ ಸವಾಲುಗಳನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕು ಎನ್ನುವ ಬಗ್ಗೆಯೂ ಸಾರ್ವಜನಿಕರಿಗೆ ನಿಗದಿತ ಸ್ಥಳದಲ್ಲಿ ತರಬೇತಿ ದೊರಕಲಿದೆ.