ದೊಡ್ಡಬಳ್ಳಾಪುರ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಅಂತೆಯೇ ದೊಡ್ಡಬಳ್ಳಾಪುರ ತಾಲೂಕಿನಾಧ್ಯಂತ ರಾತ್ರಿಯಿಡೀ 22.82 ಮಿಮೀ ಮಳೆ (Rain) ಸುರಿದಿದೆ.
ಭಾನುವಾರ ರಾತ್ರಿ ಬಳಿಕ ಶುರುವಾದ ಮಳೆ ಇಡೀ ರಾತ್ರಿ ಒಂದೇಸಮನೆ ಸುರಿಯಿತು. ಇಂದು ಬೆಳಿಗ್ಗೆಯೂ ಜಿಟಿ ಜಿಟಿ ಮಳೆ ಮುಂದುವರಿದಿದೆ.
ವರುಣನ ಅವಾಂತರಕ್ಕೆ ಜನಜೀವನ ಆಸ್ತವ್ಯಸ್ತವಾಗಿದೆ. ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಯಲ್ಲಿ ನೀರು ನಿಂತಲ್ಲೇ ನಿಂತು ವಾಹನ ಸವಾರರು ಪರದಾಡುವಂತಾಗಿದೆ.
ವರದಿ ಅನ್ವಯ ಕಸಬಾ ಹೋಬಳಿಯಲ್ಲಿ 25.30 ಮಿಮೀ, ದೊಡ್ಡಬೆಳವಂಗಲ ಹೋಬಳಿಯಲ್ಲಿ 18.90 ಮಿಮೀ, ಮಧುರೆ ಹೋಬಳಿಯಲ್ಲಿ ಅತಿ ಹೆಚ್ಚು 38.90 ಮಿಮೀ, ತೂಬಗೆರೆ ಹೋಬಳಿಯಲ್ಲಿ 16.10 ಮಿಮೀ, ಸಾಸಲು ಹೋಬಳಿಯಲ್ಲಿ 14.90 ಮಿಮೀ ಸೇರಿದಂತೆ ಒಟ್ಟು 22.82 ಮಿಮೀ ಮಳೆಯಾಗಿದೆ.
ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಕೆರೆ ಏರಿಯ ಮೇಲಿನ ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ತುಂಬಿ ವಾಹನ ಸವಾರರು ಪರದಾಡುವಂತಾಗಿದೆ.