Astrology: ಶುಕ್ರವಾರ, ಮೇ 16, 2025, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ: ಸಣ್ಣ ವ್ಯಾಪಾರ ಕಂಪನಿಗಳಲ್ಲಿ ಕೆಲಸ ಮಾಡುವವರು ಜಾಗರೂಕರಾಗಿರಿ. ನಿಮ್ಮ ಸಹೋದ್ಯೋಗಿಗಳು ನಿಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಬಹುದು ಎಚ್ಚರಿಕೆ ವಹಿಸಿ. (ಭಕ್ತಿಯಿಂದ ಶ್ರೀ ಅರ್ಧನಾರೀಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಷಭ ರಾಶಿ: ಮಕ್ಕಳ ಮೇಲೆ ನಿಮ್ಮ ಅಭಿಪ್ರಾಯವನ್ನು ಬಲವಂತವಾಗಿ ಹೇರುವುದು ಅವರಿಗೆ ಕಿರಿಕಿರಿ ಉಂಟು ಮಾಡಬಹುದು. ಅವರು ಅದನ್ನು ಒಪ್ಪಿಕೊಳ್ಳುವಂತೆ ಅರ್ಥ ಮಾಡಿಸುವುದು ಉತ್ತಮ. (ಭಕ್ತಿಯಿಂದ ಶ್ರೀ ಕೇದಾರನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮಿಥುನ ರಾಶಿ: ಕೆಲವರು ನಿವಾಸ ಅಥವಾ ಕಚೇರಿಯನ್ನು ಬದಲಾಯಿಸುವ ಸಾಧ್ಯತೆಯಿದೆ. ನಿಮ್ಮ ಸಲಹೆಗಾರರ ಆಲೋಚನೆಗಳನ್ನು ಕಾರ್ಯಗತಗೊಳಿಸುತ್ತೀರಿ. (ಭಕ್ತಿಯಿಂದ ಶ್ರೀ ಕಾಲಭೈರವೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕಟಕ ರಾಶಿ: ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಮೂಡಲಿದೆ. ಕೆಲವರು ಸಾಲದಿಂದ ಮುಕ್ತರಾಗುವ ಸಾಧ್ಯತೆಯಿದೆ. (ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಸಿಂಹ ರಾಶಿ: ಕೆಲಸದ ಸ್ಥಳದಲ್ಲಿ ಉನ್ನತ ಹುದ್ದೆಗೆ ಬಡ್ತಿ ಪಡೆಯುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಸ್ವಲ್ಪ ಹೆಚ್ಚು ಕೆಲಸ ಮಾಡಿದರೆ ಅವರ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. (ಭಕ್ತಿಯಿಂದ ಶ್ರೀ ಉಮಾ ಮಹೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕನ್ಯಾ ರಾಶಿ: ನಿಮ್ಮ ಕುಟುಂಬ ಸದಸ್ಯ ರೊಂದಿಗೆ ನೀವು ಘರ್ಷಣೆಯನ್ನು ಬೆಳೆಸಿಕೊಳ್ಳದಂತೆ ನೋಡಿಕೊಳ್ಳಿ. ಆರ್ಥಿಕ ಬಿಕ್ಕಟ್ಟು ಎದುರಾಗಬಹುದು ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ. (ಭಕ್ತಿಯಿಂದ ಮನೋ ನಿಯಾಮಕ ಶ್ರೀ ರುದ್ರ ದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)
ತುಲಾ ರಾಶಿ: ಇಂದು ಹಣಕಾಸಿನ ತೊಂದರೆಗಳು ನಿಮ್ಮಿಂದ ದೂರವಾಗುತ್ತವೆ. ಇತರ ಜನರ ಸಲಹೆಗಳನ್ನು ಆಲಿಸಿ,ಕೆಲಸ ಮಾಡುವುದು ಒಳ್ಳೆಯದು. (ಭಕ್ತಿಯಿಂದ ಶ್ರೀ ತ್ರ್ಯಂಬಕೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಶ್ಚಿಕ ರಾಶಿ: ಇಂದು ನಿಮ್ಮ ಖರ್ಚುಗಳಲ್ಲಿ ತುಂಬಾ ಅದ್ದೂರಿ ಯಾಗಿರದಿರಲು ಪ್ರಯತ್ನಿಸಿ. ನಿಮ್ಮ ಕುಟುಂಬದೊಂದಿಗೆ ಕಠಿಣವಾಗಿ ವರ್ತಿಸಬೇಡಿ. ಇದು ಶಾಂತಿಯನ್ನು ಹಾಳುಮಾಡಬಹುದು. (ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಧನಸ್ಸು ರಾಶಿ: ಬಿಡುವಿನ ವೇಳೆಯಲ್ಲಿ ಕೆಲವು ಆಧ್ಯಾತ್ಮಿಕ ಪುಸ್ತಕಗಳನ್ನು ಓದಬೇಕು. ಹೀಗೆ ಮಾಡುವುದರಿಂದ ನಿಮ್ಮ ಅನೇಕ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು. (ಭಕ್ತಿಯಿಂದ ಶ್ರೀ ಮೃತ್ಯುಂಜಯ ರುದ್ರ ದೇವರ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಮಕರ ರಾಶಿ: ಉದ್ಯಮಿಗಳು ದೊಡ್ಡ ಹೂಡಿಕೆಗಳನ್ನು ತಪ್ಪಿಸಬೇಕು.ರೈತರಿಗೆ ಇಂದು ಹೆಚ್ಚಿನ ಆದಾಯ ಸಿಗಲಿದೆ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)
ಕುಂಭ ರಾಶಿ: ಇಂದು ವ್ಯವಹಾರದಲ್ಲಿ ಹೆಚ್ಚು ಲಾಭ ಗಳಿಸುವುದು ಹೇಗೆ ಎಂದು ನಿಮ್ಮ ಹಳೆಯ ಸ್ನೇಹಿತರೊಬ್ಬರು ನಿಮಗೆ ಸಲಹೆ ನೀಡಬಹುದು. ನೀವು ಅವರ ಸಲಹೆಯನ್ನು ಅನುಸರಿಸಿದರೆ ಅದೃಷ್ಟವಂತರಾಗುತ್ತೀರಿ. (ಭಕ್ತಿಯಿಂದ ಶ್ರೀ ಸೋಮೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮೀನ ರಾಶಿ: ತಪ್ಪು ಸಂವಹನ ಅಥವಾ ಸಂದೇಶವು ನಿಮ್ಮ ದಿನವನ್ನು ಮಂದಗೊಳಿಸಬಹುದು. ಯಾರಿಗಾದರೂ ಕೆಲಸ ನೀಡಿದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕು. (ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಒಳಿತಾಗುವುದು.)
ರಾಹುಕಾಲ: 10:30 ರಿಂದ 12:00
ಗುಳಿಕಕಾಲ: 07:30 ರಿಂದ 09:00
ಯಮಗಂಡಕಾಲ: 03:00 ರಿಂದ 04:30